Saturday, March 7, 2026

ಬೆಂಗಳೂರು

ಉಡುಪಿಕುಂದಾಪುರಜಿಲ್ಲೆಬೆಂಗಳೂರುರಾಜಕೀಯರಾಜ್ಯಸುದ್ದಿ

ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕ ಅಜಿತ್‌ ಪವಾರ್‌ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ -ಕಹಳೆ ನ್ಯೂಸ್

ಬೆಂಗಳೂರು: ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಜಿತ್‌ ಪವಾರ್‌, ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕರಾಗಿದ್ದರು. ಜನರ ಮಧ್ಯೆ ಇರುವ ನಾಯಕನಾಗಿ ಜನಾನುರಾಗಿ ಹೆಸರಾಗಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಬಣ್ಣಿಸಿದರು. ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಸಚಿವರು, ಮಹಾರಾಷ್ಟ್ರಕ್ಕೆ ಗಡಿ ಭಾಗದಲ್ಲಿರುವ ಕಾರಣ ಬೆಳಗಾವಿಯಲ್ಲಿ ಅಜಿತ್‌ ಪವಾರ್‌ ಅವರ ಅನುಯಾಯಿಗಳು ಸಾಕಷ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ, ನೀರಾವರಿ, ಕೈಗಾರಿಕಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಅಜಿತ್‌ ಪವಾರ್‌,...
ದೆಹಲಿಬೆಂಗಳೂರುರಾಜಕೀಯರಾಜ್ಯಸುದ್ದಿ

ಇಂದು 2026-27ನೇ ಸಾಲಿನ ಬಜೆಟ್ ಅಧಿವೇಶನ ಆರಂಭ -ಕಹಳೆ ನ್ಯೂಸ್

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಇಂದು ಪ್ರಾರಂಭವಾಗಲಿದೆ. ಎಕನಾಮಿಕ್ ಸರ್ವೆ ಆಫ್ ಇಂಡಿಯಾ ಜನವರಿ 29 ರಂದು ಮಂಡನೆಯಾಗಲಿದ್ದು, 2026-27ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುವುದು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸಿದ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆಯ ದಾಖಲೆಯು ಆರ್ಥಿಕತೆಯ ಸ್ಥಿತಿ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಜ.29ಕ್ಕೆ ಕೆಎಸ್‌ಆರ್‌ಟಿಸಿ ಮುಷ್ಕರ: ‘ನೋ ವರ್ಕ್ ನೋ ಪೇ’ ಆದೇಶ -ಕಹಳೆ ನ್ಯೂಸ್

ಬೆಂಗಳೂರು: ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಜ.29ರಂದು 'ಬೆಂಗಳೂರು ಚಲೋ' ಮುಷ್ಕರಕ್ಕೆ ಕರೆ ನೀಡಿದೆ. ಆದರೆ, ಇದಕ್ಕೆ 1 ದಿನ ಮೊದಲೇ (ಮಂಗಳವಾರ) ಕೆಎಸ್​​​ಆರ್​​ಟಿಸಿ ಮಹತ್ವದ ಆದೇಶ ಹೊರಡಿಸಿದ್ದು ಕೆಎಸ್‌ಆರ್‌ಟಿಸಿ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲ ಸೂಚಿಸುವಂತಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ. ಒಂದು ವೇಳೆ ಜ.29...
ಬೆಂಗಳೂರುರಾಜ್ಯಸುದ್ದಿ

ಡಿಕೆಶಿಗೆ ಟವೆಲ್‌ನಲ್ಲಿ ಪೇಟ ಕಟ್ಟಿದ ಸಿಎಂ!-ಕಹಳೆ ನ್ಯೂಸ್

ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರ ತಲೆಗೆ ಸಿಎಂ ಸಿದ್ದರಾಮಯ್ಯ ಅವರು ಟವೆಲ್‌ನಲ್ಲಿ ಪೇಟ ಸುತ್ತಿದ್ದಾರೆ. ಹೆಗಲ ಮೇಲೆ ಇದ್ದ ಟವೆಲ್‌ನ್ನು ಮೊದಲು ಸಿಎಂ ಸಿದ್ದರಾಮಯ್ಯ ಅವರು ತಲೆಗೆ ಕಟ್ಟಿಕೊಂಡರು. ಅದನ್ನು ಸುರ್ಜೇವಾಲ ಅವರು ಸಹ ತಲೆಗೆ ಟವೆಲ್‌ ಸುತ್ತಿಕೊಂಡರು. ಬಳಿಕ ಭಾಷಣ ಮುಗಿಸಿ ಬಂದ ಡಿಕೆಶಿ ಅವರ ತಲೆಗೆ ಸುರ್ಜೇವಾಲ ಅವರು ಟವೆಲ್‌...
ಕ್ರೈಮ್ಬೆಂಗಳೂರುರಾಜ್ಯವಾಣಿಜ್ಯಸುದ್ದಿ

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆ : ಏಜೆನ್ಸಿ ಸಿಬ್ಬಂದಿಯಿಂದ 1.40 ಕೋಟಿ ಲೂಟಿ- ಕಹಳೆ ನ್ಯೂಸ್

ಬೆಂಗಳೂರು: ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಹಾಗೂ ಇತರರಿಂದ ನಡೆದಿದ್ದ ರಾಬರಿ  ಪ್ರಕರಣ ಮಾಸುವ ಮುನ್ನ ಮತ್ತೊಂದು ಪೇಮೆಂಟ್ ಸರ್ವಿಸ್ ಕಂಪನಿ ಸಿಬ್ಬಂದಿಯಿಂದ ಎಡವಟ್ಟು ನಡೆದಿರುವುದು ಬೆಳಕಿಗೆ ಬಂದಿದೆ. ಹಿಟಾಚಿ ಕಂಪನಿಯ ಸಿಬ್ಬಂದಿಗಳು ಎಟಿಎಂಗೆ (ATM) ತುಂಬಲು ತೆಗೆದುಕೊಂಡಿದ್ದ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ನಾಲ್ಕು ಮಂದಿಯ ಒಂದು ಟೀಂ 50 ಲಕ್ಷ ರೂ. ಹಣ ತಗೆದುಕೊಂಡು ಹೋಗಿದ್ದರೆ ಮೂರು ಜನರ ಮತ್ತೊಂದು ತಂಡ 80 ಲಕ್ಷ ರೂ. ಹಣ ತಗೆದುಕೊಂಡು...
ಬೆಂಗಳೂರುರಾಜ್ಯಸಿನಿಮಾಸುದ್ದಿ

ಹೌಸ್​ಫುಲ್ ಪ್ರದರ್ಶನ ಕಂಡ ‘ಕಲ್ಟ್’ ಸಿನಿಮಾ – ಕಹಳೆ ನ್ಯೂಸ್

ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಜನವರಿ 23ರಂದು ಬಿಡುಗಡೆ ಆಯಿತು. ಈ ಸಿನಿಮಾಗೆ ಅನಿಲ್ ಕುಮಾರ್ ಅವರು ನಿರ್ದೇಶನ ಮಾಡಿದ್​ದಾರೆ. ಝೈದ್ ಖಾನ್ ಅವರ ಜೊತೆ ರಚಿತಾ ರಾಮ್ , ಮಲೈಕಾ ವಸುಪಾಲ್, ರಂಗಾಯಣ ರಘು, ಅಚ್ಯುತ್ ಕುಮಾರ್, ಕಿಶನ್ ಬಿಳಗಲಿ ಮುಂತಾದವರು ನಟಿಸಿದ್ದಾರೆ. ಜನವರಿ 23ರಂದು ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್ ಆಯಿತು. ಝೈದ್ ಖಾನ್ , ಮಲೈಕಾ ಅವರು...
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು : ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಣೆ- ಕಹಳೆ ನ್ಯೂಸ್

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತುಪಡಿಸಿದ ತನಿಖಾ ತಂಡಕ್ಕೆ 25 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ. ತನಿಖಾ ತಂಡದ 30 ಅಧಿಕಾರಿ, ಸಿಬ್ಬಂದಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ದನ್, ಶೋಭಾ ಜಿ, ಸುಮಾರಾಣಿ, ಹೇಮಂತ್...
ಬೆಂಗಳೂರುರಾಜ್ಯಸುದ್ದಿ

ಮಹಿಳೆ ಬಿಟ್ಟು ಹೋಗಿದ್ದ ಪರ್ಸ್, ಐಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ – ಕಹಳೆ ನ್ಯೂಸ್

ಬೆಂಗಳೂರು: ಮಹಿಳೆ ಬಿಟ್ಟು ಹೋಗಿದ್ದ ಪರ್ಸ್, ಐಫೋನ್ ತಂದು ಕೊಟ್ಟ ಆಟೋ ಡ್ರೈವರ್ (Auto Driver) ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ರ‍್ಯಾಪಿಡೊ ಮೂಲಕ ಆಟೋ ಬುಕ್ ಮಾಡಿದ್ದರು. ಪ್ರಯಾಣಿಸಿದ ನಂತರ ಪರ್ಸ್ ಹಾಗೂ ಐಫೋನ್ ಮರೆತು ಆಟೋ ಇಳಿದು ಹೋಗಿದ್ದರು. ಇದಾದ ಕೆಲ ಹೊತ್ತಿನ ನಂತರ ಪರ್ಸ್ ಮತ್ತು ಮೊಬೈಲ್ ಮರೆತಿರೋದು ಗೊತ್ತಾಗಿ ಠಾಣೆಗೆ ಮಾಹಿತಿ ನೀಡಿದ್ದರು....
1 2 3 4 5 6 211
Page 4 of 211