ನ.1ರಿಂದ ಬೆಂಗಳೂರಿನ ‘ನಮ್ಮ ಮೆಟ್ರೋ ಹಳದಿ ಮಾರ್ಗ’ದಲ್ಲಿ ಪ್ರತಿ ’15 ನಿಮಿಷ’ಕ್ಕೊಂದು ರೈಲು ಸಂಚಾರ -ಕಹಳೆನ್ಯೂಸ್
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ನವೆಂಬರ್.1ರಿಂದ ಹೆಚ್ಚುವರಿಯಾಗಿ ಐದು ರೈಲುಗಳು ವಾಣಿಜ್ಯ ಸಂಚಾರ ಆರಂಭಿಸಲಿವೆ. ಹೀಗಾಗಿ ಪ್ರತಿ 15 ನಿಮಿಷಕ್ಕೊಂದು ರೈಲುಗಳು ಸಂಚರಿಸಲಿವೆ. ಈ ಕುರಿತಂತೆ ಬಿಎಂಆರ್ ಸಿ ಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯೋತ್ಸವದ ೭೦ನೇ ವರ್ಷದ ಆಚರಣೆಯ ಸಂದರ್ಭದಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL), ದಿನಾಂಕ 1ನೇ ನವೆಂಬರ್ 2025ರಿಂದ ಹಳದಿ ಮಾರ್ಗದಲ್ಲಿ ಐದನೇ ಮೆಟ್ರೋ ರೈಲನ್ನು...







