Saturday, March 7, 2026

ಬೆಂಗಳೂರು

ಬೆಂಗಳೂರು

ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆದಿತ್ಯ ಆಳ್ವಾ ಸಿಸಿಬಿ ವಶ-ಕಹಳೆ ನ್ಯೂಸ್

ಬೆಂಗಳೂರು: ಮಾದಕ ದ್ರವ್ಯ ಪ್ರಕರಣದ ಆರೋಪಿ ಆದಿತ್ಯ ಆಳ್ವಾನನ್ನು ವಿಚಾರಣೆಗೆ ಗುರಿಪಡಿಸುವ ಸಂಬಂಧ ಜನವರಿ 22ವರೆಗೆ ಸಿಸಿಬಿ ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ. ಆದಿತ್ಯ ಆಳ್ವಾ ಮಾದಕ ದ್ರವ್ಯ ಪ್ರಕರಣದ ಆರನೇ ಆರೋಪಿಯಾಗಿದ್ದು ಇತ ಪ್ರಕರಣ ಬೆಳಕಿಗೆ ಬಂದ ಬಳಿಕ 130 ದಿನಗಳ ಕಾಲ ತಲೆಮಾರೆಸಿಕೊಂಡಿದ್ದ. ಚೆನ್ನೈ ಹೊರವಲಯದ ರೆಸಾರ್ಟ್‍ನಲ್ಲಿ ಅಂತಿಮವಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಇತ ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಜೀವರಾಜ್ ಆಳ್ವಾ ಅವರ ಮಗನಾಗಿದ್ದಾನೆ....
ಬೆಂಗಳೂರು

ಕೋವಿಡ್ ಲಸಿಕೆ ವಿತರಣೆ ಬಗ್ಗೆ ಸಿದ್ಧರಾಮಯ್ಯ ಪ್ರತಿಕ್ರಿಯೆ — ಕಹಳೆ ನ್ಯೂಸ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ದೇಶಾದ್ಯಂತ ಚಾಲನೆ ನೀಡಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಾಲನೆ ನೀಡಿದ್ದು. ಕೋವಿಡ್ ಲಸಿಕೆ ವಿತರಣೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿˌ ಭರವಸೆಯ ಮಾತುಗಳನ್ನಾಡಿದರು. ಈ ಬಗ್ಗೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದುˌ ಲಸಿಕಾ ವಿತರಣಾ ಅಭಿಯಾನಕ್ಕೆ ಶುಭಕೋರಿ ಜನರ ಜೀವಗಳನ್ನು ಉಳಿಸಿˌ ಹೊಸ ಬದುಕು ಆರಂಭವಾಗಲಿ ಎಂದು...
ಬೆಂಗಳೂರು

ಯಡಿಯೂರಪ್ಪರವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕರಿಗೆ ತಡವಾಗಿ ಜ್ಞಾನೋದಯವಾಗಿದೆ: ಮಾಜಿ ಸಿಎಂ. ಸಿದ್ದರಾಮಯ್ಯ ವಾಗ್ದಾಳಿ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಹೆಸರಿಗಷ್ಟೇ ಮುಖ್ಯಮಂತ್ರಿಯಾಗಿದ್ದು ನಿಜವಾದ ಅಧಿಕಾರ ಚಲಾಯಿಸುತ್ತಿರುವುದು ಅವರ ಮಗ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಅವರ ಕುರ್ಚಿ ಗಟ್ಟಿಯಾಗಿದ್ದರೆ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಬಳಿ ಗೋಗರೆಯುವ, ಕೈಕಾಲು ಹಿಡಿಯುವ ಅಗತ್ಯವಿರುತ್ತಿರಲಿಲ್ಲ. ಕೆಲವರಿಗೆ ಮಂತ್ರಿ ಸ್ಥಾನ ಕೊಡಲು ಕಾನೂನಿನ ತೊಡಕಿದೆ ಅಂತ ಗೊತ್ತಿದ್ರೂ ಸುಳ್ಳು ವಾಗ್ದಾನ ನೀಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪರವರ ಕುಟುಂಬ ರಾಜಕಾರಣದ ಬಗ್ಗೆ...
ಬೆಂಗಳೂರು

ರಾಜ್ಯಕ್ಕೆ ಅಮಿತ್ ಶಾ ಭೇಟಿಯ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ; ಸಿಎಂ ಯಡಿಯೂರಪ್ಪ-ಕಹಳೆ ನ್ಯೂಸ್

ಬೆಂಗಳೂರು : ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಹತ್ವದ ರಾಜ್ಯ ಬಿಜೆಪಿ ನಾಯಕರ ಸಭೆ ಸಂಜೆ ೭.೩೦ಕ್ಕೆ  ನಡೆಯಲಿದೆ. ಈ ಸಭೆಯ ಬಳಿಕ ರಾಜ್ಯಕ್ಕೆ ಆಗಮಿಸಲಿರುವಂತ ಕೇಂದ್ರ ಸಚಿವ ಅಮಿತ್ ಶಾ ಅವರು ಬಂದು ಹೋದ ಬಳಿಕ ಚರ್ಚಿಸಿ, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ಸಿಎಂ ಯಡಿಯೂರಪ್ಪ ನಗರದ ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಹತ್ವದ ರಾಜ್ಯ ಬಿಜೆಪಿ ನಾಯಕರ...
ಬೆಂಗಳೂರು

ಭಾವಚಿತ್ರ ಇರುವ ಗುರುತಿನ ಚೀಟಿಗಳಿಗಷ್ಟೇ ಕೊರೋನಾ ಲಸಿಕೆ ಭಾಗ್ಯ: ಆರೋಗ್ಯ ಇಲಾಖೆ- ಕಹಳೆ ನ್ಯೂಸ್

ಬೆಂಗಳೂರು: ದೇಶಾದ್ಯಂತ ಕೊರೋನಾ ಲಸಿಕೆಯು ನಾಳೆಯಿಂದ ವಿತರಣೆ ಮಾಡಲಾಗುತ್ತಿದ್ದು, ಕೋವಿಡ್ ಲಸಿಕೆ ವಿತರಣೆ ಕೇಂದ್ರದಲ್ಲಿ ಆರೋಗ್ಯ ಕಾರ್ಯಾಕರ್ತರು ಹೆಸರು ನೋಂದಣಿ ಸಮಯದಲ್ಲಿ ನೀಡಿದ ಗುರಿತಿನ ಚೀಟಿ ತೋರಿಸಿದರೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೋವಿಡ್ ಲಸಿಕೆ ನಾಳೆಯಿಂದ ಜನರಿಗೆ ವಿತರಣೆ ಆರಂಭವಾಗಲಿದೆ. ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡವರ ಮೊಬೈಲ್ ಸಂಖ್ಯೆಗೆ ನಿಗದಿತ ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿಯ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಮೂಲಕವಾಗಿ ಲಸಿಕೆ...
ಬೆಂಗಳೂರು

ಹೆಚ್ಚಾದ ಯುವಕಾಂಗ್ರೆಸ್ ಚುನಾವಣಾ ಅಕ್ರಮಗಳು : ಫಲಿತಾಂಶ ಇನ್ನು 10 ದಿನ ವಿಳಂಬ – ಕಹಳೆ ನ್ಯೂಸ್

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನು 10 ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಿಂದೆಂದೂ ನಡೆಯದಷ್ಟು ಚುನಾವಣಾ ಅಕ್ರಮಗಳು ಯುವಕಾಂಗ್ರೆಸ್ ಚುನಾವಣೆಯಲ್ಲಿ ನಡೆದಿದೆ. ರಾಜ್ಯಾಧ್ಯಕ್ಷರ ಆಯ್ಕೆಗೆ ಚಲಾವಣೆಯಾದ ಪ್ರತಿ ವೋಟ್‍ಗೆ ಅಭ್ಯರ್ಥಿಗಳು 4ರಿಂದ5 ಸಾವಿರ ರೂ. ನೀಡಿರುವ ಆರೋಪ ಕೇಳಿ ಬಂದಿದೆ. ಆಕಾಂಕ್ಷಿಗಳು ತಮ್ಮ ಬೆಂಬಲಿಗರಿಗೆ ಹಣ ನೀಡಿ ಮತಹಾಕಿರುವ ಆಕ್ಷೇಪಗಳು ಕೇಳಿ ಬಂದಿತ್ತಾದರೂ ಅಧಿಕೃತವಾಗಿ ಯಾವುದೇ ದೂರುಗಳು ದಾಖಲಾಗಿಲ್ಲ....
ಬೆಂಗಳೂರು

ಪಕ್ಷಕ್ಕೆ ದಕ್ಕೆತರುವ ಮಾತುಗಳನ್ನು ತೀವ್ರವಾಗಿ ಖಂಡಿಸಿದ ಸಿ.ಎಂ ಬಿ.ಎಸ್ ಯಡಿಯೂರಪ್ಪ – ಕಹಳೆ ನ್ಯೂಸ್

ಬೆಂಗಳೂರು : ಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬುಧವಾರ ನೆರವೇರಿತು ನೂತನವಾಗಿ ಸಚಿವ ಸಂಪುಟ ಸೇರಿಕೊಂಡ ನೂತನ ಏಳು ಸಚಿವರ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಅಸಮಾಧಾನ ತಲೆದೋರಿದ್ದು, ಈ ಹಿನ್ನಲೆಯಲ್ಲಿ ಪಕ್ಷದ ವಿರುದ್ಧ ಮಾತಾನಾಡುವವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಖಡಕ್ ವಾರ್ನಿಂಗ್ ನೀಡಿದ್ದರೆ. ಸುದ್ದಿಗಾರರೊಂದಿಗೆ ಮಾತಾನಾಡಿ, ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನ ಇರುವ ಶಾಸಕರು ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿ ಪ್ರಯೋಜನವಿಲ್ಲ, ಈ ವಿಚಾರದಲ್ಲಿ ಬೇಸರವಿದ್ದರೆ ದೆಹಲಿ ವರಿಷ್ಠರ...
ಬೆಂಗಳೂರು

ನಾಳೆ ಸಂಜೆ 4 ಗಂಟೆಗೆ ರಾಜ್ಯದ ನೂತನ ಸಚಿವರ ಪ್ರಮಾಣವಚನ ಸಮಾರಂಭ; ಸಿಎಂ ಯಡಿಯೂರಪ್ಪ-ಕಹಳೆ ನ್ಯೂಸ್

ಬೆಂಗಳೂರು: ಬುಧವಾರ ಸಂಜೆ 4 ಗಂಟೆಗೆ ರಾಜ್ಯದ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ನಾಲ್ಕು ಗಂಟೆ ಹೊತ್ತಿಗೆ ಅಮವ್ಯಾಸೆ ಕೊನೆಗೊಳ್ಳಲಿದ್ದು, ಈ ಕಾರಣದಿಂದ ಈ ಮುಹೂರ್ತ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಈ ಮಾಹಿತಿಯನ್ನು ನೀಡಿದ್ದು, ನೂತನ ಸಚಿವರ ಪಟ್ಟಿಯನ್ನು ನಾಳೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ರು. ಈ ಮೂಲಕ ಕುತೂಹಲ ಮೂಡಿಸಿದ್ದು, ಈ ಬೆಳವಣಿಗೆ ಮಧ್ಯೆ ಸಂಪುಟದಿಂದ ಕೈ ಬಿಡುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿರುವ ಅಬಕಾರಿ...
1 199 200 201 202 203 211
Page 201 of 211