ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿನ ಮಾದಪ್ಪನ ಹಾಡನ್ನು ತೆಗೆದು ಹಾಕಿ: ಸಾಲೂರುಶ್ರೀ – ಕಹಳೆ ನ್ಯೂಸ್
ಚಾಮರಾಜನಗರ: ಭಕ್ತರ ಆಕ್ರೋಶದಿಂದ ವಿವಾದಕ್ಕೆ ಕಾರಣವಾಗಿರುವ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜಿಗದ ಸೂಜು ಮಲ್ಲಿಗೆ ಹಾಡಿನ ವಿರುದ್ಧ ಈಗ ಮಲೆ ಮಹದೇಶ್ವರ ಬೆಟ್ಟದಲ್ಲಿನ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕಿಡಿಕಾರಿದ್ದು, ಚಿತ್ರದಲ್ಲಿನ ಮಾದಪ್ಪನ ಹಾಡನ್ನು ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ. ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶತಮಾನದ ಜಾನಪದವನ್ನು, ಸಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬಳಸಿರುವುದು ಸರಿಯೇ?, ಸಿನಿಮಾದಲ್ಲಿ ಕೊಲೆಗಾರನು ನರ್ತಿಸುವಾಗ ಮಾದಪ್ಪನ ಹಾಡನ್ನು ಬಳಸಿರುವುದು ಎಷ್ಟು ಸರಿ?...






