Wednesday, March 11, 2026

ರಾಷ್ಟ್ರೀಯ

ಬೆಂಗಳೂರು

‘ದೇಶದಲ್ಲಿ ನಡೆಯುತ್ತಿರುವುದು ರೈತ ಪರ ಮತ್ತು ವಿರೋಧಿಗಳ ನಡುವಿನ ಹೋರಾಟ’; ಮಾಜಿ ಸಿ.ಎಂ ಸಿದ್ದರಾಮಯ್ಯ-ಕಹಳೆ ನ್ಯೂಸ್

ಬೆಂಗಳೂರು : ಇಂದು ರಾಷ್ಟ್ರೀಯ ರೈತ ದಿನಾಚರಣೆಯಾಗಿದ್ದು ಹಲವು ನಾಯಕರು ರೈತರಿಗೆ ಶುಭಾಶಯ ತಿಳಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 28 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಕೇಂದ್ರ ಮತ್ತು ರೈತ ಮುಖಂಡರುಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಎಲ್ಲವೂ ವಿಫಲವಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ರೈತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯ ತಿಳಿಸಿದ್ದು , ಹಾಗೆ ''ದೇಶದಲ್ಲಿ...
ಬೆಂಗಳೂರು

ಜನವರಿ 8 ರಂದು ಕೆಜಿಎಫ್-ಚಾಪ್ಟರ್ 2 ಸಿನೆಮಾದ ಟೀಸರ್ ಬಿಡುಗಡೆ-ಕಹಳೆ ನ್ಯೂಸ್

ಬೆಂಗಳೂರು:ಜನವರಿ 8ರಂದು ಬಹುನಿರೀಕ್ಷಿತ ಕೆಜಿಎಫ್– ಚಾಪ್ಟರ್ 2 ಸಿನಿಮಾದ ಟೀಸರ್‌ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರಶಾಂತ್‌ ನೀಲ್‌ ತಿಳಿಸಿದ್ದಾರೆ. ಹಾಗೆಯೇ "ಸಾಮ್ರಾಜ್ಯದತ್ತ ಒಂದು ನೋಟ, ಇದಕ್ಕಾಗಿ ಒಂದು ವರ್ಷ ತಡವಾಗಿರಬಹುದು. ಆದರೆ ನಾವು ಇನ್ನಷ್ಟು ಸೃದಢರಾಗಿ, ಬಲಿಶಾಲಿ ಬಂದಿದ್ದೇವೆ. ನನ್ನ ಕೈಯಲ್ಲಿ ಒಂದು ಅತ್ಯುತ್ತಮ ತಂಡ ಇರುವಾಗ ಚಿತ್ರೀಕರಣ ಪೂರ್ಣಗೊಳಿಸುವುದು ಯಾವುದೂ ಕಷ್ಟ ಎನ್ನಿಸಲಿಲ್ಲ. ಸಂಜಯ್‌ ದತ್ ನಿಜ ಜೀವನದಲ್ಲೂ ಹೋರಾಟಗಾರ. ಯಶ್‌ ಮೊದಲಿನಂತೆ ಕೆಲಸದಲ್ಲಿ ಸದಾ ಹುಮ್ಮಸ್ಸಿನ...
ರಾಷ್ಟ್ರೀಯಸುದ್ದಿ

ಭಾರತದಲ್ಲಿ ಅತಿ ವೇಗವಾಗಿ ಹರಡುತ್ತಿದೆ ರೂಪಾಂತರ ಕೊರೋನಾ ವೈರಸ್ ; ನಾಳೆ ತುರ್ತು ಸಂಪುಟ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ | ಕ್ರಿಸ್ಮಸ್, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸೋಂಕು ಹರಡುವ ಆತಂಕ..! ಮತ್ತೆ ಲಾಕ್ ಡೌನ್ ಘೋಷಣೆ ಸಾಧ್ಯತೆ..!? – ಕಹಳೆ ನ್ಯೂಸ್

ದೆಹಲಿ : ಜಗತ್ತಿನಲ್ಲಿ ತಲ್ಲಣ ತಂದಿರುವ ರೂಪಾಂತರಗೊಂಡ ಕೊರೋನಾ ಹೊಸ ವೈರಸ್‌ ಭಾರತದಲ್ಲಿಯೂ ಆತಂಕ ಮೂಡಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಭೆ ಕರೆದಿದ್ದಾರೆ. ರೂಪಾಂತರ ಕೊರೋನಾ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆ ಕರೆದಿದ್ದಾರೆ. ನಾಳೆ ನಡೆಯಲಿರುವ ಸಭೆಯಲ್ಲಿ ಕೊರೋನಾ ಹೊಸ ಪ್ರಭೇದದ ಬಗ್ಗೆ ಚರ್ಚೆ ನಡೆಸಿ ಸೋಂಕು ತಡೆಗೆ ತೀರ್ಮಾನ...
ಬೆಂಗಳೂರು

ಬೆಂಗಳೂರು; ಫಾರಿನ್ ಪೋಸ್ಟ್ ಆಫೀಸ್​ ಬಟ್ಟೆಯಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ- ಕಹಳೆ ನ್ಯೂಸ್

ಬೆಂಗಳೂರು: ಫಾರಿನ್ ಪೋಸ್ಟ್ ಆಫೀಸ್​ ಬಟ್ಟೆಯಲ್ಲಿ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಎನ್​ಸಿಬಿ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ರಾಮ್ಲಾ ಷಡಾಫಿ ಮತ್ತು ಇಮ್ಯಾನ್ಯುವಲ್ ಮೈಕಲ್ ಬಂಧಿತ ಆರೋಪಿಗಳಾಗಿದ್ದು, ಇವರು ನೆದರ್ ಲ್ಯಾಂಡ್​​ನಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದರು ಎಂದು ಎನ್ನಲಾಗುತ್ತಿದೆ.ಈ ಬಗ್ಗೆ ಖಚಿತ ಮಾಹಿತಿ ಪಡೆದ ಎನ್​ಸಿಬಿ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ಹಾಗೆಯೇ ಬಂಧಿತರಿಂದ 3 ಸಾವಿರ ಮಾತ್ರೆಗಳು ಮತ್ತು 240 ಗ್ರಾಂ ಕೊಕೇನ್...
ಬೆಂಗಳೂರು

ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳೊಂದಿಗೆ ಶಾಮೀಲು; ಸಿದ್ದರಾಮಯ್ಯ ಗಂಭೀರ ಆರೋಪ- ಕಹಳೆ ನ್ಯೂಸ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರದ ವಿರುದ್ಧ ಒಂದಲ್ಲ ಒಂದು ಆರೋಪವನ್ನು ಮಾಡುತ್ತಲೇ ಇದ್ದಾರೆ. ಇದೀಗ ಖಾಸಗಿ ಶಾಲೆಗಳ ಜೊತೆಗೆ ಬಿಜೆಪಿ ಸರ್ಕಾರ ಶಾಮೀಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತ್ತು ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲದಂತಾಗಿದೆ. ಶಾಲೆಗಳು ಆರಂಭಗೊಳ್ಳದಿದ್ದರೂ ಪೋಷಕರಿಂದ ಪೂರ್ಣಶುಲ್ಕ ವಸೂಲಿ‌ ಮಾಡಲಾಗುತ್ತಿದೆ. ಅಲ್ಲದೆ, ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ, ಪೋಷಕರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಇಷೇಲ್ಲ ನಡೆದರೂ ಸರ್ಕಾರ ಮಾತ್ರ...
ಬೆಂಗಳೂರು

ಡಿಕೆಶಿಗೆ ಹೆದರಿಕೊಂಡು ಸಿದ್ದರಾಮಯ್ಯನವರು ಮಾತಾನಾಡುತ್ತಿದ್ದಾರೆ; ಸದಾನಂದ ಗೌಡ- ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ಹೆದರಿಕೊಂಡು ಏನೇನೋ ಮಾತಾನಾಡುತ್ತಿದ್ದಾರೆ ಎಂದು ಹೇಳಿದ್ರು. ಈ ಕುರಿತು ಸಿದ್ದರಾಮಯ್ಯ ಹಾಗೂ ಎಚ್ ಡಿಕೆ ನಡುವಿನ ಮಾತಿನ ಜಗಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ಆಡಳಿತ ನಡೆಸಿದವರು ಮತ್ತು ಒಂದು ಪಕ್ಷದ ನೇತೃತ್ವ ವಹಿಸಿದವರು ಮಾತನಾಡುವಾಗ ಅದಕ್ಕೆ ಇತಿಮಿತಿ ಇರಬೇಕು.ಇಲ್ಲ ಸಾರ್ವಜನಿಕರಲ್ಲಿ ಅವರು ಒಪ್ಪಿಗೆ ಪಡೆಯುವ ರೀತಿ ಇರಬೇಕು. ಆದರೆ...
ಬೆಂಗಳೂರು

ಸಾರ್ವಜನಿಕರಿಗೆ ಬಿಗ್ ಶಾಕ್ ಕೊಟ್ಟ ಅಡುಗೆ ಎಣ್ಣೆ ಬೆಲೆ -ಕಹಳೆ ನ್ಯೂಸ್

ಬೆಂಗಳೂರು: ದೇಶದ ಜನತೆಗೆ ಕೊರೊನಾ ಬಿಕ್ಕಟ್ಟಿನ ನಡುವೆ ಮತ್ತೊಂದು ಆತಂಕ ಎದುರಾಗಿದ್ದು, ಶೇ.35 ರಿಂದ 45ರಷ್ಟು ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಲಾಕ್ ಡೌನ್ ಗೂ ಮುನ್ನ ಪ್ರತಿ ‌ಲೀಟರ್ ಗೆ 100 ರೂಪಾಯಿ ಕಡಿಮೆ ಇದ್ದ ಅಡುಗೆ ಎಣ್ಣೆ ಬೆಲೆ ಇದೀಗ ದಿಡೀರ್ ಹೆಚ್ಚಾಗಿದ್ದು, ರೂಪಾಯಿ 130 ರಿಂದ 140 ರೂಪಾಯಿವರೆಗೆ ಹೆಚ್ಚಾಗಿದೆ. ಆರು ತಿಂಗಳ ಹಿಂದೆ ಪಾಮ್ ಆಯಿಲ್ ಬೆಲೆ ಪ್ರತಿ ಲೀಟರ್ ಗೆ 65 ರಿಂದ...
ಬೆಂಗಳೂರು

ಸಾವಿನಲ್ಲೂ‌ ಐವರಿಗೆ‌ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಮಹಿಳೆ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಗೊಂಡ ಕಾರಣ ಅಂಗಾಂಗ ಕಸಿ ಕೂಡ ಆರಂಭಗೊಂಡಿದೆ. ಇಂತಹ ಸಂದರ್ಭದಲ್ಲಿ ನಗರದ ಕೋಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಂತ 49 ವರ್ಷದ ಮಹಿಳೆಯೊಬ್ಬಳು, ಐವರಿಗೆ ಅಂಗಾಂಗ ದಾನ ಮಾಡಿ ಆಸರೆಯಾಗಿದ್ದು, ಸಾವಿನಲ್ಲೂ‌ ಸಾರ್ಥಕತೆ ಮೆರೆದಿದ್ದಾಳೆ. ಯಲಹಂಕ ನಿವಾಸಿಯಾಗಿದ್ದ ಅವರು, ಡಿಸೆಂಬರ್ 13 ರಂದು ರಸ್ತೆ ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಮಹಿಳೆಗೆ ಕೃತಕ ಉಸಿರಾಟದ...
1 301 302 303 304 305 318
Page 303 of 318