Recent Posts

Friday, October 30, 2026
ರಾಷ್ಟ್ರೀಯಸುದ್ದಿ

ಭಾರತದಲ್ಲಿ ಅತಿ ವೇಗವಾಗಿ ಹರಡುತ್ತಿದೆ ರೂಪಾಂತರ ಕೊರೋನಾ ವೈರಸ್ ; ನಾಳೆ ತುರ್ತು ಸಂಪುಟ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ | ಕ್ರಿಸ್ಮಸ್, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸೋಂಕು ಹರಡುವ ಆತಂಕ..! ಮತ್ತೆ ಲಾಕ್ ಡೌನ್ ಘೋಷಣೆ ಸಾಧ್ಯತೆ..!? – ಕಹಳೆ ನ್ಯೂಸ್

ದೆಹಲಿ : ಜಗತ್ತಿನಲ್ಲಿ ತಲ್ಲಣ ತಂದಿರುವ ರೂಪಾಂತರಗೊಂಡ ಕೊರೋನಾ ಹೊಸ ವೈರಸ್‌ ಭಾರತದಲ್ಲಿಯೂ ಆತಂಕ ಮೂಡಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಭೆ ಕರೆದಿದ್ದಾರೆ.

ಜಾಹೀರಾತು

ರೂಪಾಂತರ ಕೊರೋನಾ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆ ಕರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾಳೆ ನಡೆಯಲಿರುವ ಸಭೆಯಲ್ಲಿ ಕೊರೋನಾ ಹೊಸ ಪ್ರಭೇದದ ಬಗ್ಗೆ ಚರ್ಚೆ ನಡೆಸಿ ಸೋಂಕು ತಡೆಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನು ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ಸೋಂಕು ತೀವ್ರಗತಿಯಲ್ಲಿ ಹರಡಬಹುದಾದ ಆತಂಕದ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ಕರೆದಿರುವ ಸಂಪುಟ ಸಭೆ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಮತ್ತೆ ಭಾರತದಲ್ಲಿ ಲಾಕ್ ಡೌನ್ ಅನಿವಾರ್ಯತೆ ಬಗ್ಗೆಯೂ ಚರ್ಚೆ ನಡೆಯಲಿದ್ದು, ಲಾಕ್ ಡೌನ್ ಹೇರಿಕೆ ಸಾಧ್ಯತೆ ಇದೆ.