Thursday, March 19, 2026

ರಾಷ್ಟ್ರೀಯ

ದೆಹಲಿಸುದ್ದಿ

ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿ : ತನಿಖೆಯ ಹೊಣೆ NIA ಹೆಗಲಿಗೆ ವಹಿಸಿದ ಕೇಂದ್ರ ಗೃಹಸಚಿವಾಲಯ-ಕಹಳೆ ನ್ಯೂಸ್

ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ತನಿಖೆಯ ಹೊಣೆಯನ್ನು ಕೇಂದ್ರ ಗೃಹಸಚಿವಾಲಯ ಎನ್‌ಐಎ ಹೆಗಲಿಗೆ ವಹಿಸಿದೆ. ಈ ದಾಳಿಯ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ವಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಅಧಿಕೃತವಾಗಿ ತನಿಖೆ ಶುರುಮಾಡಲಿದೆ ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ತನಿಖೆಗೆ ನಿಯೋಜಿಲ್ಪಟ್ಟ ಎನ್‌ಐಎ ತಂಡ ಈಗಾಗಲೇ ಪಹಲ್ಗಾಮ್‌ ತಲುಪಿದೆ, ದಾಳಿ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು...
ಜಿಲ್ಲೆದೆಹಲಿಸುದ್ದಿ

ಭಾರತದ ಗಡಿಗಳ ಮೇಲೆ ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ : ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ.!-ಕಹಳೆ ನ್ಯೂಸ್

ಶ್ರೀನಗರ : ಎಲ್ ಒಸಿಯಲ್ಲಿ ಪಾಕಿಸ್ತಾನ ಸೇನೆಯಿಂದ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಹೌದು, ಭಾರತ-ಪಾಕ್ ನಡುವಿನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಗಳ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ತಾನ ಸೇನೆಗೆ ಬಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್ ಸೇನಾ ಶಿಬಿರಗಳ ಮೇಲೆ ಭಾರತೀಯ...
ದೆಹಲಿಸುದ್ದಿ

‘ಸಿಂಧೂ ನದಿಯಲ್ಲಿ ನೀರು ಹರಿಯಲಿ,ಇಲ್ಲವಾದರೆ ನಿಮ್ಮ ರಕ್ತ ಹರಿಯುತ್ತದೆ’: ಪಾಕ್ ನಾಯಕನ ಅತಿರೇಕದ ಹೇಳಿಕೆ ವೈರಲ್ -ಕಹಳೆ ನ್ಯೂಸ್

ನವದೆಹಲಿ: ಸಿಂಧೂ ಜಲ ಒಪ್ಪಂದದ ವಿವಾದದ ಬಗ್ಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರ ಮಿತ್ರ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ನಾನು ಈ ಸಿಂಧೂ ನದಿಯ ಪರವಾಗಿ ನಿಲ್ಲುತ್ತೇನೆ ಮತ್ತು ಸಿಂಧೂ ನದಿ ನಮ್ಮದು, ನಮ್ಮ ನೀರು ಈ ನದಿಯಲ್ಲಿ ಹರಿಯುತ್ತದೆ ಅಥವಾ ನಿಮ್ಮ ರಕ್ತ ಹರಿಯುತ್ತದೆ ಎಂಬ ಸಂದೇಶವನ್ನು ಭಾರತಕ್ಕೆ ಕಳುಹಿಸುತ್ತೇನೆ" ಎಂದು ಜರ್ದಾರಿ ಸಾರ್ವಜನಿಕ ರ್ಯಾಲಿಯಲ್ಲಿ...
ದೆಹಲಿಸಂತಾಪಸಿನಿಮಾಸುದ್ದಿ

ರಿತೇಶ್ ದೇಶಮುಖ್ ಸಿನಿಮಾ ಶೂಟಿಂಗ್‌ ವೇಳೆ ಅಪಘಾತ! ಸೆಟ್‌ನಲ್ಲೇ ಜೀವ ಬಿಟ್ಟ ಖ್ಯಾತ ಸೆಲೆಬ್ರಿಟಿ..!! -ಕಹಳೆ ನ್ಯೂಸ್

ನಟ ರಿತೇಶ್ ದೇಶಮುಖ್ ಅವರ ಚಿತ್ರ 'ರಾಜಾ ಶಿವಾಜಿ' ಚಿತ್ರೀಕರಣದ ಸಮಯದಲ್ಲಿ ಅಪಘಾತ ಸಂಭವಿಸಿದೆ.. ಬಂದಿರುವ ಮಾಹಿತಿಯ ಪ್ರಕಾರ, ಚಿತ್ರದ ಡಾನ್ಸರ್ ಸೌರಭ್ ಶರ್ಮಾ ನಿಧನರಾಗಿದ್ದಾರೆ. ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ಸೌರಭ್ ಕಣ್ಮರೆಯಾಗಿದ್ದರು.. ಆದರೆ ಎರಡು ದಿನಗಳ ನಂತರ ಸೌರಭ್ ಅವರ ಶವ ನದಿಯಲ್ಲಿ ಪತ್ತೆಯಾಗಿದೆ ಎಂಬ ಆಘಾತಕಾರಿ ಮಾಹಿತಿಯೂ ಹೊರಬರುತ್ತಿದೆ. ಸೌರಭ್ ಸಾವಿನ ನಂತರ, ಕುಟುಂಬದ ಮೇಲೆ ದುಃಖದ ಬೆಟ್ಟವೇ ಬಿದ್ದಿದೆ. ಇಲ್ಲಿಯವರೆಗೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಚಿತ್ರದ...
ಜಿಲ್ಲೆರಾಜ್ಯರಾಷ್ಟ್ರೀಯಸುದ್ದಿ

ಪಹಲ್ಗಾಮ್ ದಾಳಿಯಿಂದ ನೊಂದ ಶಿಕ್ಷಕನೊಬ್ಬ ಇಸ್ಲಾಂ ಧರ್ಮ ತ್ಯಜಿಸಿದ! ನಾನು ಮನುಷ್ಯನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ-ಕಹಳೆ ನ್ಯೂಸ್

ಕಾಶ್ಮೀರ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಮನನೊಂದ ಪಶ್ಚಿಮ ಬಂಗಾಳದ ಶಿಕ್ಷಕ ಸಬೀರ್ ಹುಸೇನ್ ಇಸ್ಲಾಂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯನ್ನು ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರು 28 ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕ್ರೂರವಾಗಿ ಕೊಂದರು. ಈ ದಾಳಿಯಲ್ಲಿ ಇತರ ಅನೇಕ ಪ್ರವಾಸಿಗರು ಗಾಯಗೊಂಡರು. ಈ ಘಟನೆಯ ಬಗ್ಗೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪಹಲ್ಗಾಮ್‌ನಲ್ಲಿ ಜನರನ್ನು ಕೊಲ್ಲುವ ಮೊದಲು,...
ಜಿಲ್ಲೆದಕ್ಷಿಣ ಕನ್ನಡಬೆಂಗಳೂರುಸುದ್ದಿ

ಏ.27ರಂದು ಬೆಂಗಳೂರಲ್ಲಿ ಬೆಳಗ್ಗೆ 3.30ರಿಂದಲೇ ‘ನಮ್ಮ ಮೆಟ್ರೋ ರೈಲು’ ಸಂಚಾರ ಆರಂಭ -ಕಹಳೆ ನ್ಯೂಸ್

ಬೆಂಗಳೂರು: TCS ವರ್ಲ್ಡ್ 10K ರನ್‌ ಪ್ರಯುಕ್ತ ಮುಂಜಾನೆ ನಮ್ಮ ಮೆಟ್ರೋ ಸಂಚಾರ ಆರಂಭಿಸಲಿದೆ. ಈ ಮೂಲಕ 10ಕೆ ಓಟ ಸ್ಪರ್ಧೆಯಲ್ಲಿ ಭಾಗವಹಿಸುವಂತವರಿಗೆ ಅನುಕೂಲವನ್ನು ಕಲ್ಪಿಸಲಾಗಿದೆ. ಟಿಸಿಎಸ್ ವರ್ಲ್ಡ್ 10ಕೆ - 2025 ಮ್ಯಾರಥಾನ್‌ನ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ, ಬಿಎಂಆರ್‌ಸಿಎಲ್ ದಿನಾಂಕ ಏಪ್ರಿಲ್ 27, 2025ರ ಭಾನುವಾರ ಬೆಳಿಗ್ಗೆ 3:30ಕ್ಕೆ ಮೆಟ್ರೋ ರೈಲು ಸೇವೆಯನ್ನು ಪ್ರಾರಂಭವಾಗಲಿದೆ. ಇದು ಸಾಮಾನ್ಯ ಸಮಯಕ್ಕಿಂತ ಮೂರುವರೆ ಗಂಟೆಗಳ ಮುಂಚೆಯೇ ಪ್ರಾರಂಭವಾಗುತದೆ. ಈ...
ಜಿಲ್ಲೆದೆಹಲಿರಾಜ್ಯರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಇಸ್ರೇಲ್ ಬಳಿಕ ಭಾರತಕ್ಕೆ ಬಂದಿಳಿದ ಅಮೆರಿಕಾದ ಯುದ್ಧ ವಿಮಾನ -ಕಹಳೆ ನ್ಯೂಸ್

ನವದೆಹಲಿ: ಪಹಲ್ಗಾಮ್ ನಲ್ಲಿ ಅಮಾಯಕರ ಪ್ರಾಣವನ್ನು ಉಗ್ರರು ತೆಗೆದ ಬೆನ್ನಲ್ಲೇ ಭಾರತ ಆಕ್ರೋಶಗೊಂಡಿದ್ದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಅಮೆರಿಕಾ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಹೊಡೆತ ನೀಡಿದೆ. ವೀಸಾ ರದ್ದು, ಸಿಂಧೂ ನದಿ ಒಪ್ಪಂದ ಮುರಿದುಕೊಂಡಿದೆ. ಅತ್ತ ಪಾಕಿಸ್ತಾನವೂ ಶಿಮ್ಲಾ ಒಪ್ಪಂದವನ್ನು ಮುರಿದುಕೊಂಡಿದೆ. ಇದೀಗ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಇಸ್ರೋ ಮಾಜಿ ಅಧ್ಯಕ್ಷ, ಪದ್ಮ ವಿಭೂಷಣ ಪುರಸ್ಕೃತ ಡಾ.ಕೆ. ಕಸ್ತೂರಿರಂಗನ್‌ ವಿಧಿವಶ-ಕಹಳೆ ನ್ಯೂಸ್

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್‌(84ವರ್ಷ) ಅವರು ಶುಕ್ರವಾರ (ಏ.25) ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಡಾ.ಕೆ.ಕಸ್ತೂರಿರಂಗನ್‌ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಸುದೀರ್ಘ 9ವರ್ಷಕ್ಕೂ ಅಧಿಕ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಕೃಷ್ಣಸ್ವಾಮಿ ಕಸ್ತೂರಿರಂಗನ್‌ ಅವರು ಇಬ್ಬರು ಪುತ್ರರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. 1940 ಅಕ್ಟೋಬರ್‌ 24ರಂದು ಎರ್ನಾಕುಳಂನಲ್ಲಿ ಜನಿಸಿದ್ದರು. ಕಸ್ತೂರಿ ರಂಗನ್‌ ಪೂರ್ವಜರು ತಮಿಳುನಾಡಿನಿಂದ ಕೇರಳದ ವಿವಿಧ ಪ್ರದೇಶಕ್ಕೆ...
1 121 122 123 124 125 321
Page 123 of 321