Friday, March 13, 2026

ರಾಜ್ಯ

ಮುಂಬೈರಾಜ್ಯಸುದ್ದಿ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ ; ಕಾರು ಕಂದಕಕ್ಕೆ ಬಿದ್ದು ಐವರು ಮೃತ್ಯು – ಕಹಳೆ ನ್ಯೂಸ್

ಮುಂಬೈ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಬಿದ್ದು ಬಾಲಕ ಸೇರಿ ಕಾರಿನಲ್ಲಿದ್ದ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಜರಾತ್ ನ ಭೀಮಪುರದಲ್ಲಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ (ನ.14) ನಡೆದಿದೆ. ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಭೀಮಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮಹಾರಾಷ್ಟ್ರ ನೋಂದಣಿ ಹೊಂದಿದ (MHO3 EL 1388) XUV700 ಇದಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ...
ಜಿಲ್ಲೆಬೆಂಗಳೂರುರಾಜ್ಯ

ನೀರಿಗಾಗಿ ಆಗ್ರಹಿಸಿ ವಿಜಯೇಂದ್ರ ನೇತೃತ್ವದಲ್ಲಿ ನಾಳೆ ಬಿಜೆಪಿ ಸಭೆ – ಕಹಳೆ ನ್ಯೂಸ್

ಕೊಪ್ಪಳ: ತುಂಗಭದ್ರಾ ವ್ಯಾಪ್ತಿಯ ಜಿಲ್ಲೆಗಳ ರೈತರಿಗೆ ಎರಡನೆ ಬೆಳೆಗೆ ನೀರು ಹರಿಸಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಹೋರಾಟ ರೂಪಿಸಲು ಸಜ್ಜಾಗಿರುವ ಬಿಜೆಪಿ ಬೆಂಗಳೂರಿನಲ್ಲಿ ಶನಿವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಬಿಜೆಪಿ ಪ್ರಮುಖರು ಮುನಿರಾಬಾದ್‌ನಲ್ಲಿ ಗುರುವಾರ ಸಭೆ ನಡೆಸಿ ಹೋರಾಟದ ಬಗ್ಗೆ ಚರ್ಚಿಸಿದ್ದರು. 'ಐಸಿಸಿ ಸಭೆಯಲ್ಲಿ ಎರಡನೇ ಬೆಳೆಗೆ ನೀರು ಹರಿಸಲು ತೀರ್ಮಾನಿಸದಿದ್ದರೆ...
ಬೆಂಗಳೂರುರಾಜ್ಯಸುದ್ದಿ

ಅಂಧ ಮಹಿಳೆಯರ ‌ಟಿ20 ವಿಶ್ವಕಪ್‌ ಟೂರ್ನಿಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್: ಭಾರತ – ನೇಪಾಳ‌ ಪಂದ್ಯ ವೀಕ್ಷಿಸಿದ ಸಚಿವೆ -ಕಹಳೆ ನ್ಯೂಸ್

ಬೆಂಗಳೂರು: ವಿಶೇಷ ಮಕ್ಕಳು ಪಾಲ್ಗೊಳ್ಳುತ್ತಿರುವ ಅಂಧರ ಕ್ರಿಕೆಟ್ ಟೂರ್ನಿಗೆ ಜಾಗತಿಕವಾಗಿ ಮನ್ನಣೆ ಸಿಗಲಿ ಎಂಬುದೇ ನನ್ನ ಆಶಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಂಗಳೂರಿನ ತಿರುಮೇನಹಳ್ಳಿಯ ಸಂಪ್ರಸಿದ್ದಿ ಮೈದಾನದಲ್ಲಿ ನಡೆಯುತ್ತಿರುವ ಅಂಧ ಮಹಿಳೆಯರ ಮೊದಲ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸರಿಯಾಗಿ ಕೈಕಾಲು ಇದ್ದರೂ, ಕಣ್ಣುಗಳು ಕಾಣಿಸಿದರೂ ಸಾಮಾನ್ಯ ಜನರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಕಷ್ಟ. ಆದರೆ, ಸರಿಯಾಗಿ ಕಣ್ಣುಕಾಣದ...
ಬೆಂಗಳೂರುರಾಜ್ಯಸುದ್ದಿಹೆಚ್ಚಿನ ಸುದ್ದಿ

ರಾಜ್ಯದಲ್ಲಿ ಈ ವರ್ಷ 900 ‘KPS’ ಶಾಲೆ ಆರಂಭಿಸಲು ನಿರ್ಧಾರ : CM ಸಿದ್ದರಾಮಯ್ಯ ಘೋಷಣೆ.! -ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಈ ವರ್ಷ 900 ಕೆಪಿಎಸ್ ಸಿ ಶಾಲೆ ತೆರೆಯಲು ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಂಡಿತ್ ಜವಾಹರಲಾಲ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 'ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಭವಿಷ್ಯ ರೂಪಿತ ಆಗುವುದು ವೈಚಾರಿಕ – ವೈಜ್ಞಾನಿಕ ಮನೋಭಾವದ ಮಕ್ಕಳಿಂದ. ಆದ್ದರಿಂದ ಮಕ್ಕಳು ಪ್ರಾಥಮಿಕ...
ಬೆಂಗಳೂರುರಾಜ್ಯಸಂತಾಪಸುದ್ದಿ

ವೃಕ್ಷಮಾತೆ ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ

ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ಪೆಗೆ ತಿಮ್ಮಕ್ಕ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು . ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಬಳಿ ಸಾಲುಮರಗಳನ್ನು ಬೆಳೆಸಿದ್ದರು. ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ಪೆಗೆ ತಿಮ್ಮಕ್ಕ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು . ಬೆಂಗಳೂರು...
ದೆಹಲಿರಾಜ್ಯರಾಷ್ಟ್ರೀಯಸುದ್ದಿ

ಐತಿಹಾಸಿಕ ಆಫ್ರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು  – ಕಹಳೆ ನ್ಯೂಸ್

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೋಲಾ ಮತ್ತು ಬೋಟ್ಸ್ವಾನಾ ಭೇಟಿಯನ್ನು ಪೂರ್ಣಗೊಳಿಸಿ ಶುಕ್ರವಾರ ನವದೆಹಲಿಗೆ ಮರಳಿದರು. ವಿದೇಶಾಂಗ ಸಚಿವಾಲಯದ ಪ್ರಕಾರ, ರಾಷ್ಟ್ರಪತಿ ಮುರ್ಮು ಅವರು ಬೋಟ್ಸ್ವಾನಾದಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಿದ ನಂತರ ಭಾರತಕ್ಕೆ ಪ್ರಯಾಣ ಬೆಳೆಸಿದರು. ಬೋಟ್ಸ್ವಾನಾದ ಅಧ್ಯಕ್ಷ ಡುಮಾ ಗಿಡಿಯಾನ್ ಬೊಕೊ ಅವರು ವೈಯಕ್ತಿಕವಾಗಿ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಎಕ್ಸ್ ಖಾತೆಯಲ್ಲಿ "ಬೋಟ್ಸ್ವಾನಾಕ್ಕೆ ಫಲಪ್ರದ ಅಧಿಕೃತ ಭೇಟಿಯನ್ನು...
ಬೆಂಗಳೂರುರಾಜಕೀಯರಾಜ್ಯಸುದ್ದಿ

ಕಬ್ಬು ಬೆಳೆಗಾರರ ​​ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ: BJP-JDS ಕಿಡಿ – ಕಹಳೆ ನ್ಯೂಸ್

ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದಾರೆಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ತೀವ್ರವಾಗಿ ಕಿಡಿಕಾರಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು, ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಮುಧೋಳದ ಸಕ್ಕರೆ ಕಾರ್ಖಾನೆಯ ಯಾರ್ಡ್‌ʼನಲ್ಲಿ ನಿಂತಿದ್ದ ಕಬ್ಬು ತುಂಬಿದ್ದ ಟ್ರಾಕ್ಟರುಗಳು ಬೆಂಕಿಗೆ ಆಹುತಿ ಆಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಟೀಕಿಸಿದರು. ಬೆಳಗಾವಿಯಲ್ಲಿ ರೈತರು ಹೋರಾಟಕ್ಕಿಳಿದಾಗ...
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಬೆಂಗಳೂರಲ್ಲಿ ಹಾರ್ನ್ ಮಾಡಿದ್ದಕ್ಕೆ ಬೈಕ್ ಗೆ ಕಾರು ಗುದ್ದಿಸಿ ಕೊಲೆಗೆ ಯತ್ನ – ಕಹಳೆ ನ್ಯೂಸ್

ಬೆಂಗಳೂರು: ನಗರದಲ್ಲಿ ಭೀಕರ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೈಕ್ ಒಂದಕ್ಕೆ ಕಾರು ಗುದ್ದಿಸಿ ಕೊಲೆಗೆ ಯತ್ನಿಸಿದಂತ ಘಟನೆ ನಡೆದಿದೆ. ಈ ಇಡೀ ಕೃತ್ಯವು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಲ್ಲಿ ಕಾರೊಂದು ಬೈಕಿಗೆ ಗುದ್ದಿಸಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಕೊಲೆಗೆ ಯತ್ನಿಸಿದಂತ ಭೀಕರ ಕೃತ್ಯ ನಡೆದಿದೆ. ಬೈಕ್ ಸವಾರ ಹಾರನ್ ಮಾಡಿದ್ದಕ್ಕೆ ಸಿಟ್ಟಾದಂತ ಕಾರು ಚಾಲಕ, ಆತನನ್ನು ಹತ್ಯೆಗೆ ಯತ್ನಿಸಲಾಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಸುಕ್ರುತ್ ಕೇಶವ್ ಎಂಬಾತನಿಂದ ಈ...
1 40 41 42 43 44 272
Page 42 of 272