Sunday, March 8, 2026

ಕ್ರೈಮ್

ಕ್ರೈಮ್ಬೆಂಗಳೂರುಸುದ್ದಿ

ಗಿರೀಶ್ ಮಟ್ಟಣ್ಣವರ್;ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು-ಕಹಳೆ ನ್ಯೂಸ್

ಬೆಂಗಳೂರು: ಧರ್ಮಸ್ಥಳ ದೇವಸ್ಥಾನದ  ವಿರುದ್ಧ ಷ್ಯಡಂತ್ರದ ಆರೋಪ ಹೊತ್ತಿರುವ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಹುಬ್ಬಳ್ಳಿ ಮೂಲದ ರೌಡಿಶೀಟರ್ ಮದನ್ ಬುಗಾಡಿ ಎಂಬಾಂತನನ್ನ ಮಾನವಹಕ್ಕುಗಳ ಆಯೋಗದವರೆಂದು  ಧರ್ಮಸ್ಥಳ ಪೊಲೀಸರಿಗೆ ಪರಿಚಯಿಸಿದ್ದಾರೆ ಎಂದು ಹಿಂದೂ ಮುಖಂಡ ಸುರೇಶ್ ಗೌಡ ದೂರು ದಾಖಲಿಸಿದ್ದಾರೆ. ಗಿರೀಶ್‌ ಮಟ್ಟಣ್ಣನವರ್‌ ಇಲಾಖೆಯ ಹೆಸರನ್ನು ಸುಳ್ಳು ಹೇಳಲು ಬಳಸಿಕೊಂಡಿದ್ದಾರೆಂದು ಆರೋಪಿಸಿ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ದೂರು ಪಡೆದಿರುವ ಅಧಿಕಾರಿಗಳು ಈ ಬಗ್ಗೆ ಸಮಗ್ರ...
ಕ್ರೈಮ್ಬೆಳ್ತಂಗಡಿಸುದ್ದಿ

ಬುರುಡೆ ಕೇಸ್ ; ಎಸ್‌ಐಟಿಯಿಂದ ಸತತ 12 ಗಂಟೆ ತಿಮರೋಡಿ ಮನೆ ಶೋಧ-ಕಹಳೆ ನ್ಯೂಸ್

ಎಸ್‌ಐಟಿಗೆ ಸಿಗದೆ ತಿಮರೋಡಿ ಎಸ್ಕೇಪ್ ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದಲ್ಲಿ ಮಹೇಶ ತಿಮರೋಡಿ ಮನೆಗೆ ಪೊಲೀಸರು ರೇಡ್ ಮಾಡಿದ್ದಾರೆ. ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆಯಾಗಿದ್ದು, ಬಂಧನ ಭೀತಿ ಎದುರಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ. ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ ಮನೆಯನ್ನು ಎಸ್‌ಐಟಿ ಜಾಲಾಡಿದೆ....
ಕ್ರೈಮ್ಚಿಕ್ಕಮಂಗಳೂರುಸುದ್ದಿ

ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಕೊಲೆ ; ಕಿಲಾಡಿ ಸೊಸೆ, ಪ್ರಿಯಕರ ಅರೆಸ್ಟ್-ಕಹಳೆ ನ್ಯೂಸ್

ಚಿಕ್ಕಮಗಳೂರು: ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯನ್ನು ಕೊಲೆ ಮಾಡಿದ್ದ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ಅಜ್ಜಂಪುರ  ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಶ್ವಿನಿ ಹಾಗೂ ಆಂಜನೇಯ ಎಂದು ಗುರುತಿಸಲಾಗಿದೆ. ಆರೋಪಿಗಳು ಆ.10 ರಂದು ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆ ದೇವಿರಮ್ಮಳನ್ನು ಕೊಂದಿದ್ದರು. ಬಳಿಕ ಮನೆಯಲ್ಲಿ ಹಣ ಕದ್ದಿದ್ದರು. ಆರಂಭದಲ್ಲಿ ಕುಟುಂಬಸ್ಥರು ಸಹಜ ಸಾವು ಎಂದು ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಆದರೆ ಹಣ ಕಳ್ಳತನ ಆಗಿದ್ದು ಗಮನಿಸಿ,...
ಉಡುಪಿಕ್ರೈಮ್ಜಿಲ್ಲೆಸುದ್ದಿ

ಕಾರ್ಕಳದ ಕುಂಟಲ್ಪಾಡಿಯಲ್ಲಿ ನವೀನ್ ಕುಮಾರ್ ವ್ಯಕ್ತಿಯ ಬರ್ಬರ ಹತ್ಯೆ -ಕಹಳೆ ನ್ಯೂಸ್

ಉಡುಪಿ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ರಸ್ತೆಯ ಪಕ್ಕದಲ್ಲಿ ಸೋಮವಾರ ತಡರಾತ್ರಿ ನವೀನ್ ಕುಮಾರ್ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರು ಮೂಲದ ನವೀನ್ ಕುಮಾರ್ ಎಂಬವರು ಕಾರ್ಕಳದ ಎಸ್‌ ಜೆ ಆರ್ಕೇಡ್ ‌ನಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಹತ್ಯೆಗೆ ನಿಖರ ಕಾರಣಗಳು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಘಟನಾ ಸ್ಥಳದಲ್ಲಿ ಉಡುಪಿ ಎಸ್‌ಪಿ ಹರಿರಾಂ ಶಂಕರ್‌, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ. ಹರ್ಷಪ್ರಿಯಂವದ,...
ಕ್ರೈಮ್ಬಂಟ್ವಾಳಸುದ್ದಿ

ಕಲ್ಲಡ್ಕ ಫ್ಲೈಓವರ್ ನಲ್ಲಿ ಹಿಟ್ ಎನ್ ರನ್..! ನಶೆಯಲ್ಲಿದ್ದ ಪುತ್ತೂರು ಮೂಲದ ಯುವಕರು – ಕಹಳೆ ನ್ಯೂಸ್

ಬಂಟ್ವಾಳ : ನಿನ್ನೆ ಸಂಜೆ ಸುಮಾರು 7 ಗಂಟೆಗೆ ಕಲ್ಲಡ್ಕ ಫ್ಲೈಓವರ್ ನಲ್ಲಿ ಎದ್ವತದ್ವವಾಗಿ ಬಂದ I20 ಕಾರೊಂದು ಎದುರಿನಲ್ಲಿ ಹೋಗುತಿದ್ದ ಕಾರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಕಾರ್ ನಲ್ಲಿದ್ದವರು ಪುತ್ತೂರು ಮೂಲದ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಮನ್ಸೂರ್ ಮತು ಮತ್ತಿಬ್ಬರು ಎಂದು ಮಾಹಿತಿ ತಿಳಿದು ಬಂದಿದೆ   ರೆಂಟ್ ಕಾರೊಂದನ್ನು ಪಡೆದ ಬೆಂಗಳೂರಿನಲ್ಲಿರುವ ಇಬ್ರಾಹಿಂ ಮನ್ಸೂರ ಊರಿಗೆ ಬಂದು ತನ್ನ ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದು ವಾಪಾಸಾಗುತ್ತಿದ್ದ ಸಮಯದಲ್ಲಿ...
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಧರ್ಮಸ್ಥಳ ಠಾಣೆಯಲ್ಲಿ ‘ಕುಡ್ಲಾ ರಾಂ ಪೇಜ್’ ನ ಯೂಟ್ಯೂಬರ್‌ ಹಾಗೂ ಇತರ ಇಬ್ಬರ ವಿರುದ್ಧ FIR – ಕಹಳೆ ನ್ಯೂಸ್

ಬೆಳ್ತಂಗಡಿ, ಆ. 11: ವಿಡಿಯೊ ಚಿತ್ರೀಕರಣದ ವಿಚಾರವಾಗಿ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ, ಯೂಟ್ಯೂಬರ್ ಒಬ್ಬರು ಹಾಗೂ ಆತನ ಇಬ್ಬರು ಸಹಚರರು ಸೇರಿ ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಉಜಿರೆ ನಿವಾಸಿ ಹರೀಶ್ ನಾಯ್ಕ (16) ಹಲ್ಲೆಗೊಳಗಾದವರು. ಅಗಸ್ಟ್ 6 ರಂದು ಪ್ರಕರಣ ದಾಖಲಾಗಿದೆ. ಈ ಸಂಬಂಧ, ಕುಡ್ತಾ ರಾಂ ಪೇಜ್' ಎಂಬ ಯೂಟ್ಯೂಬ್ ಚಾನೆಲ್‌ನ ಯೂಟ್ಯೂಬರ್ ಹಾಗೂ...
ಕ್ರೈಮ್ಸುದ್ದಿಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಗಿರೀಶ್ ಮಟ್ಟಣ್ಣನವ‌ರ್, ಯೂಟ್ಯೂಬರ್ ಸಮೀರ್ FIR ದಾಖಲು – ಕಹಳೆ ನ್ಯೂಸ್

ಹುಬ್ಬಳ್ಳಿ:- ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಗಿರೀಶ ಮಟ್ಟಣ್ಣವ‌ರ್ ಹಾಗೂ ಅದರ ವಿಡಿಯೋ ಪ್ರಸಾರ ಮಾಡಿದ್ದ ಯೂಟ್ಯೂಬರ್ ಸಮೀರ್ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. FIR no: 01/2025 00: 299, 196(1)(໖) ໖. ಎನ್.ಎಸ್ 2023 ಅಡಿ ಪ್ರಕರಣ ದಾಖಲಾಗಿದೆ. ಜೈನ್ ಸಮಾಜದ ಮುಖಂಡ ಅಜೀರ್ ಬಸಾಪುರ ಅವರಿಂದ ದೂರು ದಾಖಲಿಸಲಾಗಿದೆ. ಗಿರೀಶ್ ಮಟ್ಟೆಣ್ಣವರ ಜೈನ್ ಧರ್ಮದ ಬಗ್ಗೆ ಅವಹೇಳನಕಾರಿ...
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಉಜಿರೆಯಲ್ಲಿ ಸುವರ್ಣ ನ್ಯೂಸ್ ನ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣ ಅವರ ತಂಡದಿಂದ ಹಲ್ಲೆ – ಕಹಳೆ ನ್ಯೂಸ್

ಬೆಳ್ತಂಗಡಿ: ಉಜಿರೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ , ಗಿರೀಶ್ ಮಟ್ಟಣ್ಣ ಹಾಗೂ ಸಮೀರ್ ಎಂ.ಡಿ. ಇವರಿಂದ ಪ್ರೇರೆಪಿತಗೊಂಡ 50ಕ್ಕೂ ಹೆಚ್ಚಿನ ತಂಡ ಸೇರಿ ರಾಜ್ಯದ ಪ್ರಮುಖ ಮಾಧ್ಯಮವಾದ ಸುವರ್ಣ ನ್ಯೂಸ್ ನ ವರದಿಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದ್ದು, ಇದರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ....
1 9 10 11 12 13 128
Page 11 of 128