ಶೇಣಿ ಶತಕ ಸಂಭ್ರಮೋತ್ಸವ ;ಶೇಣಿ ಅಸಾಮಾನ್ಯ ಪ್ರತಿಭಾವಂತ, ವಾಗ್ವಿಲಾಸಿ – ಉಳಿಯ ವಿಷ್ಣು ಆಸ್ರ
ಕಾಸರಗೋಡು: ಕಲಾ ಕುಟುಂಬದ ಹಿರಿಯಜ್ಜ ಡಾ|ಶೇಣಿ ಗೋಪಾಲಕೃಷ್ಣ ಭಟ್ ಅಸಾಮಾನ್ಯ ಪ್ರತಿಭಾವಂತ, ವಾಗ್ವಿಲಾಸಿ. ಅವರ ಮಾತುಗಾರಿಕೆ ಒಂದು ಅಧ್ಯಯನದ ವಸ್ತುವಾಗಿದೆ. ಜಾನಪದ ಕಲೆಯಾಗಿದ್ದ ಯಕ್ಷಗಾನ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಬೇಕಾದರೆ ಹರಿದಾಸ ಶೇಣಿ ಅವರ ಕೊಡುಗೆ ಅಪ್ರತಿಮ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಹೇಳಿದರು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕೇರಳ ಸರಕಾರದ ಭಾರತ್ ಭವನ್ ಹಾಗೂ ಕಾಸರಗೋಡಿನ...
