” ನಾಟ್ಯಹಂಸ ಸುಮಂಗಲಾ ” – ನೃತ್ಯ ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ಬಹುಮುಖ ಪ್ರತಿಭೆ – ಕಹಳೆ ನ್ಯೂಸ್
ಯಕ್ಷಗಾನ, ತಾಳಮದ್ದಳೆ, ಸಂಗೀತ, ಭರತನಾಟ್ಯ ಹೀಗೆ ಎಲ್ಲಾ ರಂಗದಲ್ಲಿ ಗುರುತಿಸಲ್ಪಡುವ ಕಲಾವಿದರು ಬಹು ವಿರಳ, ಆದರೆ ಅಂತಹ ಕಲಾವಿದರ ಸಾಲಿನಲ್ಲಿ ಕರಾವಳಿಯಲ್ಲಿ ಕೇಳಿ ಬರುವ ಕೆಲವೇ ಕೆಲವು ಹೆಸರುಗಳಲ್ಲಿ ನೃತ್ಯ ವಿದುಷಿ ಶ್ರೀಮತಿ ಬಿ. ಸುಮಂಗಲಾ ರತ್ನಾಕರ ರಾವ್ ಪ್ರಮುಖರು. ಮಂಗಳೂರಿನ ಉರ್ವದಲ್ಲಿ ಪತಿ ಬಿ. ರತ್ನಾಕರ ರಾವ್ ಅವರ ಜೊತೆ ನೆಲೆಸಿದ್ದು, ಒಬ್ಬ ಅಪ್ರತಿಮ ಕಲಾವಿದೆಯಾಗಿ ಕರಾವಳಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ತಂದೆ ಪಿ. ಶ್ರೀರಾಮ ರಾವ್ ,...







