ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ : ಚಲಿಸುತ್ತಿದ್ದ ಇನ್ನೋವಾ ಕಾರಿನ ಟಯರ್ ಸ್ಫೋಟಗೊಂಡು ತಮಿಳುನಾಡು ಮೂಲದ ಮೂವರು ಸ್ಥಳದಲ್ಲೇ ಮೃ*ತ್ಯು- ಕಹಳೆ ನ್ಯೂಸ್
ಚಿತ್ರದುರ್ಗ: ಚಲಿಸುತ್ತಿದ್ದ ಇನ್ನೋವಾ ಕಾರಿನ ಟಯರ್ ಸ್ಫೋಟಗೊಂಡು ಡಿವೈಡರ್ ಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಹೊರವಲಯದ ಸೀಬಾರದ ಗೋಶಾಲೆ ಬಳಿ ಸಂಭವಿಸಿದೆ. ಮೃತರನ್ನು ತಮಿಳುನಾಡು ಮೂಲದ ಅರ್ಜುನ್ (28) , ಸರವಣ್ (30) , ಶ್ರೀಧರ್ (30) ಎನ್ನಲಾಗಿದೆ. ಮೃತ ಅರ್ಜುನ್ ತಮಿಳುನಾಡು ಮೂಲದ ಪೊಲೀಸ್ ಪೇದೆಯಾಗಿದ್ದಾರೆ. ಕಾರಿನಲ್ಲಿದ್ದವರು ತಮಿಳುನಾಡಿನ ಕೃಷ್ಣಗಿರಿ ಮೂಲದವರು...







