ಪಡುಬಿದ್ರೆ -ಕಾರ್ಕಳ ಹೆದ್ದಾರಿಯಲ್ಲಿ ರಿಕ್ಷಾ- ಬಸ್ ಅಪಘಾತ: ಓರ್ವ ಸಾವು -ಕಹಳೆ ನ್ಯೂಸ್
ಕಾರ್ಕಳ: ಕಾರ್ಕಳ-ಪಡುಬಿದ್ರೆ ಹೆದ್ದಾರಿಯಲ್ಲಿ ರಿಕ್ಷಾ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗುರುವಾರ (ಜೂನ್ 12)ದಂದು ಬೆಳಿಗ್ಗೆ ನಡೆದಿದೆ. ಅಡ್ವೆ – ಕಣಜಾರ್ ಕಟ್ಟೆ ಜಂಕ್ಷನ್ ಬಳಿ ಮಂಗಳೂರಿನಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ರಿಕ್ಷಾದಲ್ಲಿದ್ದ ಓರ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಭಾರತ ಮೂಲದ ಕಾರ್ಮಿಕ ಪ್ರತಾಪ್ ಸ್ಥಳದಲ್ಲೇ...







