Saturday, March 7, 2026

ಮಡಿಕೇರಿ

ಮಡಿಕೇರಿ

ಕುಶಾಲನಗರದ ರೈತಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಮುಕ್ತ ಕರಾಟೆ ಟೂರ್ನಮೆಂಟ್ 2022 –ಕಹಳೆ ನ್ಯೂಸ್

ಕಲಾಭೂಮಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ (ರಿ.)ಕುಶಾಲನಗರ ಮತ್ತು ಕ್ರೀಡಾಭಾರತಿ ವತಿಯಿಂದ ಕುಶಾಲನಗರದ ರೈತಭವನದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕರಾಟೆ ಟೂರ್ನಮೆಂಟ್ 2022, ಭಾನುವಾರ ನಡೆದಿದೆ. ಕಾರ್ಯಕ್ರಮವನ್ನು ಎಮ್. ಕೆ. ಚೇತನ್ ಚಂದ್ರ ಚೀಫ್ ಅರ್ಗನೈಸರ್ ಮತ್ತು ಕೊಡಗು ಜಿಲ್ಲಾ ಕ್ರೀಡಾಭಾರತಿ ಖಜಾಂಚಿ ಸಂದೇಶ್ ಆಚಾರ್ಯ, ಹಾಗೂ ಶಿವರಾಮ್ ಎಮ್. ಕೆ, ಯೋಗ ಮತ್ತು ಕರಾಟೆ ಶಿಕ್ಷಕರು, ಕಲಾಭೂಮಿ ಮಾರ್ಷಲ್ ಆರ್ಟ್ಸ್ ಸಂಸ್ಥಾಪಕರು, ಕ್ರೀಡಾಭಾರತಿ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇವರು...
ಕೊಡಗುಕ್ರೈಮ್ಮಡಿಕೇರಿರಾಜ್ಯಸುದ್ದಿ

” ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು ” ಆಡಿಯೋ ವೈರಲ್ ; ಮಡಿಕೇರಿ ನಗರ ಸಭೆ ಸದಸ್ಯ ಜೆಡಿಎಸ್‍ನ ಮುಸ್ತಫಾ ಆತನ ಸ್ನೇಹಿತ ಬೆಟ್ಟಗೇರಿಯ ಅಬ್ದುಲ್ಲಾ ವಶಕ್ಕೆ – ಕಹಳೆ ನ್ಯೂಸ್

ಮಡಿಕೇರಿ: ಕೊಡಗಿನಲ್ಲಿ (Kodagu) ಹಿಂದಿನಿಂದಲೂ ಒಬ್ಬರಲ್ಲಾ ಒಬ್ಬ ಉಗ್ರರು ಬಂದು ನೆಲೆಕಂಡುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಬ್ದುಲ್ ಮದನಿ ಕೂಡ ಕೊಡಗಿನ ಹೊಸತೋಟಕ್ಕೆ ಬಂದು ತಂಗಿದ್ದು ಹೊಸ ವಿಚಾರವೇನು ಅಲ್ಲ. ಆದರೆ ಈಗ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ (Bomb) ಹಾಕಬೇಕು ಎಂದು ಮಾತನಾಡಿರುವ ಆಡಿಯೋ (Audio) ಮಡಿಕೇರಿ (Madikeri) ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ಅಪಾಯಕಾರಿ ಬೆಳವಣಿಗೆಗಳು, ದೇಶ ವಿದ್ರೋಹಿ ಚಟುವಟಿಕೆಗಳು ನಡೆಯಲು ಸಂಚು ರೂಪಿಸಲಾಗುತ್ತಿದೆ ಎಂದು ಪಿಎಫ್‍ಐ...
ಕೊಡಗುಬೆಂಗಳೂರುಮಡಿಕೇರಿರಾಜಕೀಯರಾಜ್ಯಸುದ್ದಿ

” ನಾನು ಕೊಡಗಿಗೆ ಹೋದಾಗ ಐದು ಬಾರಿ ಪ್ರತಿಭಟನೆ ನಡೆದಿದೆ. ಒಂದು ಕಡೆ ಬಟ್ಟೆಯಲ್ಲಿ ಕಲ್ಲು ಕಟ್ಟಿಕೊಂಡು ದಾಳಿಯಾಗಿದೆ – ನಾಲ್ಕು ದಿನ ನಿಷೇಧಾಜ್ಞೆ ಹಿನ್ನೆಲೆ, ಮಡಿಕೇರಿ ಚಲೋ ಪ್ರತಿಭಟನಾ ರ್‍ಯಾಲಿಯನ್ನು ಮುಂದೂಡುತ್ತೇವೆ ” ವಿಪಕ್ಷ ನಾಯಕ ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ – ಕಹಳೆ ನ್ಯೂಸ್

ಬೆಂಗಳೂರು : ನಾವು ಪಾದಯಾತ್ರೆ ನಡೆಸುತ್ತಿರುವುದು ಕೊಡವರ ವಿರುದ್ಧ ಅಲ್ಲ ಎಂಬ ಸ್ಪಷ್ಟೀಕರಣದೊಂದಿಗೆ ಮಡಿಕೇರಿ ಚಲೋ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈ ವಿಷಯ ತಿಳಿಸಿದ ಅವರು ಮಡಿಕೇರಿ ಚಲೋ ಮುಂದೂಡಿರುವುದಾಗಿ ಹೇಳಿದ್ದಾರೆ. ಕೊಡಗು ಜಿಲ್ಲೆಯಲ್ಲಿ ನಾಳೆಯಿಂದ ನಾಲ್ಕು ದಿನ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಾವು ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದರು. ಇನ್ನು...
ಕೊಡಗುಮಡಿಕೇರಿರಾಜಕೀಯರಾಜ್ಯಸುದ್ದಿ

ಕೊಡಗಿನಲ್ಲಿ ಕಾಂಗ್ರೆಸ್ ಗೆ ಶಾಕ್ – 26ರಂದು ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ಚಲೋ – ಕೊಡಗಿನಲ್ಲಿ 4 ದಿನಗಳ ಕಾಲ 144 ಸೆಕ್ಷನ್ ನಿಷೇಧಾಜ್ಞೆ ; ಮದ್ಯ ಮಾರಾಟ ನಿಷೇಧ – ಕಹಳೆ ನ್ಯೂಸ್

ಮಡಿಕೇರಿ: ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಮೇಲಾಟ, ಕಿತ್ತಾಟದ ನಡುವೆ ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಕೊಡಗಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದು, 2 ಪಕ್ಷಗಳು ಪ್ರತಿಭಟನೆಯನ್ನು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ನಾಳೆಯಿಂದ ಆ.27ರವರೆಗೆ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಜಾರಿಗೊಳಿಸಿದ್ದು, ಈ...
ಮಡಿಕೇರಿಸುದ್ದಿ

ಮಡಿಕೇರಿ- ಮಂಗಳೂರು ಪರ್ಯಾಯ ರಸ್ತೆ ಕುಸಿತದ ಭೀತಿ..!! ಸಂಚಾರ ನಿರ್ಬಂಧ- ಕಹಳೆ ನ್ಯೂಸ್

ಸುಳ್ಯ: ಮಡಿಕೇರಿ-ಮಂಗಳೂರು ಪರ್ಯಾಯ ರಸ್ತೆಗೂ ಕುಸಿತದ ಭೀತಿ ಎದುರಾಗಿದ್ದು ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ ಪರಿಣಾಮ ಮಂಗಳೂರಿನಿ0ದ ಮಡಿಕೇರಿ ಮೂಲಕ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತಿತರ ಸ್ಥಳಗಳಿಗೆ ಹೊರಟ ಎಲ್ಲ ಪ್ರಯಾಣಿಕರು ಇದೀಗ ಸಂಪಾಜೆಯ ಗೇಟ್ ಬಳಿ ಸಿಲುಕಿಕೊಂಡಿದ್ದಾರೆ. ಸಂಪಾಜೆ ಗೇಟ್ ಬಂದ್ ಮಾಡಲಾಗಿದ್ದು ಯಾವುದೇ ವಾಹನವನ್ನು ಮಡಿಕೇರಿ ಕಡೆಗೆ ಬಿಡುತ್ತಿಲ್ಲ ಎಂದು ತಿಳಿದು ಬಂದಿದೆ. ಮಡಿಕೇರಿ –ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ...
ಉಡುಪಿಕೊಡಗುದಕ್ಷಿಣ ಕನ್ನಡಮಡಿಕೇರಿಸುದ್ದಿ

ನಾಳೆ ಕೊಡಗು , ದಕ್ಷಿಣ ಕನ್ನಡ ಸೇರಿದಂತೆ ಮಳೆ ಪೀಡಿತ ನಾಲ್ಕು ಜಿಲ್ಲೆಗಳಿಗೆ ನಾಳೆ ಸಿಎಂ ಬೊಮ್ಮಾಯಿ ಭೇಟಿ – ಕಹಳೆ ನ್ಯೂಸ್

ಬೆಂಗಳೂರು (ಜು. 11): ರಾಜ್ಯದಲ್ಲಿ ಕಳೆದ 10 ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದ ಸಾಕಷ್ಟು ಜಿಲ್ಲೆಗಳಲ್ಲಿ ಭೂಕುಸಿತ ಮನೆಗೆಳಿಗೆ ಹಾನಿ ಸೇರಿದಂತೆ ಅಪಾರ ಪ್ರಮಾಣದಲ್ಲಿ‌ ಆಸ್ತಿಪಾಸಿಗಳು ಹಾನಿಯಾದ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಮಳೆ ಹಾನಿ ಪೀಡಿತ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಾಳೆಯಿಂದ ಎರಡು ದಿನಗಳ ಕಾಲ ನಾಲ್ಕು ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಭೇಟಿ‌ ನೀಡಿ ಮಳೆ ಹಾನಿ ಸಂತ್ರಸ್ತರ ಅಹವಾಲು...
ಮಡಿಕೇರಿಸುದ್ದಿ

ಮಂಗಳೂರು- ಮಡಿಕೇರಿ ಹೆದ್ದಾರಿಯಲ್ಲಿ ಭೂ ಕುಸಿತ – ಕಹಳೆ ನ್ಯೂಸ್

ಮಡಿಕೇರಿ: ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಸಂಭವಿಸಿದೆ. ಕೊಡಗಿನ ಮದೆನಾಡು ಜೋಡುಪಾಲ ಬಳಿ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಸಂಚಾರಕ್ಕೆ ಸ್ವಲ್ಪ ಅಡಚಣೆ ಎದುರಾಗಿದೆ. ಮಣ್ಣು ತೆರವುಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ. ಇದೇ ವೇಳೆ ಕೊಡಗಿನ ಹಾರಂಗಿ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು ಬಾಗಿನ ಸಮರ್ಪಿಸಲಾಗಿದೆ. ಕೇರಳದಲ್ಲಿ ಮಳೆ ಬಿರುಸುಪಡೆದುಕೊಂಡಿದ್ದು, ಇದರಿಂದ ಹಾರಂಗಿ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ...
ಕೊಡಗುಮಡಿಕೇರಿರಾಜ್ಯಸುದ್ದಿ

ಕೊಡಗಿನ ರುದ್ರಗುಪ್ಪೆ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ ; ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ – ಕಹಳೆ ನ್ಯೂಸ್

ಮಡಿಕೇರಿ (ಜೂ.29): ದಕ್ಷಿಣ ಕೊಡಗಿನ ಬಿಟ್ಟಂಗಾಲ ಸಮೀಪದ 2ನೇ ರುದ್ರಗುಪ್ಪೆಯಲ್ಲಿ ಕಾಫಿ ತೋಟವೊಂದರಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಈ ಹುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. 2ನೇ ರುದ್ರಗುಪ್ಪೆಯ ತೋತೇರಿ ಬಳಿಯ ನಾಜಗೊಲ್ಲಿ ಎಂಬಲ್ಲಿನ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಮಂಗಳವಾರ ಸಂಜೆ ಕಂಡುಬಂದಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಹುಲಿಯೊಂದು ಸಂಚರಿಸುತ್ತಾ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು. 2ನೇ ರುದ್ರಗುಪ್ಪೆಯ...
1 6 7 8 9 10
Page 8 of 10