Saturday, March 14, 2026

ಮಂಗಳೂರು

ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು-ಪುಣೆ ನೇರ ವಿಮಾನ ಪುನರ್ ಆರಂಭಿಸುವಂತೆ ಶಾಸಕ ಕಾಮತ್ ಮನವಿ- ಕಹಳೆನ್ಯೂಸ್

ಮಹಾರಾಷ್ಟ್ರ ಚುನಾವಣಾ ನಿಮಿತ್ತ ಸದ್ಯ ಪುಣೆಯಲ್ಲಿರುವ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತ್ ರವರು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಶ್ರೀ ಮುರಳೀಧರ್ ಮೊಹೋಲ್ ರವರನ್ನು ಭೇಟಿಯಾಗಿ ಸ್ಥಗಿತಗೊಂಡಿರುವ ಮಂಗಳೂರು-ಪುಣೆ ನೇರ ವಿಮಾನಯಾನ ಪುನರ್ ಆರಂಭಿಸುವಂತೆ ಮನವಿ ಮಾಡಿದರು. ಮಂಗಳೂರು-ಪುಣೆ ನಡುವೆ ಅನೇಕ ರೀತಿಯಲ್ಲಿ ನೇರ ಸಂಬಂಧಗಳಿದ್ದು ದಿನ ನಿತ್ಯ, ಸಾರ್ವಜನಿಕರು, ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಅನೇಕಾರು ಜನರ ಓಡಾಟವಿದೆ. ಹಾಗಾಗಿ ಈ ಹಿಂದಿದ್ದ ನೇರ ವಿಮಾನ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ-ಕಹಳೆ ನ್ಯೂಸ್

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಇಂದು ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ಬಿಬಿಎ ಪದವಿ ವಿದ್ಯಾರ್ಥಿ ಸಾತ್ವಿಕ್, ಉಪಾಧ್ಯಕ್ಷರಾಗಿ ತೃತೀಯ ಬಿ.ಕಾಂ. ಪದವಿ ವಿದಾರ್ಥಿ ಕೀರ್ತನ್, ಜಂಟಿ ನಿರ್ದೇಶಕಿಯಾಗಿ ತೃತೀಯ ಬಿಎಸ್ಸಿ ಪದವಿ ವಿದ್ಯಾರ್ಥಿನಿ ನಂದಿತಾ ಎಸ್., ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ತೃತೀಯ ಬಿ.ಕಾಂ. ಪದವಿ ವಿದ್ಯಾರ್ಥಿನಿ ಪೂಜಾ ಶೆಟ್ಟಿ, ಹಾಗೂ ಲಲಿತ ಕಲಾ ಸಂಘದ ಸಹ ಕಾರ್ಯದರ್ಶಿಯಾಗಿ...
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ದನ ಕಳವು ಪ್ರಕರಣ ; ಪೈಜಲ್‌ ಆಲಿಯಾಸ್‌ ಪೈಜಲ್‌ ಕೊಂಚಾರ್‌ ಮತ್ತು ಉಳ್ಳಾಲದ ಸುಹೈಬ್‌ ಅಕ್ತರ್‌, ಇಬ್ಬರು ಕುಖ್ಯಾತ ದನ ಕಳ್ಳರ ಬಂಧನ – ಕಹಳೆ ನ್ಯೂಸ್

ಮಂಗಳೂರು: ಇಬ್ಬರು ಕುಖ್ಯಾತ ದನ ಕಳ್ಳರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕೊಳಂಬೆಯ ಪೈಜಲ್‌ ಆಲಿಯಾಸ್‌ ಪೈಜಲ್‌ ಕೊಂಚಾರ್‌ (40) ಮತ್ತು ಉಳ್ಳಾಲದ ಸುಹೈಬ್‌ ಅಕ್ತರ್‌ (24) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು ಹಾಗೂ ಸ್ಕೂಟರ್‌ ಅನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಪೈಜಲ್‌ ಕೊಂಚಾರ್‌ ಮೇಲೆ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್‌ ಪೊಲೀಸ್‌ ಠಾಣೆಯಲ್ಲಿ 2, ಬಜ್ಪೆ ಪೊಲೀಸ್‌ ಠಾಣೆಯಲ್ಲಿ 7, ಉಡುಪಿಯ ಶಂಕರ ನಾರಾಯಣ ಪೊಲೀಸ್‌ ಠಾಣೆಯಲ್ಲಿ 1, ಶಿರಸಿ ಮಾರ್ಕೆಟ್‌ ಪೊಲೀಸ್‌...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ದ ಧ್ವನಿ ಎತ್ತದ ,ಕಾಂಗ್ರೆಸ್ ಎಡಪಕ್ಷಗಳಿಗೆ ಪ್ಯಾಲೆಸ್ತೇನ್ ಬೇಗ ಕಾಣುತ್ತದೆ; ಛಾಟಿ ಬೀಸಿದ ಡಾ.ಭರತ್ ಶೆಟ್ಟಿ ವೈ -ಕಹಳೆ ನ್ಯೂಸ್

ಕಾವೂರು: ಪ್ಯಾಲಸ್ತೇನ್ ಪರ ಹೋರಾಟ ಮಾಡುವ ಮೊದಲು ಇಸ್ರೇಲ್ ಮೇಲೆ ಉಗ್ರರು ನಡೆಸಿದ ನರಮೇಧ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆಯೂ ಕಾಂಗ್ರೆಸ್, ಎಡಪಕ್ಷಗಳು ಕನಿಕರ ತೋರಿ ಖಂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಛಾಟಿ ಬೀಸಿದ್ದಾರೆ. ಬಾಂಗ್ಲಾ ದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಿಅವರ ಆಸ್ತಿ ,ಮನೆಗೆ ಬೆಂಕಿ ಹಾಕಿದಾಗಲೂ ಈ ಎಡ ಪಕ್ಷಗಳಿಗೆ ಕನಿಕರ ಬಂದಿಲ್ಲ.ಮೌನವಾಗಿ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ.ರೈತರ ಮೇಲೆ ,ದೇಶದ ಜನರನ್ನು...
ದಕ್ಷಿಣ ಕನ್ನಡಮಂಗಳೂರುಸುದ್ದಿ

ನರೇಂದ್ರ ಮೋದಿ ಸರ್ಕಾರದ ‘ಪಿಎಂ-ವಿದ್ಯಾಲಕ್ಷ್ಮಿ’ ಯೋಜನೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸು: ಸಂಸದ ಕ್ಯಾ.ಬ್ರಿಜೇಶ್ ಚೌಟ -ಕಹಳೆ ನ್ಯೂಸ್

ಮಂಗಳೂರು: ಕೇಂದ್ರ ಸರ್ಕಾರ ಪ್ರಾರಂಭಿಸುತ್ತಿರುವ ಹೊಸ ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹು ದೊಡ್ಡ ವರದಾನವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪಿಎಂ ವಿದ್ಯಾಲಕ್ಷ್ಮಿ ಎನ್ನುವ ಬಹಳ ಉಪಯುಕ್ತ ಯೋಜನೆಗೆ ಅನುಮೋದನೆ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಸಂಸದರು,"...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಜ. 15ರಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಬಹು ನಿರೀಕ್ಷಿತ ಸ್ಟ್ರೀಟ್ ಫುಡ್ ಫೆಸ್ಟ್ ಸೀಸನ್-3 ಕಾರ್ಯಕ್ರಮ – ಕಹಳೆ ನ್ಯೂಸ್

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಬಹು ನಿರೀಕ್ಷಿತ ಮೂರನೇ ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಾವು 2025 ರ ಜ.15 ರಿಂದ 19 ರವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಘೋಷಿಸಿದರು. ನಗರದ ವಿ.ಟಿ ರಸ್ತೆಯ ಚೇತನ ಶಿಶು ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಕಳೆದೆರಡು ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಾವು ಯಶಸ್ವಿಯಾಗಿ ಸಾಗಿದ್ದು ಲಕ್ಷಾಂತರ ಜನರನ್ನು ಆಕರ್ಷಿಸಿ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಿತ್ತು....
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕನ್ನಡ ಕೇವಲ ಭಾಷೆಗಷ್ಟೇ ಸೀಮಿತವಲ್ಲ: ಪ್ರೊ. ಗಣಪತಿ ಗೌಡ-ಕಹಳೆ ನ್ಯೂಸ್

ಮಂಗಳೂರು: ಕನ್ನಡ ನಾಡು ನುಡಿಯಲ್ಲಿ ನಾವು ಬೆರೆತಿದ್ದೇವೆ. 3000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸಿಕೊಂಡು ಬಂದಿದ್ದೇವೆ. ಅಲ್ಲದೇ, ಜಗತ್ತಿಗೆ ಪಸರಿಸುವ ಕೆಲಸವನ್ನು ಕನ್ನಡ ಕವಿಗಳು ಮಾಡಿದ್ದಾರೆ. ಅವರಿಗೆ ಬೇರೆ ಭಾಷೆ ಅರಿವಿದ್ದರೂ ಕನ್ನಡಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಈ ಹೊತ್ತಿಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ...
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಖ್ಯಾತ ನ್ಯಾಯವಾದಿ ಕೆ. ಶಂಭು ಶರ್ಮರಿಗೆ ಹಲ್ಲೆ ; ಓರ್ವ ಬಂಧನ – ಕಹಳೆ ನ್ಯೂಸ್

ಪುತ್ತೂರು: ಖ್ಯಾತ ನ್ಯಾಯವಾದಿಯಾಗಿರುವ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಕೆ. ಶಂಭು ಶರ್ಮರವರು ಕಕ್ಷಿದಾರರೋರ್ವರ ಜಾಗದ ವೀಕ್ಷಣೆಗೆ ತೆರಳಿದ್ದ ವೇಳೆ ಅವರಿಗೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಉರ್ವ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮಂಗಳೂರು ವಕೀಲರ ಸಂಘದ ಹಿರಿಯ ವಕೀಲರಾಗಿರುವ ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದವರಾದ ಕೆ. ಶಂಭು ಶರ್ಮ ಅವರು ತಮ್ಮ ಕಕ್ಷಿದಾರರಾದ ಪುತ್ತೂರು ಮೂಲದ ಡಾ. ರಜನೀಶ್ ಸೊರಕೆ ಅವರಿಗೆ...
1 66 67 68 69 70 105
Page 68 of 105