ಎನ್ನೆಂಸಿ ನೇಚರ್ ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ;ಪ್ರಕೃತಿ ಅಪಾರ ಸಂಶೋಧನೆಗಳ ಆಗರ: ಡಾ. ನವೀನ್ -ಕಹಳೆ ನ್ಯೂಸ್
ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ಇದರ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಗಸ್ಟ್ 7ನೇ ಗುರುವಾರದಂದು ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ಚಟುವಟಿಕೆಗಳ ಭಿತ್ತಿಚಿತ್ರ ಅನಾವರಣಗೊಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ಅವಧಿಯಲ್ಲಿ ಮಾತನಾಡಿದ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಡಾ. ನವೀನ್ ಜಿ ಪಿ ಎ ಎನ್, ಪ್ರಕೃತಿ ಅಪಾರ ಸಂಶೋಧನೆಗಳ ಆಗರ. ಪ್ರಕೃತಿಯ...







