ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮತ್ತು ಅಂತರ್ ವಲಯ ಮಟ್ಟದ ಮೂರು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸಮಾರೋಪ: ಆಳ್ವಾಸ್ ಮೂಡಬಿದಿರೆ ಚಾಂಪಿಯನ್, ಎಸ್.ಡಿ.ಎಂ ಉಜಿರೆ ರನ್ನರ್ಸ್ -ಕಹಳೆ ನ್ಯೂಸ್
ಮಂಗಳೂರು : ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕಬಡ್ಡಿ ಪಂದ್ಯಾಟ ದಿನಾಂಕ 27 ಮಾರ್ಚ್ 2026ರಂದು ಮುಕ್ತಾಯಗೊಂಡಿದ್ದು, ಆಳ್ವಾಸ್ ಕಾಲೇಜು ಮೂಡಬಿದಿರೆ ಪ್ರಥಮ ಹಾಗೂ ಎಸ್.ಡಿ.ಎಂ ಕಾಲೇಜು ಉಜಿರೆ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ದಿನಾಂಕ 25 ಮತ್ತು 26ನೇ ಮಾರ್ಚ್ 2026ರಂದು ಪಂದ್ಯಾಟದ ಮೊದಲೆರಡು ದಿನ ಅಂತರ ಕಾಲೇಜು ಮಂಗಳೂರು ವಲಯದ ಪಂದ್ಯಾಟಗಳು ನಡೆದು ಎಸ್.ಡಿ.ಎಂ ಕಾಲೇಜು ಉಜಿರೆ ಪ್ರಥಮ...







