ಬೆಳ್ಳಾರೆಯ ಪದವಿಪೂರ್ವ ಕಾಲೇಜಿನ ಎಲ್ಲ ಉಪನ್ಯಾಸಕರೂ ವರ್ಗಾವಣೆ..! ಸಂಕಷ್ಟದಲ್ಲಿ ವಿದ್ಯಾರ್ಥಿಗಳು – ಕಹಳೆ ನ್ಯೂಸ್
ಸುಳ್ಯ : ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪದವಿಪೂರ್ವ ಕಾಲೇಜು ವಿಭಾಗದ ಎಲ್ಲ ಉಪನ್ಯಾಸಕರಿಗೂ ವರ್ಗಾವಣೆಯಾಗಿದೆ. ಉಪನ್ಯಾಸಕರ ಹುದ್ದೆ ಸಂಪೂರ್ಣ ಖಾಲಿಯಾಗಿರುವ ಪರಿಣಾಮ ಕಾಲೇಜಿನ 258 ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ಬೆಳ್ಳಾರೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದ ವಿಶ್ವನಾಥ ಗೌಡ ಅವರಿಗೆ ಸುಳ್ಯ ಜೂನಿಯರ್ ಕಾಲೇಜಿಗೆ ವರ್ಗಾವಣೆಯಾಗಿದೆ. ಸ್ವಲ್ಪ ಸಮಯ ಬೆಳ್ಳಾರೆಯಲ್ಲಿ ಇರುವಂತೆ ಅವರನ್ನು ವಿನಂತಿಸಲಾಗಿದೆ. ಈ ಹಿಂದೆ ಇದ್ದ 6 ಮಂದಿ ಉಪನ್ಯಾಸಕರಲ್ಲಿ ಹಸೀನಾ ಬಾನು ಸುಳ್ಯ ಜೂನಿಯರ್ ಕಾಲೇಜಿಗೆ, ಗೌತಮ್ ಕೆ....







