Wednesday, March 11, 2026

ಪುತ್ತೂರು

ಪುತ್ತೂರು

ಪ್ರಥಮ ಚಿಕಿತ್ಸೆಯ ಸಂದರ್ಭದಲ್ಲಿ ಮೊಬೈಲ್ ಬಳಸಬಾರದು- ರೋ.ಕ್ಸೇವಿಯರ್ ಡಿಸೋಜಾ- ಕಹಳೆ ನ್ಯೂಸ್

ಪುತ್ತೂರು: ಅ.12 ಪ್ರಥಮ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ನಾವು ಮೊಬೈಲ್ ಬಳಸಬಾರದು. ಅಲ್ಲದೇ ಅಪಘಾತಗೊಂಡಿರುವ ವ್ಯಕ್ತಿಯ ಜೀವುಳಿಸುವ ಕಾರ್ಯವಾಗಬೇಕೆ ವಿನಃ ಅನ್ಯ ಕಾರ್ಯಗಳ ಬಗೆಗೆ ಅಲೋಚನೆಗಳು ಇರಬಾರದು ಎಂದು ಪುತ್ತೂರಿನ ರೋಟರಿ ಕ್ಲಬ್ ನ ಅಧ್ಯಕ್ಷ ರೋ.ಕ್ಸೇವಿಯರ್ ಡಿಸೋಜಾ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಪ್ರಥಮ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಮನುಷ್ಯ ಎಷ್ಟೇ ಮುಂದುವರೆದರು ಕೂಡಾ ಎಂದೆಂದಿಗೂ ಮಾನವೀಯತೆಯನ್ನು ಮರೆಯಬಾರದು. ಯಾರಿಗಾದರು ಪ್ರಥಮ ಚಿಕಿತ್ಸೆಯ ಅವಶ್ಯಕತೆ...
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಯೋಗಾಸನ ತರಬೇತಿ ಕಾರ್ಯಕ್ರಮ -ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಯೋಗಾಸನ ತರಬೇತಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕ ಚಂದ್ರಶೇಖರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಯೋಗ ಎಂಬುದು ನಮ್ಮ ಜ್ಞಾನದ ಅಭಿವೃದ್ಧಿಗೆ ಪೂರಕಾವಾದ ಕ್ರಿಯೆ. ಯೋಗದಿಂದ ಏಕಾಗ್ರತೆ ಹೆಚ್ಚುವುದಲ್ಲದೆ ನಮ್ಮ ಮಾನಸಿಕ ಮತ್ತು ದೈಹಿಕ ಕ್ಷಮತೆ ಅಭಿವೃದ್ಧಿಯಾಗುತ್ತದೆ. ದೇಹದಲ್ಲಿರುವ ಸ್ನಾಯುಗಳು ಬಲವರ್ಧನೆಯಾಗಲು ಯೋಗ ಸಹಕಾರಿ. ಚಂಚಲ ಮನಸ್ಸನ್ನು ಪ್ರಯತ್ನಪೂರ್ವಕವಾಗಿ ಒಂದೆಡೆಗೆ ತರಲು ಯೋಗವನ್ನು ಪ್ರತಿಯೊಬ್ಬರು...
ಪುತ್ತೂರು

ವಿವೇಕಾನಂದ ಪದವಿ ಪೂರ್ವಕಾಲೇಜಿನಿಂದ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಸ್ಫರ್ಧೆಗಳ ಆಯೋಜನೆ-ಕಹಳೆ ನ್ಯೂಸ್

ಪುತ್ತೂರು: ಪಾಠಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ವಿದ್ಯಾರ್ಥಿಗಳ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಆನ್‍ಲೈನ್ ಸ್ಫರ್ಧೆಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿಭಟ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 2020-21 ನೇ ಸಾಲಿನ ಆನ್‍ಲೈನ್ ಸ್ಫರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರು, ಕೊರೊನಾದಿಂದಾಗಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ...
ಪುತ್ತೂರು

ಸುಭಾಷ್ ಪಟ್ಟಾಜೆಗೆ ಡಾಕ್ಟರೇಟ್ ಪದವಿ-ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ನಿರ್ವಹಿಸಿದ ಸುಭಾಷ್ ಪಟ್ಟಾಜೆ ಅವರು ಡಾ. ಮಹೇಶ್ವರಿ ಯು. ಅವರ ಮಾರ್ಗದರ್ಶನದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಮರ್ಪಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿದೆ. ಚೆಡೆಕಲ್ಲು- ಪಟ್ಟಾಜೆ ನಿವಾಸಿ ವಿಘ್ನೇಶ್ವರ ಪಿ ಮತ್ತು ಸವಿತಾ ದಂಪತಿ ಪುತ್ರರಾಗಿರುವ ಇವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2016 ರಿಂದ 2020...
ಪುತ್ತೂರು

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ-ಕಹಳೆ ನ್ಯೂಸ್

ಪುತ್ತೂರು: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2020ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದ ಉತ್ತಮ ರ‍್ಯಾಂಕ್ ಗಳನ್ನು ಪಡೆದಿದ್ದಾರೆ.       ಅಕ್ಷಯ್ ಪಾಂಗಾಳ್ 720 ಅಂಕಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಲ್ಲಿ ಪುತ್ತೂರಿನ ದಿನೇಶ್ ಪಾಂಗಳ್ ಮತ್ತು ಸಂಧ್ಯಾ ಪಾಂಗಳ್ ರವರ ಪುತ್ರ ಅಕ್ಷಯ್ ಪಾಂಗಾಳ್-642 ಅಂಕಗಳನ್ನು ಗಳಿಸಿ...
ಪುತ್ತೂರು

ಎಸ್.ಎಸ್.ಎಲ್.ಸಿ ಮರುಪರೀಕ್ಷೆಯಲ್ಲಿ 95% ಫಲಿತಾಂಶ ಸೋತವರಿಗೆ ದಾರಿದೀಪವಾದ ಪ್ರಗತಿ ಸ್ಟಡಿ ಸೆಂಟರ್-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಟಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿಯೇ ಕಳೆದ 13 ವರುಷಗಳಿಂದ ತನ್ನ ಸೇವೆಯನ್ನು ನೀಡುತ್ತಾ ಬಂದಿದ್ದು, 2019-20ನೇ ಮರುಪರೀಕ್ಷೆಯಲ್ಲಿ ದಾಖಲೆಯ 95% ಫಲಿತಾಂಶ ಬಂದಿರುತ್ತದೆ. ದ.ಕ, ಕೊಡಗು, ಚಿಕ್ಕಮಂಗಳೂರು, ಬೆಂಗಳೂರು ಹಾಸನದಿಂದ ಬಂದ ಒಟ್ಟಾರೆ 65 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 62 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.  ಕೊರೋನಾ ಮಧ್ಯೆಯು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದುದರ...
ಪುತ್ತೂರು

ಪುತ್ತೂರು: ಕಲ್ಲೇಗ ಟೈಗರ್ಸ್ 3ನೇ ವರ್ಷದ ಹುಲಿವೇಷ ಪ್ರದರ್ಶನ; ಕೋವಿಡ್ ನಿಯಮಾನುಸಾರ ಸರಳ ರೀತಿಯಲ್ಲಿ ಆಚರಣೆ- ಕಹಳೆ ನ್ಯೂಸ್

ಪುತ್ತೂರು: ದಸರಾಹಬ್ಬ ಬರುತ್ತಿದ್ದಂತೆ ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. ಆದರೆ ಕೊರೊನ ಮಹಾಮಾರಿ ಹಿನ್ನಲೆಯಲ್ಲಿ ಈ ವರ್ಷ ಸರಳತೆಯಲ್ಲಿ ನಡೆಸುವಂತೆ ಸರ್ಕಾರ ಆದೇಶಿಸಿದೆ. ಇದರಂತೆ ಪುತ್ತೂರಿನಲ್ಲಿ ಕಳೆದ 2ವರ್ಷದಿಂದ ತುಳುನಾಡ ಸಂಸ್ಕೃತಿಯಂತೆ ಕಲ್ಲೇಗ ಟೈಗರ್ಸ್ ನಡೆಸಿಕೊಂಡು ಬರುತ್ತಿರುವ ಹುಲಿವೇಷ ಕುಣಿತವು ಈ 3ನೇ ವರ್ಷದಂದು ಸರ್ಕಾರದ ನಿಯಮಕ್ಕನುಸಾರವಾಗಿ ಸರಳ ರೀತಿಯಲ್ಲಿ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಇದರಂತೆ ಇಂದು ಹುಲಿವೇಷ ಪ್ರದರ್ಶನದ ಕರಪತ್ರ ಬಿಡುಗಡೆ ನಡೆಯಿತು. ಮಹಾಲಿಂಗೇಶ್ವರನ ಸನ್ನಿದಿಯಲ್ಲಿ ಕರಪತ್ರಕ್ಕೆ...
ಪುತ್ತೂರು

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ -ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ನೂತನ ತಾಲೂಕು ಸಮಿತಿ ರಚನಾ ಸಭೆಯು ಇಂದು ಪುತ್ತೂರಿನ ಬ್ಲಡ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿರುವ ರೋಟರಿ ಟ್ರಸ್ಟ್ ಹಾಲ್‍ನಲ್ಲಿ ಜರಗಿತು. ಈ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಂತಿನಗರದ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕೆ, ಉಪಾಧ್ಯಕ್ಷರಾಗಿ ರಾಮ್‍ದಾಸ್, ಹಾಗೂ ಹೇಮಜಯರಾಮ ರೈ ಪುತ್ತೂರು ಕೋಶಾಧ್ಯಕ್ಷರಾಗಿ ಅನೀಶ್, ಉಪಾಧ್ಯಕ್ಷರಾಗಿ ನಿಶಾಂತ್ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಚೈತ್ರಾ ಬಂಗೇರ, ರಾಜಶೇಖರ್ ಅವರು ಆಯ್ಕೆಯಾಗಿರುತ್ತಾರೆ.ಕಾರ್ಯಕಾರಿಣಿ ಸಮಿತಿಗೆ ಆದಿತ್ಯಾ,ಭರತ್...
1 336 337 338 339 340 350
Page 338 of 350