21 ದಿನಗಳ ” ರೋಟರಿ ಮಿಷನ್ ಫಿಟ್ ” ಕಾರ್ಯಕ್ರಮಕ್ಕೆ ನಾಳೆ ಚಾಲನೆ ; ರೋಟರಿ ಪುತ್ತೂರು ಯುವಾ ನೇತೃತ್ವದಲ್ಲಿ ” ಫಿಟ್ ಇಂಡಿಯಾ ” ಅಭಿಯಾನಕ್ಕೆ ಸಾಥ್..! – ಕಹಳೆ ನ್ಯೂಸ್
ಪುತ್ತೂರು: ಭಾರತದಾದ್ಯಂತ ನಡೆಯುತ್ತಿರುವ “ಫಿಟ್ ಇಂಡಿಯಾ” ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಸಂತ ಫಿಲೋಮಿನಾ ಕಾಲೇಜಿನ ಸಹಯೋಗದೊಂದಿಗೆ 21 ದಿನಗಳ ರೋಟರಿ ಮಿಷನ್ ಫಿಟ್ ಪುತ್ತೂರು ಕಾರ್ಯಕ್ರಮವನ್ನು ನ 1 ರಿಂದ 21 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಚೇರ್ ಮೆನ್ ಪಶುಪತಿ ಶರ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಕಾರ್ಯಕ್ರಮದ ಮುಖ್ಯ ಉದ್ದೇಶ ಪುತ್ತೂರಿನ ನಾಗರೀಕರಿಗೆ ಸರಳ ವ್ಯಾಯಮದ ಮೂಲಕ ತಮ್ಮ ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳುವುದು...







