Wednesday, March 11, 2026

ಪುತ್ತೂರು

ಪುತ್ತೂರು

ಬೆಳ್ಳಾರೆಯಲ್ಲಿ ಡಿಸೆಂಬರ್ 8 ಮತ್ತು10 ರಂದು ವಿದ್ಯುತ್ ನಿಲುಗಡೆ, ಪ್ರಕರಣ ಹೊರಡಿಸಿದ ಮೆಸ್ಕಾಂ-ಕಹಳೆ ನ್ಯೂಸ್

ಪುತ್ತೂರು: 33ಕೆವಿ ಮಾಡಾವು ಕಟ್ಟೆ-ಬೆಳ್ಳಾರೆ ಏಕ ಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಡಿಸೆಂಬರ್.8 ಮತ್ತು ಡಿ.10 ರಂದು ವಿದ್ಯುತ್ ನಿಲುಗಡೆಯಾಗಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ ೫ ಗಂಟೆಯ ತನಕ ವಿದ್ಯುತ್ ನಿಲುಗಡೆಯಾಗಲಿದ್ದು, 33/11 ಕೆವಿ ಬೆಳ್ಳಾರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ಸರಬರಾಜಾಗುವ ಎಲ್ಲಾ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿಕೊಂಡಿದೆ....
ಪುತ್ತೂರು

ಆರ್ಕಿಟೆಕ್ಚರ್‌ನಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೊನಾ ಎಸ್. ಟಿ ಗೆ 174 ನೇ ರ‍್ಯಾಂಕ್ – ಕಹಳೆ ನ್ಯೂಸ್

ಪುತ್ತೂರು: ಆರ್ಕಿಟೆಕ್ಚರ್ ಇಂಜಿನಿಯರಿಂಗ್‍ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ನವೆಂಬರ್ 27 ರಂದು ಬಿಡುಗಡೆ ಮಾಡಿದ ರಾಷ್ಟ್ರ ಮಟ್ಟದ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮೊನಾ ಎಸ್ ಟಿ 174 ನೇ ರ‍್ಯಾಂಕ್ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ನಾಟಾ ಮತ್ತು ಜೆಇಇ ಪೇಪರ್ 2 ಫಲಿತಾಂಶವನ್ನು ಪರಿಗಣಿಸಿ ಈ ರ‍್ಯಾಂಕ್ ನ್ನು ನೀಡಲಾಗಿದೆ. ಇವಳು ಹಾಸನದ ಅರಕಲಗೂಡಿನ ತಿಮ್ಮೆಗೌಡ ಮತ್ತು ಸುಮಿತ್ರ ದಂಪತಿಗಳ ಸುಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ...
ಪುತ್ತೂರು

ಡಿಸೆಂಬರ್ 5 ರಂದು ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ ಶ್ರೀ ವಿ ಕ್ರಿಯೇಷನ್ಸ್ – ಕಹಳೆ ನ್ಯೂಸ್

ಪುತ್ತೂರು : ನೂತನವಾಗಿ ಪುತ್ತೂರುನಲ್ಲಿ ಶ್ರೀ ವಿ ಕ್ರಿಯೇಷನ್ಸ್, ಎಡಿಟಿಂಗ್ ಸ್ಟುಡಿಯೋ ಆ್ಯಂಡ್ ಪ್ರೋಡಕ್ಷನ್ ಹೌಸ್, ಡಿಸೆಂಬರ್ 5 ರಂದು ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ. ಕೊಂಬೆಟ್ಟು ರಸ್ತೆಯ ಸ್ನೇಹ ಟೆಕ್ಸ್‍ಟೈಲ್ ಸಮೀಪ, ನೂತನವಾಗಿ ಶುಭಾರಂಭಗೊಳ್ಳುವ ಎಡಿಟಿಂಗ್ ಸ್ಟುಡಿಯೋ ಆ್ಯಂಡ್ ಪ್ರೋಡಕ್ಷನ್ ಹೌಸ್‍ನ ಒಪನಿಂಗ್ ಕಾರ್ಯಕ್ರಮಕ್ಕೆ ಕೋಸ್ಟಲ್‍ವುಡ್ ನಟ ರಾಹುಲ್, ವಿಜೆ ವಿನೀತ್, ಹಾಗೂ ನಟಿ ಚೈತ್ರ ಶೆಟ್ಟಿ, ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇನ್ನೂ ಶ್ರೀ ವಿ ಕ್ರಿಯೇಷನ್‍ನಲ್ಲಿ, ಶಾರ್ಟ್‍ಫಿಲಂ, ಆಲ್ಬಂ ಸಾಂಗ್...
ಪುತ್ತೂರು

ಕೌಡಿಚ್ಚಾರು ಬೈಕ್ ಅಪಘಾತ, ಅರಂತೋಡು ಪಿಂಡಿ ನಿವಾಸಿ ಪ್ರವೀಣ್ ಸಾವು – ಕಹಳೆ ನ್ಯೂಸ್

ಸುಳ್ಯ: ಎರಡು ವಾರಗಳ ಹಿಂದೆ ಪುತ್ತೂರು ತಾಲ್ಲೂಕಿನ ಕೌಡಿಚ್ಚಾರ್ ಬಳಿ ದನ ಅಡ್ಡ ಬಂದಿದ್ದ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಪ್ರವೀಣ್ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ. ಸುಳ್ಯ ತಾಲೂಕಿನ ಅರಂತೋಡು ಪಿಂಡಿ ಮನೆ ನಿವಾಸಿಯಾಗಿರುವ ಪ್ರವೀಣ್ ಅವರಿಗೆ, ಬೈಕ್ ಸ್ಕಿಡ್ ಆಗಿ ಬಿದ್ದ ವೇಳೆ ಗಂಭೀರ ಗಾಯಗಳಾಗಿತ್ತು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಇಂದು ಇವರು ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದಾರೆ....
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣ ; 15 ಇಂಚು ಉದ್ದದ ಕತ್ತಿ, ಹರಿತವಾದ ಚಾಕು ವಶಕ್ಕೆ, ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಪುತ್ತೂರು: ದ.ಕ.ಜಿಲ್ಲೆಯಲ್ಲೇ ಭಾರಿ ಪ್ರಮಾಣದ ಗಾಂಜಾ ಪ್ರಕರಣವನ್ನು ಬೇಧಿಸಿದ ಪುತ್ತೂರು ನಗರ ಪೊಲೀಸರು ಇದೀಗ ಮತ್ತೊಮ್ಮೆ ಗಾಂಜಾ ಮಾರಾಟ ಜಾಲವನ್ನು ಎಸ್.ಐ ಜಂಬೂರಾಜ್ ನೇತೃತ್ವದ ದಾಳಿಯಿಂದ ಪತ್ತೆ ಮಾಡಿ ಸುಮಾರು ೬ ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ನ.೩೦ರಂದು ಪುತ್ತೂರಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್‌ಸಿಂಗ್ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.   ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ನಿರ್ದೇಶನದಂತೆ ಎ.ಎಸ್ಪಿ...
ಪುತ್ತೂರು

ಬೈಕ್-ಬೊಲೆರೋ ಜೀಪ್ ನಡುವೆ ಭೀಕರ ಅಪಘಾತ:ವ್ಯಕ್ತಿಯೋರ್ವ ಸಾವು-ಕಹಳೆ ನ್ಯೂಸ್

ಪುತ್ತೂರು: ಬೈಕ್ ಹಾಗೂ ಬೊಲೆರೋ ಜೀಪ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಬೈಕ್ ಸವಾರ ಪರ್ಲಡ್ಡದ ಹಾಸೀಮ್ ಎಂದು ತಿಳಿದುಬಂದಿದೆ. ಹೊಸದಾಗಿ ಆರಂಭಗೊಂಡ ಮೆಡಿಕಲ್  ಶಾಪ್‍ಗೆ ಬರುತ್ತಿದ್ದ ಹಾಸೀಮ್ ಅವರಿಗೆ ಬೈಪಾಸ್ ರಸ್ತೆ ಕಡೆಗೆ ಬರುತ್ತಿದ್ದ -ಬೊಲೆರೋ ಡಿಕ್ಕಿ ಹೊಡೆದಿದ್ದರಿಂದ ಅಪಘಾತದಲ್ಲಿ ತೀವ್ರ ಗಾಯಗೊಂಡ ಹಾಸೀಮ್ ಅವರು ಕೊನೆಯುಸಿರೆಳೆದಿದ್ದಾರೆ....
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಪ್ರತಿಷ್ಠಿತ ದ್ವಿಚಕ್ರ ವಾಹನದ ಶೋರೂಂಗೆ ಅಕ್ರಮ ಪ್ರವೇಶ ಮಾಡಿ ಮಾಲೀಕರ ಮೇಲೆ ಮಾಜಿ ಕೆಲಸಗಾರನಿಂದ ಹಲ್ಲೆ ; ಉಂಡ ಮನೆಗೆ ಎರಡು ಬಗೆಯಲು ಮುಂದಾದನೇ ಈತ…!? – ಕಹಳೆ ನ್ಯೂಸ್

ಪುತ್ತೂರು : ನಗರದ ಪ್ರತಿಷ್ಠಿತ ದ್ವಿಚಕ್ರ ವಾಹನ ಮಳಿಗೆಯಲ್ಲಿ ಸಂಸ್ಥೆಯ ಮಾಲಕರ ಮೇಲೆ ಮಾಜಿ ಕೆಲಸಗಾರ, ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದದಿಂದ‌ ನಿಂದಿಸಿ, ಹಲ್ಲೆ ನಡೆಸಿದ ಘಟನೆ (ನ. 25)ನಡೆದಿದೆ. ಘಟನೆಯ ಹಿನ್ನಲೆ : ಸದ್ರಿ ಸಂಸ್ಥೆಯ ಕೆಲಸಗಾರನು 3 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದು, ಈತ ಸಂಸ್ಥೆಯ ಮಾಲೀಕರ ವಿರುದ್ಧ ಹಗೆ ಸಾದಿಸಲು ಕಾಯುತ್ತಿದ್ದ ಎನ್ನಲಾಗುತ್ತಿದೆ. ಅಲ್ಲದೆ, ಆತ ಸಂಸ್ಥೆಯಿಂದ ಆತನಿಗೆ ಬರಬೇಕಾಗಿದ್ದ ಪಿಎಫ್ ಬಗ್ಗೆ ಕೇಳಿ,...
ಪುತ್ತೂರು

ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಕ್ಷೇತ್ರದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ಮಾಧವ ಗೌಡ ಕಾಂತಿಲ ಆಯ್ಕೆ – ಕಹಳೆ ನ್ಯೂಸ್

ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವ ಕ್ಷೇತ್ರದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯು ದೈವಸ್ಥಾನದ ವಠಾರದಲ್ಲಿ ನಡೆಯಿತು. ಕೆ. ಮಾಧವ ಗೌಡ ಕಾಂತಿಲ ಅಧ್ಯಕ್ಷರಾಗಿ ಆಯ್ಕೆಯಾದರು. ಉಳಿದಂತೆ ಅಶೋಕ್ ಕುಮಾರ್ ಉಜ್ರಿಪಾದೆ, ಶ್ರೀಮತಿ ಹರಿಣಿ, ಶ್ರೀಮತಿ ಸ್ವರ್ಣಲತ, ಶ್ರೀ ನಾರಾಯಣ ಪೂಜಾರಿ, ಭೋಜರಾಜ ಗೌಡ, ಶಾಮಣ್ಣ ನಾಯಕ್, ಕಿರಣ್ ಕುಮಾರ್ ರೈ ಅವರು ಸದಸ್ಯರಾಗಿ ಆಯ್ಕೆಗೊಂಡಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಮುರಳಿಕೃಷ್ಣ ಹಸಂತ್ತಡ್ಕ, ಆಡಳಿತಾಧಿಕಾರಿ ರಾಮಣ್ಣ ನಾಯ್ಕ್...
1 331 332 333 334 335 350
Page 333 of 350