Thursday, March 12, 2026

ಪುತ್ತೂರು

ದಕ್ಷಿಣ ಕನ್ನಡಪುತ್ತೂರುಬೆಂಗಳೂರುಸುದ್ದಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನ ಮನ ಗೆದ್ದ ಪುತ್ತೂರಿನ ಮಧುಮಿತಾ ರಾವ್ ಪಡುಮಲೆ ವೀಣಾ ವಾದನ‌ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಂಗಳೂರು/ ಪುತ್ತೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುತ್ತೂರಿನ ಮಧುಮಿತಾ ರಾವ್ ಪಡುಮಲೆ ವೀಣಾ ವಾದನ‌ ಕಾರ್ಯಕ್ರಮ ಜನ ಮನ‌ ಗೆದ್ದಿದೆ. ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಇವರು ವೀಣಾ ವಾದನ ಜನರ ಹೆಚ್ಚಿಗೆಗೆ ಪಾತ್ರವಾಯಿತು. ಮಧುಮಿತಾ ರಾವ್ ಪಡುಮಲೆ ಮಧುಮಿತಾ ರಾವ್ ಅವರು ಪುತ್ತೂರಿನ ವೀಣಾವಾದನದ ತರಗತಿಗಳನ್ನು ಮಾಡುತ್ತಿದ್ದು, ಅನೇಕ ವಿದ್ಯಾರ್ಥಿಗಳು ಇವರ ಬಳಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇವರು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು, ಆಪಾರ ಜನಮನ್ನಣೆಗೆ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ತುಳು ನಾಡ ಜನಪದ,ಕಲೆ ಸಂಸ್ಕ್ರತಿ ಉಳಿವಿಗಾಗಿ ಅದ್ದೂರಿ ಪಿಲಿಗೊಬ್ಬು-2025 ಕಾರ್ಯಕ್ರಮ- ಸಹಜ್ ರೈ ಬಳಜ್ಜ -ಕಹಳೆ ನ್ಯೂಸ್

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಸೆಪ್ಟೆಂಬರ್-28 ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಜರಗುವ ಪುತ್ತೂರುದ ಪಿಲಿಗೊಬ್ಬು,ಫುಡ್ ಫೆಸ್ಟ್-2025 ಇದರ ಪೂರ್ವಭಾವಿ ಸಭೆಯು ದರ್ಬೆಯ ಶ್ರೀ ರಾಮಸೌಧ ಕಟ್ಟಡದಲ್ಲಿ ಜರುಗಿತು. ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ವಿವಿಧ ಜವಾಬ್ದಾರಿಗಳ ಹಂಚಿಕೆ, ಕಾರ್ಯಕ್ರಮದ ವ್ಯವಸ್ಥೆಗಳ ರೂಪುರೇಷೆಯ ಚರ್ಚೆಯನ್ನು ನಡೆಸಲಾಯಿತು. ಬಳಿಕ ಸಭೆಯನ್ನುದ್ದೇಶಿಸಿ ವಿಜಯಸಾಮ್ರಾಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರು ಮಾತನಾಡುತ್ತಾ, ಸಂಸ್ಥೆಯು...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಅಂಬಿಕಾದಲ್ಲಿ ರಾಣಿ ಅಬ್ಬಕ್ಕ ಐನೂರನೇ ವರ್ಷಾಚರಣೆ ಪ್ರಯುಕ್ತ ಉಪನ್ಯಾಸ ; ಹೋರಾಟದ ಇತಿಹಾಸದಲ್ಲಿ ಹೆಣ್ಣುಮಕ್ಕಳಿಗೆ ಮನ್ನಣೆ ದೊರೆತಿಲ್ಲ: ಲತೇಶ್ ಬಾಕ್ರಬೈಲ್ -ಕಹಳೆ ನ್ಯೂಸ್

ಪುತ್ತೂರು: ಭಾರತದ ಸ್ವಾತಂತ್ರ್ಯ ಹೋರಾಟದ ಬಗೆಗಿನ ಇತಿಹಾಸದಲ್ಲಿ ಹೆಣ್ಣುಮಕ್ಕಳ ಕ್ರಾಂತಿಗೆ ಸರಿಯಾದ ಮನ್ನಣೆ ದೊರೆತಿಲ್ಲ. ಹಾಗಾಗಿ ಈ ದೇಶಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡ ಅವೆಷ್ಟೋ ನಾರಿಯರ ಕಥಾನಕಗಳು ಪ್ರಚಾರವೇ ಇಲ್ಲದೆ ಮೂಲೆಗುಂಪಾಗಿದೆ. ಈ ದೇಶಕ್ಕಾಗಿ ಮೊತ್ತಮೊದಲ ಹೋರಾಟ ನಡೆಸಿದ್ದು ಒಬ್ಬಾಕೆ ಹೆಣ್ಣುಮಗಳು ಮತ್ತು ಆಕೆಯ ಹೆಸರು ರಾಣಿ ಅಬ್ಬಕ್ಕ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಹ ಕಾರ್ಯದರ್ಶೀ ಲತೇಶ್ ಬಾಕ್ರಬೈಲ್ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಪುತ್ತೂರಿನಲ್ಲಿ ಮೊದಲ ಬಾರಿಗೆ ಹೋಮ್‌ಲಿ ಬೈಟ್ಸ್ ಓಣಂ ಹಬ್ಬ -ಕಹಳೆ ನ್ಯೂಸ್

ಪುತ್ತೂರು : ಹೋಮ್‌ಲಿ ಬೈಟ್ಸ್ ಕಳೆದೆರಡು ವರ್ಷದಿಂದ ಶುದ್ಧ ಹಾಗೂ ಸಾಂಪ್ರದಾಯಿಕ ಶೈಲಿಯ ತಿಂಡಿ ತಿನಿಸುಗಳನ್ನು ನೀಡುತ್ತಿದ್ದು ಜನ ಮನ್ನಣೆ ಗಳಿಸಿದೆ.ಇದೀಗ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಓಣಂ ಹಬ್ಬದ ಪ್ರಯುಕ್ತ, ನೆರೆ ರಾಜ್ಯ ಕೇರಳದಲ್ಲಿ ಜಾತಿ ,ಮತ, ರಾಜಕೀಯ ಬೇಧ ಇಲ್ಲದೆ ಬಹಳ ಮುಖ್ಯವಾಗಿ ಆಚರಿಸುವ ಓಣಂ ಹಬ್ಬದ ಸಂದರ್ಭದಲ್ಲಿ ನಮ್ಮ ಪುತ್ತೂರಲ್ಲಿ ಎಲ್ಲರಿಗೂ ಮುಕ್ತವಾಗಿ ಬಾಳೆ ಎಲೆಯಲ್ಲಿ ಕಾಳನ್, ಓಲನ್ , ಅಡ ಪ್ರಥಮನ್ ಇತ್ಯಾದಿ 25 ಮಿಕ್ಕಿ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ : ಪ್ರತೀಯೊಬ್ಬ ಪ್ರತಿಭಾವಂತರೂ ಪುತ್ತೂರಿನ ಆಸ್ತಿಯಾಗಿದ್ದಾರೆ; ಶಾಸಕ ಅಶೋಕ್ ರೈ -ಕಹಳೆ ನ್ಯೂಸ್

ಪುತ್ತೂರು: ಯಾರಲ್ಲಿ ಯಾವ ಪ್ರತಿಭೆ ಇದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ, ಪ್ರತೀಯೊಬ್ಬರಲ್ಲೂ ಒಂದೊಂದು ಪ್ರತಿಭೆಗಳಿದ್ದು ಅದಕ್ಕೆ ಪ್ರೋತ್ಸಾಹ ನೀಡುವ ಮೂಲಕ ಅದನ್ನು ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ನಮ್ಮೆಲ್ಲರ ಮೇಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ತಮ್ಮ ಕಚೇರಿಯಲ್ಲಿ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಪುತ್ತೂರಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ತುತ್ತಮ ಅಂಕ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಬಲ್ನಾಡ್ : ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಪ್ರಶಸ್ತಿ -ಕಹಳೆ ನ್ಯೂಸ್

ಪುತ್ತೂರು  : ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ವತಿಯಿಂದ 2024-25ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಸಾಧನೆಗೈದ ಹಾಲು ಉತ್ಪಾದಕರ ವ್ಯವಹಾರದಲ್ಲಿ ಸಹಕಾರಿ ಸಂಘಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಬಲ್ನಾಡ್ ಪುತ್ತೂರು ತಾಲೂಕು ಇವರಿಗೆ ಅತ್ಯುತ್ತಮ ಸಾಧನೆ ಪ್ರಶಸ್ತಿ ಲಭಿಸಿದೆ. ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷರಾದ ಪೂರ್ಣಿಮಾ ಚೆನ್ನಪ್ಪ ಮತ್ತು ಕಾರ್ಯದರ್ಶಿ ರೇಖಾ ರಮೇಶ್ ಬ್ರಹ್ಮರಕೋಡಿ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ವತಿಯಿಂದ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳು ನರಿಮೊಗರುನಲ್ಲಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ -ಕಹಳೆ ನ್ಯೂಸ್

ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ವತಿಯಿಂದ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳು ನರಿಮೊಗರು ಇಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ದೀಪ್ತಿ 10ನೇ ತರಗತಿ ಹಾಗೂ ಜ್ಞಾನವಿ.ಎನ್ 9ನೇ ತರಗತಿ ರಿದಮಿಕ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ಆರ್ಟಿಸ್ಟಿಕ್ ವಿಭಾಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ರಕ್ಷ ಎಂ.ಜೆ ಮತ್ತು ಇಂಚರ ತೃತೀಯ ಸ್ಥಾನ, 17ರ ವಯೋಮಾನದ ಬಾಲಕರ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಪ್ರಾದೇಶಿಕರಾಜ್ಯಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಬಾಹ್ಯಕಾಶ ದಿನಾಚರಣೆ-ಕಹಳೆ ನ್ಯೂಸ್

ಪುತ್ತೂರು: ಭಾರತೀಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಯನ್ನು ಮಾಡುತ್ತಿದ್ದಾರೆ. ಅದರಂತೆ ೨೦೨೭ ನೇ ಇಸವಿಯಲ್ಲಿ ಚಂದ್ರನ ಮೇಲೆ ಭಾರತೀಯರು ಕಾಲಿಡುವತ್ತ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮುನ್ನಡೆಯುತ್ತಿದೆ ಎಂದು ಎಂಐಟಿ ಮಣಿಪಾಲ ಪ್ರಾಧ್ಯಪಕ ಡಾ. ಮಹೇಶ್. ಎಂ. ಜಿ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿನ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ, ರಾಷ್ಟ್ರೀಯ...
1 18 19 20 21 22 350
Page 20 of 350