ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ (ರಿ.) ಬೆಂಗಳೂರು ಇದರ ನೂತನ ಗೌರವಾಧ್ಯಕ್ಷರಾಗಿ ಯಕ್ಷಗಾನ ಕಲಾ ಪೋಷಕ ಆರ್.ಕೆ.ಭಟ್ ಬೆಳ್ಳಾರೆ ಆಯ್ಕೆ – ಕಹಳೆ ನ್ಯೂಸ್
ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ (ರಿ.) ಬೆಂಗಳೂರು ಇದರ ನೂತನ ಗೌರವಾಧ್ಯಕ್ಷರಾಗಿ ಬೆಂಗಳೂರು ಮಹಾನಗರದಲ್ಲಿ ಪ್ರಸ್ತುತ ನೆಲೆಸಿರುವ ಯಕ್ಷಗಾನ ಕಲಾ ಪೋಷಕ ಆರ್.ಕೆ.ಭಟ್ ಬೆಳ್ಳಾರೆ ಇವರನ್ನು ಆಯ್ಕೆಮಾಡಲಾಗಿದೆ ಎಂದು ಟ್ರಸ್ಟ್ ನ ಸರ್ವ ಸದಸ್ಯರ ಸಭೆಯ ಬಳಿಕ ಅಧ್ಯಕ್ಷ ವೆಂಕಟೇಶ್ ರಾವ್ ಕೆ ತಿಳಿಸಿದ್ದಾರೆ. 2019ರಲ್ಲಿ 'ಯಕ್ಷಮಿತ್ರರು ಬೆಂಗಳೂರು' ಯಕ್ಷಗಾನಾಸಕ್ತರ ವಾಟ್ಸಾಪ್ ಗ್ರೂಪ್ ರಚನೆಯಾಗಿತ್ತು. ಬಳಿಕ ಅದರ ಮೂಲಕ ಕಲೆ, ಯಕ್ಷಗಾನ, ತಾಳಮದ್ದಳೆ ಪೋಷಿಸುವ ಸದುದ್ದೇಶದಿಂದ ಬೆಂಗಳೂರಿನಲ್ಲಿ ಯಕ್ಷ ಮಿತ್ರರು...







