ಸೌತಡ್ಕ ನೂಜೆ ತುಕ್ರಪ್ಪ ಶೆಟ್ಟಿ ಮನೆ ದರೋಡೆ ಪ್ರಕರಣ ; ದರೋಡೆಕೋರರಿಗೆ ವರವಾದ ಗ್ರಾಮ ಪಂಚಾಯತ್ ಚುನಾವಣೆ – ಕಹಳೆ ನ್ಯೂಸ್
ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್ ನಾಯಕ ನೂಜೆ ತುಕ್ರಪ್ಪ ಶೆಟ್ಟಿ ಅವರ ನಿವಾಸದಲ್ಲಿ ನಡೆದ ದರೋಡೆ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಸುಮಾರು 400 ಗ್ರಾಂ ಮತ್ತು 1,50,000 ರೂ.ಗಳ ನಗದು ಚಿನ್ನದ ಆಭರಣಗಳನ್ನು ದೋಚಿರುವ ದರೋಡೆಕೋರರು ತುಕ್ರಪ್ಪ ಶೆಟ್ಟಿಯವರನ್ನು ಕಟ್ಟಿಹಾಕಿದ್ದಲ್ಲದೆ ಅವರ ಪತ್ನಿಗೆ ಚೂರಿಯಿಂದ ಇರಿದಿದ್ದರು, ಹಾಗೂ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದರು. ಅವರು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿರಬಹುದು ಅಂದಾಜಿಸಲಾಗಿದ್ದು, ಅವರು...







