ಬೆಳ್ತಂಗಡಿ :ನಾಳೆ(ನ.22): ಉಜಿರೆ-ಧರ್ಮಸ್ಥಳ -ಪೆರಿಯಶಾಂತಿ ಸ್ಪರ್ ರಸ್ತೆ ಕಾಮಗಾರಿಗೆ ದ್ವಾರದ ಬಳಿಯ ಬಸ್ ನಿಲ್ದಾಣ ಧರ್ಮಸ್ಥಳದಲ್ಲಿ ಶಿಲಾನ್ಯಾಸ : ಧರ್ಮಸ್ಥಳದಲ್ಲಿ ಬೆಂಗಳೂರು ಮಾದರಿಯ ಅಂಡರ್ ಪಾಸ್ ನಿರ್ಮಾಣ-ಕಹಳೆ ನ್ಯೂಸ್
ಬೆಳ್ತಂಗಡಿ : ಉಜಿರೆ- ಧರ್ಮಸ್ಥಳ -ಪೆರಿಯಶಾಂತಿ ಸ್ಟರ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ನಾಳೆ ನ.22 ರಂದು ಬೆಳಗ್ಗೆ 9:30ಕ್ಕೆ ದ್ವಾರದ ಬಳಿಯ ಬಸ್ ನಿಲ್ದಾಣ ಬಳಿ ಧರ್ಮಸ್ಥಳ ದಲ್ಲಿ ಶಿಲಾನ್ಯಾಸ ನಡೆಯಲಿದೆ. ರೂ.614 ಕೋಟಿ ವೆಚ್ಚದ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಹೆದ್ದಾರಿಗಳ ನಿರ್ವಹಣೆ ಯೋಜನೆಯಲ್ಲಿ 30 ಕಿ.ಮೀ. ವ್ಯಾಪ್ತಿಯ ಈ ಸ್ಟರ್ ರಸ್ತೆ ಅಭಿವೃದ್ಧಿ ಹೊಂದಲಿದೆ. ಕಾಮಗಾರಿಯಲ್ಲಿ ರಸ್ತೆ ವಿಸ್ತರಣೆಗೊಳ್ಳಲಿದ್ದು, ಸುಸಜ್ಜಿತ ಚರಂಡಿಗಳು,...







