ಬೆಳ್ತಂಗಡಿಯಲ್ಲಿ OTP ಫ್ರಾಡ್: ಕಾಲ್ ಮಾಡಿ 15 ಸಾವಿರ ಲಪಟಾಯಿಸಿದ ಭೂಪ– ಕಹಳೆ ನ್ಯೂಸ್
ಬೆಳ್ತಂಗಡಿ: ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಂಬಿಸಿ ಓಟಿಪಿ ಪಡೆದು ಮೂರು ಬಾರಿ ಹಣ ವರ್ಗಾಯಿಸಿ ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬಿರ್ಲಾಜೆ ಮನೆಯ ಹರೀಶ್.ಬಿ ಎಂಬವರ ನಿಡ್ಲೆ ಕೆನರಾ ಬ್ಯಾಂಕ್ ಖಾತೆಯಿಂದ ಮೂರು ಬಾರಿ 10,236, 4,000, 500 ರೂಪಾಯಿ ಸೇರಿ ಒಟ್ಟು 15,000/- ಹಣವನ್ನು ದೆಹಲಿ ಮೂಲದ ಬ್ಯಾಂಕ್ ಖಾತೆಗೆ ವರ್ಗಾವಣೆಯಿಸಿಕೊಂಡಿದ್ದಾರೆ. ಹರೀಶ್.ಬಿ ಧರ್ಮಸ್ಥಳದಲ್ಲಿ ಉದ್ಯೋಗದಲ್ಲಿದ್ದು...







