Saturday, March 7, 2026

ಬಂಟ್ವಾಳ

ಬಂಟ್ವಾಳ

ಕೈತ್ರೋಡಿ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಚಂಡಿಕಾಯಾಗ, ಆನಂದ ಗುರೂಜಿ ಭಾಗಿ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಕೊಯ್ಲದ ಕೈತ್ರೋಡಿಯಲ್ಲಿರುವ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.15ರಂದು ರಾಧಾಕೃಷ್ಣ ಭಟ್ ಪೆದಮಲೆ ನೇತೃತ್ವದಲ್ಲಿ ವೇ.ಮೂ.ಸುಬ್ರಹ್ಮಣ್ಯ ಪರಾಡ್ಕರ್ ಗುಂಡ್ಯಡ್ಕ ಪೌರೋಹಿತ್ಯದಲ್ಲಿ ಶ್ರೀಚಂಡಿಕಾಯಾಗ ನಡೆಯಲಿದೆ. ಈ ಸಂದರ್ಭ ಪೂರ್ಣಾಹುತಿ ವೇಳೆ ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ವೇ.ಮೂ.ಕಮಲಾದೇವಿ ಆಸ್ರಣ್ಣ ಉಪಸ್ಥಿತರಿರುವರು ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೈತ್ರೋಡಿ ಕ್ವಾರ್ಟಸ್ ನ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ್ ತಿಳಿಸಿದರು....
ಬಂಟ್ವಾಳ

ಬಂಟ್ವಾಳ: ಭಾರಿ ಕುತೂಹಲದತ್ತ ಚುನಾವಣಾ ಕಣ; ‘ಕೈ’ ತೊರೆದು ‘ತಾವರೆ’ ಹಿಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯ; ಬಿಜೆಪಿಗೆ ಶಕ್ತಿಯಾಗಲಿದ್ದಾರಾ ಡಿ.ಕೆ. ಹಂಝ- ಕಹಳೆ ನ್ಯೂಸ್

ಬಂಟ್ವಾಳ: ಕಾಂಗ್ರೆಸ್ ನ ಮಾಜಿ ತಾಪಂ ಸದಸ್ಯ ಸಹಿತ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಹಾಗೂ ನಾಯಕರ ಅಸಮಾಧಾನ ದಿಂದ ಹಾಗೂ ಪಕ್ಷ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಬಂಟ್ವಾಳ ಬಿಜೆಪಿ ಪ್ರಕಟನೆ ತಿಳಿಸಿದೆ. ಮುಖ್ಯವಾಗಿ ಜಗದೀಶ್ ಶೆಟ್ಟಿ ಮವಂತೂರು,ಮಾಜಿ ತಾ.ಪಂ ಸದಸ್ಯ ಹಂಝ ಮಂಚಿ, ಚಂದ್ರಹಾಸ ಕರ್ಕೆರಾ ಅರಳ, ಮುಸ್ತಾಫ ಮೂಲರಪಟ್ಣ ಮತ್ತು ಹತ್ತಾರು ಕಾಂಗ್ರೆಸ್...
ಬಂಟ್ವಾಳಸುದ್ದಿ

ಬಂಟ್ವಾಳ: ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ಪಂಚಾಯತ್ ಮಾಜಿ ಸದಸ್ಯ ಡಿ.ಕೆ‌.ಹಂಝ ಸಹಿತ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಮ್ಮುಖದಲ್ಲಿ ತಾಪಂ ಮಾಜಿ ಸದಸ್ಯ ಹಂಝ ಮಂಚಿ, ಜಗದೀಶ್ ಶೆಟ್ಟಿ ಮವಂತೂರು, ಚಂದ್ರಹಾಸ ಕರ್ಕೆರ ಅರಳ, ಮುಸ್ತಫ ಮೂಲರಪಟ್ಣ ಮತ್ತು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಕೇಂದ್ರದಿಂದ ತೊಡಗಿ ಗ್ರಾಮ ಪಂಚಾಯತ್ ಹಂತದವರೆಗೂ ಬಿಜೆಪಿ ಪರ ಒಲವು ಇದೆ,...
ಬಂಟ್ವಾಳ

ಬಂಟ್ವಾಳ: ಆಟೋ ರಿಕ್ಷಾ ಪಲ್ಟಿಯಾಗಿ ಮೂರು ದಿನದ ಹಸುಗೂಸು ಸಾವು- ಕಹಳೆ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾವೊಂದು ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟಿದ್ದು, ಚಾಲಕ ಸಹಿತ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬುಧವಾರ ಸಂಜೆ ನಡೆದಿದೆ. ಗುರುಪುರ – ಕೈಕಂಬ ಮೂಲದ ಉಮೈರಾ ಎಂಬ ಮಹಿಳೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ...
ಬಂಟ್ವಾಳ

ಬಂಟ್ವಾಳ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಡಿಮಸ್ಟರಿಂಗ್ ಮತ್ತು ಮತ ಎಣಿಕೆಗಾಗಿ ಸ್ಥಳವನ್ನ ಪರಿಶೀಲಿಸಿದ ಅಧಿಕಾರಿಗಳು-ಕಹಳೆ ನ್ಯೂಸ್

ಬಂಟ್ವಾಳ: ಡಿಸೆಂಬರ್ 22ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಡಿಮಸ್ಟರಿಂಗ್ ಮತ್ತು ಮತ ಎಣಿಕೆಗಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಮೊಡಂಕಾಪು ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಶಾಲೆಯನ್ನು ಆಯ್ಕೆ ಮಾಡಲಾಗಿದ್ದು, ಇದರನ್ವಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು. ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್. ಆರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್,...
ಬಂಟ್ವಾಳ

ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪ್ರಕಟಣೆ ಹೊರಡಿಸಿದ ಪೊಳಲಿ ದೇವಸ್ಥಾನದ ಆಡಳಿತ ಮಂಡಳಿ -ಕಹಳೆ ನ್ಯೂಸ್

ಬಂಟ್ವಾಳ: ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಕುರಿತು ಕೆಲ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಭಕ್ತಾಭಿಮಾನಿಗಳ ಅವಗಾಹನೆಗಾಗಿ ಪ್ರಕಟಣೆಯೊಂದನ್ನು ಹೊರಡಿಸಿದೆ. ಶ್ರೀ ಪೊಳಲಿ ದೇವಸ್ಥಾನದ ದೇವರ ಗರ್ಭಗುಡಿಯಲ್ಲಿ  ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಸರಿಪಡಿಸುವ ಬಗ್ಗೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿರುವ ಪ್ರಕಾರ ನಡೆಯಬೇಕಾದ ಕಾರ್ಯಗಳ ಬಗ್ಗೆ ಆಡಳಿತ  ಮಂಡಳಿಯವರು ಸ್ಪಷ್ಟ  ಮಾಹಿತಿ ಯನ್ನು ಆದಷ್ಟು ಶೀಘ್ರದಲ್ಲಿ ನೀಡಲಿದ್ದಾರೆ . ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ...
ಬಂಟ್ವಾಳ

ಬಂಟ್ವಾಳದಲ್ಲಿ ನಿವೃತ್ತರು ವರ್ಗಾವಣೆ ಹೊಂದಿದ ಪೊಲೀಸ್ ಸಿಬ್ಬಂದಿಗೆ ಅಭಿನಂದನಾ ಸಮಾರಂಭ-ಕಹಳೆ ನ್ಯೂಸ್

ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಹಾಗೂ ಪದೋನ್ನತಿ ಹೊಂದಿ ವರ್ಗಾವಣೆ ಹೊಂದಿರುವ ಸಿಬ್ಭಂದಿಗೆ ಅಭಿನಂದನೆ, ಬೀಳ್ಕೊಡುಗೆ ಸಮಾರಂಭ ಬಂಟ್ವಾಳದಲ್ಲಿ ನಡೆಯಿತು. ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಮಾತನಾಡಿ, ಶುಭ ಹಾರೈಸಿದರು. ವಿಶ್ವನಾಥ ರೈ, ಕಲೈಮಾರ್ ಹಾಗೂ ವರ್ಗೀಸ್ ಅವರನ್ನು ಗೌರವಿಸಲಾಯಿತು. ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ ಅವಿನಾಶ್ ವಿಟ್ಲ ಎಸ್.ಐ. ವಿನೋದ್ ರೆಡ್ಡಿ ಉಪಸ್ಥಿತರಿದ್ದರು.ಪ್ರೊಬೆಷನರಿ ಎಸ್.ಐ.ನಸ್ರೀನಾ ತಾಜ್, ಗ್ರಾಮಾಂತರ ಠಾಣಾ ಅಪರಾಧ ವಿಭಾಗದ...
ಬಂಟ್ವಾಳ

ಬಂಟ್ವಾಳದಲ್ಲಿ ಪ್ರಶಿಕ್ಷಣ ವರ್ಗ ಸಮಾರೋಪ, ಕ್ರಿಯಾಶೀಲರಾಗಲು ಕಾರ್ಯಕರ್ತರಿಗೆ ಕರೆ-ಕಹಳೆ ನ್ಯೂಸ್

ಬಂಟ್ವಾಳ:  ಬಿಜೆಪಿ ಮಂಡಲದ ಪ್ರಶಿಕ್ಷಣ ಪ್ರಕೋಷ್ಟದ ವತಿಯಿಂದ ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನಹಿತಾಯ ವಿದ್ಯಾಲಯ ಸಭಾಭವನದಲ್ಲಿ ಎರಡು ದಿನಗಳ ಕಾಲ ನಡೆದ  ಬಂಟ್ವಾಳ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಸಮಾರೋಪ ಸೋಮವಾರ ನಡೆಯಿತು. ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಸಮಾರೋಪ ಭಾಷಣ ಮಾಡಿ, ಕ್ರಿಯಾಶೀಲ ಕಾರ್ಯಕರ್ತರಿಂದ ಪಕ್ಷದ ಬೆಳವಣಿಗೆ ಸಾಧ್ಯ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪ್ರಶಿಕ್ಷಣ ಸಂಚಾಲಕ ನಾರಾಯಣ ಭಂಡಾರಿ, ರಾಜ್ಯ ಪ್ರಕೋಷ್ಠ ಸಮಿತಿ...
1 204 205 206 207 208 210
Page 206 of 210