Saturday, March 14, 2026

ಮಂಗಳೂರು

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಚಾರ್ಮಾಡಿ ಘಾಟಿ ಕಾಮಗಾರಿ: ಗುತ್ತಿಗೆದಾರರ ಬದಲಿಸಲು ಆಗ್ರಹ-ಕಹಳೆ ನ್ಯೂಸ್

ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯ ಇನ್ನೂ ಆರಂಭವಾಗಿಲ್ಲ. ಇದರ ಗುತ್ತಿಗೆದಾರರು ಕೆಲಸವನ್ನು ಗಡುವಿನೊಳಗೆ ಪೂರ್ಣಗೊಳಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಗಾಗಿ ಗುತ್ತಿಗೆದಾರರನ್ನು ಬದಲಾಯಿಸಬೇಕು ಎಂದು ಜಿಲ್ಲೆಯ ಶಾಸಕರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಒತ್ತಾಯಿಸಿದರು. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಸಚಿವರ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಶಾಸಕ ಹರೀಶ ಪೂಂಜ, 'ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ ಈ ಹಿಂದೆಯೂ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33ನೇ ಕದ್ರಿ ವಾರ್ಡಿನ ನಂತೂರು ಬಬ್ಬುಸ್ವಾಮಿ ದೈವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ-ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33ನೇ ಕದ್ರಿ ವಾರ್ಡಿನ ನಂತೂರು ಬಬ್ಬುಸ್ವಾಮಿ ದೈವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನೆರವೇರಿಸಲಾಯಿತು. ನಂತರ ಮಾತನಾಡಿದ ಶಾಸಕರು, ಇಲ್ಲಿ ಅಗತ್ಯವಾಗಿ ನಡೆಯಬೇಕಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ವಾರ್ಡಿನ ಪಾಲಿಕೆ ಸದಸ್ಯ ಮನೋಹರ್ ಕದ್ರಿ ಯವರು ನನ್ನ ಗಮನಕ್ಕೆ ತಂದಿದ್ದು, ಶಾಸಕರ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೇ ಶೀಘ್ರವಾಗಿ ಪೂರ್ಣಗೊಳಿಸಲು ಸಹ ಕ್ರಮ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸಿಸಿಬಿ ಪೊಲೀಸರ ಭರ್ಜರಿ ಭೇಟೆ: 119 ಕೆ.ಜಿ. ಗಾಂಜಾ ಸಾಗಾಟ; ನಾಲ್ವರ ಸೆರೆ-ಕಹಳೆ ನ್ಯೂಸ್

ಮಂಗಳೂರು: ಆಂಧ್ರಪ್ರದೇಶದಿಂದ ಮಂಗಳೂರು ಮಾರ್ಗವಾಗಿ ಮೀನು ವಾಹನ ಹಾಗೂ ಕಾರಿನಲ್ಲಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದ್ದ ಬರೋಬ್ಬರಿ 35 ಲಕ್ಷ ರೂ. ಮೌಲ್ಯದ 119 ಕೆ.ಜಿ. ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಉಪ್ಪಳ ಮಂಗಲ್ಪಾಡಿ, ಪ್ರಸ್ತುತ ಬಂದ್ಯೋಡ್‌ ಕುಬನೂರು ನಿವಾಸಿ ಮೊಯ್ದಿàನ್‌ ಶಬ್ಬೀರ್‌(38), ಆಂಧ್ರಪ್ರದೇಶದ ಮಹೇಶ್‌ ದ್ವಾರಿಕಾನಾಥ ಪಾಂಡೆ(30), ಕೇರಳದ ಅಜಯ್‌ಕೃಷ್ಣ (33), ಹರಿಯಾಣದ ಜೀವನ್‌ ಸಿಂಗ್‌ (35) ಬಂಧಿತರು. ಇವರಿಂದ 119...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

2024ರ ಸಮ್ಮೇಳನ ಅಧ್ಯಕ್ಷರಾದ ಬನುವನೇಶ್ವರಿ ಹೆಗಡೆಯವರಿಗೆ ವಿಧ್ಯುಕ್ತವಾದ ಅಹ್ವಾನ-ಕಹಳೆ ನ್ಯೂಸ್

ಫೆ 21,22 ಮಂಗಳೂರು ವಿಶ್ವವಿದ್ಯಾನಿಲಯದ ಆವರಣ ಕೊಣಾಜೆಯಲ್ಲಿ ನಡೆಯುವ ಎರಡು ದಿನಗಳ ದಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನವನ್ನು ವಿಧ್ಯುಕ್ತವಾಗಿ ಹಿಂದಿನ ವರ್ಷದ ಮಂಗಳೂರಿನಲ್ಲಿ ನಡೆದ ಸಮ್ಮೇಳನ ಆಧ್ಯಕ್ಷರಾದ ಭುವನೇಶ್ವರಿ ಹೆಗಡೆಯವರಿಗೆ ಇಂದಿನ ಸಮ್ಮೇಳನ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾಕ್ಟರೇಟ್‌ ಧನಂಜಯ ಕುಂಬ್ಳೆ ತಂಡವು ನೀಡಿತು. ದಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮ್ಮೇಳನ ಖಜಾಂಚಿ ಲಯನ್ ಚಂದ್ರಹಾಸ ಶೆಟ್ಟಿ ಕನ್ನಡದ ಶಾಲು ತೊಡಿಸಿ ಗೌರವ ನೀಡಿದರು....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಪ್ರಾಯೋಜಿತ ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿಯ ಉದ್ಘಾಟನೆ-ಕಹಳೆ ನ್ಯೂಸ್

ಕಲ್ಲೇರಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, ಒಂದು ತಿಂಗಳ ಬಟ್ಟೆ ಕಸೂತಿ ತಯಾರಿಕೆಯ(ಆರಿ ವರ್ಕ್ )ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಕಲ್ಲೇರಿ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ ತರಬೇತಿ ಉದ್ಘಾಟಿಸಿದರು.ಭಾಗವಹಿಸಿ ದ ಮಹಿಳೆಯರಿಗೆ ಬಹಳ ನಾಜುಕಾದ ತರಬೇತಿಯನ್ನು ಉತ್ತಮ ಮಟ್ಟದಲ್ಲಿ ಪಡೆದು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ನೆರವೇರಿದ ಶತರುದ್ರಾಭಿಷೇಕ ಸೇವೆ ಲೋಕಸಭೆ ಚುನಾವಣೆಯಲ್ಲಿ ಕ್ಯಾ. ಚೌಟ ಗೆಲುವಿನ ಹರಕೆ ತೀರಿಸಿದ ಕಾರ್ಯಕರ್ತರು-ಕಹಳೆ ನ್ಯೂಸ್

ಮಂಗಳೂರು: ಲೋಕ ಕಲ್ಯಾಣಾರ್ಥವಾಗಿ ಹಾಗೂ ಹರಕೆಯ ಭಾಗವಾಗಿ ಬಿಜೆಪಿಯ ಉಪ್ಪಿನಂಗಡಿ, ಕಣಿಯೂರು ಮಹಾಶಕ್ತಿ ಕೇಂದ್ರದ ಮತ್ತು ಗ್ರಾಮಸ್ಥರು ವತಿಯಿಂದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಉಪಸ್ಥಿತಿಯಲ್ಲಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ಇಂದು ಶತರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು. ವೇದಮೂರ್ತಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ ನೆರವೇರಿಸಲಾಗಿದೆ. ಗೆಲುವಿನ ಹರಕೆ ತೀರಿಸಿದ ಕಾರ್ಯಕರ್ತರು...
ಅಂಕಣದಕ್ಷಿಣ ಕನ್ನಡಮಂಗಳೂರುಮುಂಬೈಸಿನಿಮಾಸುದ್ದಿ

ಕಣ್ಣಲ್ಲೇ ಮೋಡಿ ಮಾಡೋ ‘ತುಳುನಾಡ ಕ್ರಶ್’ ಸಮತಾ ಅಮೀನ್ – ಕಹಳೆ ನ್ಯೂಸ್

ಕಣ್ಣಲ್ಲೇ ಮೋಡಿ ಮಾಡೋ ಅಂದದ ಚೆಲುವೆ, ಹುಟ್ಟಿದ್ದು ಮುಂಬೈನಲ್ಲಾದರೂ ತುಳುನಾಡಿನ ಸಂಸ್ಕೃತಿ ಮೈಗೂಡಿಸಿಕೊಂಡಿರುವಾಕೆ. ದಿಲ್ ರಂಗ್ ಅನ್ನೋ ಆಲ್ಬಮ್ ಸಾಂಗ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ತುಳುನಾಡು ಕ್ರಶ್ ಅಂತ ಖ್ಯಾತಿ ಪಡೆದ ತುಳುನಾಡ ಬೆಡಗಿ ಸಮತಾ ಅಮೀನ್.   ಸಮತಾ ದಿ. ಅಶೋಕ್ ಅಮೀನ್ ಹಾಗೂ ಮಂಜುಳಾ ಅಮೀನ್ ದಂಪತಿಯ ಪ್ರೀತಿಯ ಮಗಳು. ಇವರು ಎಸ್ ಆರ್ ಪಿ ಸತ್ಯ ಸಾಯಿ ನಿಕೇತನ್ ಹೈಸ್ಕೂಲ್ ಹಾಗೂ ಸೈಂಥ್ ಥೋಮಸ್ ಹೈಸ್ಕೂಲ್‌ನಲ್ಲಿ ಪ್ರಾಥಾಮಿಕ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಚಾರ್ಮಾಡಿಯಲ್ಲಿ ಕಾಡಾನೆ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಪತ್ತೆ-ಕಹಳೆ ನ್ಯೂಸ್

ಮಂಗಳೂರು :ಕಾಡಾನೆಯೊಂದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು. ಸ್ಥಳಕ್ಕೆ ಪಶು ವೈದ್ಯರು ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನಾರು ಪ್ರದೇಶದ ಗುಡ್ಡದಲ್ಲಿ ಫೆ.13 ರಂದು ಮಧ್ಯಾಹ್ನ ಕಾಡನೇ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು ತಕ್ಷಣ ಸಿಬ್ಬಂದಿಗಳು ಹಾಗೂ ಪಶು ವೈದ್ಯರಾದ ಡಾ. ಯಶಸ್ವಿಯವರು ಸ್ಥಳಕ್ಕೆ ಹೋಗಿ ಚಿಕಿತ್ಸೆ ನೀಡುತ್ತಿದ್ದು....
1 48 49 50 51 52 105
Page 50 of 105