Saturday, March 7, 2026

ಮಡಿಕೇರಿ

ಕೊಡಗುಕ್ರೈಮ್ಮಡಿಕೇರಿಸುದ್ದಿ

ಹಿಜಾಬ್​-ಕೇಸರಿ ಸಂಘರ್ಷ ; ಕೇಸರಿ ಶಾಲು ಧರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಒಂದು ಕೋಮಿನ ವಿದ್ಯಾರ್ಥಿಗಳ ಗುಂಪು ದೌರ್ಜನ್ಯ ಆರೋಪ, ವಿದ್ಯಾರ್ಥಿಯಿಂದ ಮನನೊಂದ ಆತ್ಮಹತ್ಯೆಗೆ ಯತ್ನ – ಕಹಳೆ ನ್ಯೂಸ್

ಕೊಡಗು: ರಾಜ್ಯದಲ್ಲಿ ವಿಕೋಪಕ್ಕೆ ತೆರಳಿರುವ ಹಿಜಾಬ್​-ಕೇಸರಿ ಸಂಘರ್ಷಕ್ಕೆ ಸಿಲುಕಿ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೊಂದು ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ಅಂಥೋಣಿ ಪ್ರಜ್ವಲ್​ (18) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ. ಕೇಸರಿ ಶಾಲು ಧರಿಸಿದ್ದಕ್ಕೆ ಈತನ ಮೇಲೆ ಒಂದು ಕೋಮಿನ ವಿದ್ಯಾರ್ಥಿಗಳ ಗುಂಪು ದೌರ್ಜನ್ಯ ಆರೋಪ ಹೊರಿಸಿದ್ದಷ್ಟೇ ಅಲ್ಲದೆ ಹಲ್ಲೆಯನ್ನೂ ಮಾಡಿತ್ತು. ಇದರಿಂದ ನೊಂದು ಈತ...
ಕೊಡಗುದಕ್ಷಿಣ ಕನ್ನಡಮಡಿಕೇರಿರಾಜ್ಯಸುದ್ದಿಸುಳ್ಯ

ಹಿಂದೂ ಜಾಗರಣಾ ವೇದಿಕೆ ಪೊಲೀಸ್ ಇಲಾಖೆಗೆ ಮಾಹಿತಿ, ತಡರಾತ್ರಿ ಸಂಪಾಜೆ ಚೆಕ್‍ಪೋಸ್ಟ್ ಬಳಿ ಲಾರಿಯಲ್ಲಿ ಅಕ್ರಮ ಗೋಸಾಗಾಟ ಪತ್ತೆ ; 24 ಗೋವುಗಳ ರಕ್ಷಣೆ – ಕಹಳೆ ನ್ಯೂಸ್

ಮಡಿಕೇರಿ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಲಾರಿಯನ್ನು ಪತ್ತೆ ಹಚ್ಚಿ 24 ಗೋವುಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಚೆಕ್‍ಪೊಸ್ಟ್ ಬಳಿ ನಡೆದಿದೆ. ಸಂಪಾಜೆ ಅರಣ್ಯ ತಪಾಸಣಾ ಗೇಟ್ ಬಳಿ ತಡರಾತ್ರಿ ಲಾರಿಯಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಅರಣ್ಯ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿ, ಲಾರಿ ಸಮೇತ 24 ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖಾ ಸಿಬ್ಬಂದಿ ತಪಾಸಣೆಗೆ ಮುಂದಾಗುತ್ತಿದ್ದಂತೆ...
ಮಡಿಕೇರಿ

ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ – ಕಹಳೆ ನ್ಯೂಸ್

ಕೊಡಗು: ಪ್ರತಿ ವರ್ಷದಂತೆ, ಈ ವರ್ಷವೂ ಜೀವನದಿ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಆಗಿದೆ. ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಆಗಿದ್ದು, ಜೀವನದಿ ಕಾವೇರಿ ತೀರ್ಥೋದ್ಭವವನ್ನು ನೂರಾರು ಜನರು ಕಣ್ತುಂಬಿಕೊಂಡಿದ್ದಾರೆ. ಮಕರ ಲಗ್ನದಲ್ಲಿ ಸರಿಯಾಗಿ 1 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವ ಆಗಿದ್ದು, ಸಾವಿರಾರು ಭಕ್ತರು ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮದಿಂದಾಗಿ ಕೆಲವರಿಗೆ ಮಾತ್ರ ತೀರ್ಥೋದ್ಭವದಲ್ಲಿ ಭಾಗವಹಿಸೋದಕ್ಕೆ ಅವಕಾಶ ನೀಡಲಾಗಿತ್ತು....
ಕೊಡಗುಮಡಿಕೇರಿಸುದ್ದಿ

ಮಡಿಕೇರಿ-ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ ; ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ | ಆತಂಕ, ಕತ್ತಲೆಯಲ್ಲಿ ಕೊಡಗು..! – ಕಹಳೆ ನ್ಯೂಸ್

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲ, ನಾಪೋಕ್ಲು, ಮಡಿಕೇರಿ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೂ ಮಡಿಕೇರಿ ಮಂಗಳೂರು ಹೆದ್ದಾರಿಯ ಕೆಳಭಾಗದಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಅಲ್ಲಿರುವ ಆರು ಕುಟುಂಬಗಳು ಭೂಕುಸಿತದ ಭೀತಿಯಲ್ಲಿವೆ. ಕತ್ತಲೆಯಲ್ಲಿ ಕೊಡಗು: ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಮಹೇಶ್ ಭೇಟಿ...
ಕೊಡಗುದಕ್ಷಿಣ ಕನ್ನಡಮಡಿಕೇರಿಸುದ್ದಿ

ಮತ್ತೆ ಅಪಾಯದಲ್ಲಿದೆ ಮಡಿಕೇರಿ – ಮಂಗಳೂರು ಹೈವೇ ; ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ – ಕಹಳೆ ನ್ಯೂಸ್

ಮಡಿಕೇರಿ: ಮೈಸೂರು – ಬಂಟ್ವಾಳ ರಾಷ್ಟ್ರೀಯ ರಸ್ತೆ ಮಾರ್ಗದಲ್ಲಿ ಮತ್ತೆ ಕುಸಿತ ಸಂಭವಿಸಿದೆ. ಜೋಡುಪಾಲ ಸಮೀಪ ಇರುವ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ ಕಂಡುಬಂದಿದ್ದು, ಇದು ಇನ್ನಷ್ಟು ಅಪಾಯಕಾರಿಯಾಗುವ ಸಂಭವ ಇದೆ. ಇತ್ತೀಚೆಗೆ ಸುರಿದ ಮಳೆಯ ಪರಿಣಾಮದಿಂದ ಕೆಳ ಭಾಗದಿಂದ ರಸ್ತೆ ಕುಸಿತಕ್ಕೆ ಒಳಗಾಗುತ್ತಿದೆ. ನಿರಂತರವಾಗಿ ಭಾರೀ ವಾಹನಗಳು ಸಂಚಾರ ಮುಂದುವರಿಸಿದಲ್ಲಿ ಹಾಗೂ ಮತ್ತೆ ಮಳೆ ಬಂದಲ್ಲಿ ಈ ರಸ್ತೆ ಸಂಪೂರ್ಣ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಮಳೆಗಾಲದ...
ಮಡಿಕೇರಿ

ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ- ಕಹಳೆನ್ಯೂಸ್

ಮಡಿಕೇರಿ : ಇತ್ತೀಚೆಗೆ ಸುರಿದ ಮಳೆಯ ಪರಿಣಾಮ ಮಡಿಕೇರಿ-ಮಂಗಳೂರು ರಸ್ತೆ ಮಾರ್ಗದಲ್ಲಿ ಬರುವ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ ಕಂಡುಬಂದಿದ್ದು, ಇನ್ನಷ್ಟು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಕೆಳ ಭಾಗದಿಂದ ರಸ್ತೆ ಕುಸಿತಕ್ಕೆ ಒಳಗಾಗುತ್ತಿದ್ದು ನಿರಂತರವಾಗಿ ಭಾರೀ ವಾಹನಗಳ ಸಂಚಾರ ಹಾಗೂ ಮತ್ತೆ ಮಳೆ ಬಂದಲ್ಲಿ ಈ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ರಸ್ತೆ ಅಪಾಯಕಾರಿ ಪರಿಸ್ಥಿತಿಗೆ ಬಂದಿರುವುದನ್ನು ಗಮನಿಸಿದ ಸಾರ್ವಜನಿಕರಾದ ನಂದ ಮತ್ತಿತರರು...
ಮಡಿಕೇರಿ

ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕಿಳಿದ ಮೊಮ್ಮಗ ಮುಳುಗಿ ಮೃತ್ಯು ; ಮೊಮ್ಮಗನ ಮೃತದೇಹ ಕಂಡು ಅಜ್ಜಿ ಹೃದಯಾಘಾತದಿಂದ ಸಾವು-ಕಹಳೆ ನ್ಯೂಸ್

ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕಿಳಿದು ಮೃತಪಟ್ಟ ಮೊಮ್ಮಗನ ಮೃತದೇಹ ಕಂಡು ಅಜ್ಜಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ರಮ್ಲಾನ್ ಎಂಬವವರ ಪುತ್ರ 18 ವರ್ಷದ ಮುಬಾಶೀರ್ ಗುರುವಾರ ಬೆಳಗ್ಗೆ ಸ್ನಾನ ಮಾಡಲೆಂದು ಹಾರಂಗಿ ಹಿನ್ನೀರಿಗೆ ಇಳಿದಿದ್ದು, ಬಳಿಕ ಕಾಣೆಯಾಗಿದ್ದ. ಆತನ ಮೃತದೇಹ ಶುಕ್ರವಾರ ಬೆಳಗ್ಗೆ ಹಾರಂಗಿ ಹಿನ್ನೀರಿನಲ್ಲಿ ದೊರೆತಿದೆ. ಈ ವೇಳೆ ಮೊಮ್ಮಗನ ಮೃತದೇಹ ಕಂಡು ಆತನ ಅಜ್ಜಿ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ....
ಮಡಿಕೇರಿ

ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಮತ್ತು ನಾವಿಕ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ವಿತರಣೆ-ಕಹಳೆ ನ್ಯೂಸ್

ಮಡಿಕೇರಿ : ಸಮಾಜದಲ್ಲಿ ಸಹಾಯದ ನಿರೀಕ್ಷೆಯಲ್ಲಿರುವ ವರ್ಗವಿರುವಂತೆ ಸಹಾಯದ ಹಸ್ತ ಚಾಚಲು ಸಿದ್ಧವಾಗಿರುವ ವರ್ಗವೂ ಇರುತ್ತದೆ. ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದ್ದು ವಿದ್ಯಾರ್ಥಿಗಳು ಇದರ ಸಹಾಯವನ್ನು ಪಡೆದುಕೊಂಡು ಪ್ರಗತಿ ಸಾಧಿಸಬೇಕೆಂದು ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಟಿ.ಗಣಪತಿ ಕರೆ ನೀಡಿದರು. ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಮತ್ತು ನಾವಿಕ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ನಾವಿಕ...
1 7 8 9 10
Page 9 of 10