Saturday, March 7, 2026

ರಾಜಕೀಯ

ರಾಜಕೀಯ

ಮಂಗಳೂರು ದಕ್ಷಿಣ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬ್ರಿಜೇಶ್‌ ಚೌಟ ಹೆಸರು ಅಂತಿಮ ? – ಕಹಳೆ ನ್ಯೂಸ್

ಮಂಗಳೂರು, ಏ 12 : ಈ ಬಾರಿಯ ಕರ್ನಾಟಕ ಚುನಾವಣೆ ಈಗಾಗಲೇ ಭಾರೀ ಕುತೂಹಲ ಕೆರಳಿಸಿದ್ದು, ಇಡೀ ದೇಶದ ಚಿತ್ತ ಕರುನಾಡಿನತ್ತ ಹೊರಳುವಂತೆ ಮಾಡಿದೆ. ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಕ್ಕೆ ಈ ಚುನಾವಣೆ ಭಾರೀ ಮಹತ್ವದ್ದಾಗಿದೆ. ದಕ್ಷಿಣದಲ್ಲಿ ಮತ್ತೆ ಬಾಗಿಲು ತೆರೆಯಲು ಬಿಜೆಪಿ ಹವಣಿಸುತ್ತಿದ್ದರೆ, ಸಿಕ್ಕಿರುವ ಆಡಳಿತವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸೆಣಸಾಡಬೇಕಿದೆ. ಇವರಿಬ್ಬರ ಕಿತ್ತಾಟದ ಲಾಭವನ್ನು ಪಡೆಯಲು ಜೆಡಿಎಸ್ ಹೊಂಚುಹಾಕಿ ಕುಳಿತಿದೆ. ಮೇ 12 ರಂದು...
ರಾಜಕೀಯ

ತಮಿಳುನಾಡು ಕಾವೇರಿ ಪ್ರತಿಭಟನೆಯನ್ನು ಬೆಂಬಲಿಸಿದ ರಮ್ಯಾ ; ಕನ್ನಡ ದ್ರೋಹಿ – ಕಹಳೆ ನ್ಯೂಸ್

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಪ್ರಕಟವಾದ ಸುದ್ದಿಯನ್ನು ರಮ್ಯಾ ಟ್ವೀಟ್ ಮಾಡಿದ್ದನ್ನು ಕನ್ನಡಿಗರು ಖಂಡಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆನ್‍ಲೈನ್ ತಾಣವೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು, ರಮ್ಯಾ ಅವರು ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಾಕಿ “Loud and clear #GobackModi “ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಅನ್ನು ಕನ್ನಡಿಗರು ಖಂಡಿಸಿದ್ದು, ಕನ್ನಡ ದ್ರೋಹಿ ರಮ್ಯಾ ಅವರಿಗೆ...
ರಾಜಕೀಯ

ರಮಾನಾಥ್ ರೈಗೆ ಆಶ್ಚರ್ಯ ಆಗುವಷ್ಟು, ಸಿದ್ದರಾಮಯ್ಯರಿಗೆ ನಿದ್ದೆ ಬಾರದಷ್ಟು ದೊಡ್ಡ ಸುದ್ದಿ ದ.ಕ ಜಿಲ್ಲೆಯಲ್ಲಿ ಆಗುತ್ತದೆ – ನಳಿನ್ ಕುಮಾರ್

ಮಂಗಳೂರು : ಕಾಂಗ್ರೆಸ್ ಮುಖಂಡ ರಮಾನಾಥ್ ರೈ ಅವರು ಬಿಜೆಪಿಗರು ಕಾಂಗ್ರೆಸ್ ಸೇರುತ್ತಾರೆ ಎಂದು ಕಾದು ಕುಳಿತುಕೊಳ್ಳಲಿ. ಬಿಜೆಪಿಯಲ್ಲಿ ಯಾವತ್ತೂ ಭಿನ್ನಾಭಿಪ್ರಾಯ ಸ್ಫೋಟ ಆಗುವುದಿಲ್ಲ ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದವನು ಕೊನೆ ತನಕ ಬಿಜೆಪಿಯಲ್ಲಿ ಹೋರಾಟ ಮಾಡುತ್ತಾನೆ. ಟಿಕೆಟ್ ಸಿಗದೇ ಇದ್ದಾಗ ಟಿಕೆಟ್ ಸಿಕ್ಕ ಅಭ್ಯರ್ಥಿಯನ್ನ ಬೆಂಬಲಿಸಿ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಪಟ್ಟಿ ಘೋಷಣೆ ಆದ ಮೇಲೆ ಅಲ್ಲಿನವರು ಕೆಲವರು ನಮ್ಮಲ್ಲಿಗೆ ಬರುತ್ತಾರೆ ಎಂದು...
ರಾಜಕೀಯ

ಇಂದು ಮಹದಾಯಿ ಪ್ರದೇಶದಲ್ಲಿ ಶಾ ಪ್ರವಾಸ – ಕಹಳೆ ನ್ಯೂಸ್

ಹುಬ್ಬಳ್ಳಿ : ವಿಧಾನಸಭಾ ಚುನಾವಣೆ ಪ್ರಚಾರಾರ್ಥ ಎರಡು ದಿನಗಳ ಉತ್ತರ ಕರ್ನಾಟಕ ಪ್ರವಾಸಕ್ಕಾಗಿ ಬುಧವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿರುವ ಬಿಜೆಪಿ ಅಧ್ಯಕ್ಷ ಗುರುವಾರದಂದು ‘ಮಹದಾಯಿ ಹೋರಾಟ’ದ ಕೇಂದ್ರ ಸ್ಥಳಗಳಾದ ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಹುಬ್ಬಳ್ಳಿಯ ಸಿದ್ಧಾರೂಢ ಮಠ ಸೇರಿದಂತೆ ಹಲವು ದೇವಾಲಯಗಳಿಗೆ ಹಾಗೂ ರಾಷ್ಟ್ರೀಯ ಸ್ಮಾರಕಗಳಿಗೆ ಭೇಟಿ ನೀಡಲಿದ್ದು, ಪಕ್ಷದ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಗುರುವಾರ ಬೆಳಗ್ಗೆ 9.40ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಲಿದ್ದಾರೆ, 10.30ಕ್ಕೆ...
ರಾಜಕೀಯ

ಶನಿವಾರ ಬಿಜೆಪಿ 2ನೇ ಟಿಕೆಟ್‌ ಪಟ್ಟಿ – ಬಿಎಸ್‌ವೈ

ಬೆಂಗಳೂರು : ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಜೆಪಿಯ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 72 ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಲಾಗಿದೆ. ಈ ಪೈಕಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಾಗುವುದು ಎಂದರು. ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಅದು ಸುಮಾರು 70ರಿಂದ 80 ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಳ...
ರಾಜಕೀಯ

ಚುನಾವಣಾಧಿಕಾರಿಗಳಿಂದ ಬಿಎಸ್‍ವೈ ಪ್ರಯಾಣಿಸಿದ ಕಾರ್ ಜಪ್ತಿ – ಕಹಳೆ ನ್ಯೂಸ್

ಕೊಪ್ಪಳ: ಪರವಾನಗಿ ಇಲ್ಲದೇ ಬಿ.ಎಸ್.ಯಡಿಯೂರಪ್ಪ ಕರೆತಂದಿದ್ದ ಕಾರನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ನಗರದಲ್ಲಿ ರೈತ ಸಂವಾದ ಕಾರ್ಯಕ್ರಮಕ್ಕೆ ಬಿಎಸ್‍ವೈರನ್ನು ಹೆಲಿಪ್ಯಾಡ್‍ನಿಂದ ಸಂವಾದ ಸ್ಥಳಕ್ಕೆ ಪರವಾನಗಿ ಇಲ್ಲದ ಕಾರಲ್ಲಿ ಕರೆತಲಾಗಿತ್ತು. ಕಾರು ತಡೆಯಲು ಹೋದಾಗ ಕಾರು ಚಾಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಕಾರಿನ ಹಿಂಬದಿ ನಂಬರ್ ಪ್ಲೇಟಿನಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಹಾಕಲಾಗಿತ್ತು. ಪ್ರಕರಣ ಸಂಬಂಧ ಚುನಾವಣಾ ಅಧಿಕಾರಿ ಪರಶುರಾಮ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ...
ರಾಜಕೀಯ

ಮಂಡ್ಯದಿಂದ ಅಂಬರೀಷ್ ಹೆಸರು ಕೈಬಿಟ್ಟ ಹೈಕಮಾಂಡ್ ? ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಚಿಂತನೆ – ಕಹಳೆ ನ್ಯೂಸ್

ನವದೆಹಲಿ :ವಿಧಾನಸಭೆಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಅಂಬರೀಶ್ ಸೇರಿದಂತೆ ಘಟಾನುಘಟಿ ನಾಯಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿವೆ.ಮುಂದಾಗುವ ಬಂಡಾಯವನ್ನು ಶಮನ ಮಾಡಲು ಹೈ ಕಮಾಂಡ್ ಹೊಸ ಸೂತ್ರ ರೂಪಿಸಿದೆ. ಅಂಬರೀಶ್ ಅವರಲ್ಲದೆ ಬಾದಾಮಿಯಿಂದ ಬಿ.ಬಿ ಚಿಮ್ಮನಕಟ್ಟಿ, ಹಾನಗಲ್‌ನಿಂದ ಮನೋಹರ್ ತಹಶೀಲ್ದಾರ್, ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪಗೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ನಂತರ, ರಾಜ್ಯ ಸರಕಾರದ ವಿರುದ್ದ ಸಿಟ್ಟಾಗಿದ್ದ ಅಂಬರೀಶ್...
smkrishna
ರಾಜಕೀಯ

ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ; ವದಂತಿಗಳಿಗೆ ತೆರೆ ಎಳೆದ ಎಸ್.ಎಂ. ಕೃಷ್ಣ – ಕಹಳೆ ನ್ಯೂಸ್

ಬೆಂಗಳೂರು : ಬಿಜೆಪಿ ಸೇರ್ಪಡೆಯಾಗಿದ್ದ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರು ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ವದಂತಿಯನ್ನು ಎಸ್.ಎಂ. ಕೃಷ್ಣ ತಳ್ಳಿ ಹಾಕಿದ್ದಾರೆ. ಅವರು ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿ ಮಾತನಾಡಿ, ಮತ್ತೆ ಕಾಂಗ್ರೆಸ್ ಸೇರುತ್ತೇನೆ ಎಂಬುವುದು ಕೇವಲ ಸುಳ್ಳು ಸುದ್ದಿ. ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳಿಸಲೆಂದು ಸಚಿವ ಡಿ.ಕೆ. ಶಿವಕುಮಾರ್, ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದೇನೆ ಎನ್ನುವುದು ಶುದ್ಧ ಸುಳ್ಳು. ಯಾವುದೇ...
1 228 229 230 231 232
Page 230 of 232