Saturday, March 7, 2026

ರಾಜಕೀಯ

ರಾಜಕೀಯ

ಸಿ.ಎಂ. ಸೋಲಿಸಲು ಬಿ.ಜೆ.ಪಿ. ಮಾಸ್ಟರ್ ಪ್ಲಾನ್ – ಕಹಳೆ ನ್ಯೂಸ್

ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿಯಿಂದಲೂ ಸ್ಪರ್ಧಿಸಲಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಇಂದು ದೆಹಲಿಯಲ್ಲಿ ಸಭೆ ನಡೆಸಲಿರುವ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಿದ್ಧರಾಮಯ್ಯ ಅವರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆ.ಡಿ.ಎಸ್., ಬಿ.ಜೆ.ಪಿ. ನಾಯಕರು ಸಿ.ಎಂ. ಸೋಲಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸುಲಭವಾಗಿಲ್ಲ ಎನ್ನುವುದು ಸಿ.ಎಂ. ನಡೆಸಿದ ಖಾಸಗಿ ಸಮೀಕ್ಷೆಯಲ್ಲಿ...
ರಾಜಕೀಯ

ಪಾಲೇಮಾರ್, ಭದ್ರಿನಾಥ್, ಸತ್ಯಜಿತ್ ಗೆ ನೋ ಟಿಕೆಟ್ ; ಭರತ್ ಶೆಟ್ಟಿ, ಕಾಮತ್, ಬೋಳಿಯಾರ್ ಗೆ ಬಿಜೆಪಿ ಸರ್ಟಿಫಿಕೇಟ್ ! ಗೆಲ್ಲುವ ಕುದುರೆ ಯಾವುದು? – ಕಹಳೆ ನ್ಯೂಸ್

ಮಂಗಳೂರು, ಎಪ್ರಿಲ್,20 : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಬಿಜೆಪಿ ತನ್ನ ಆಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಮೂರನೇ ಪಟ್ಟಿಯಲ್ಲಿ ರಾಜ್ಯದ 59 ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, ಕಗ್ಗಂಟಾಗಿ ಉಳಿದಿದ್ದ ಮಂಗಳೂರು ( ಉಳ್ಳಾಲ), ಮಂಗಳೂರು ಉತ್ತರ (ಸುರತ್ಕಲ್) ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ...
ರಾಜಕೀಯ

Breaking News : ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ವೇಳೆ ಲಾಠೀಚಾರ್ಜ್ – ಕಹಳೆ ನ್ಯೂಸ್

ಮೈಸೂರು: ಚುನಾವಣಾ ರಣಾಂಗಣವಾಗಿರುವ ಚಾಮುಂಡೇಶ್ವರಿ  ವಿಧಾನಸಭಾ ಕ್ಷೇತ್ರದ ಹುರಿಯಾಳುಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಶುಕ್ರವಾರ ನಾಮಪತ್ರ ಸಲ್ಲಿಸುತ್ತಿದ್ದು, ಭರ್ಜರಿ ಬಲ ಪ್ರದರ್ಶನ ಮಾಡಿದ್ದಾರೆ.  ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ  ಏಕಕಾಲದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಚಾರ್ಜ್‌ ನಡೆಸಿದರು. ಮೊದಲು ಸಿದ್ದರಾಮಯ್ಯ ಅವರು ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲು ಸಮಯ...
ರಾಜಕೀಯ

ಬಂಟ್ವಾಳದಲ್ಲಿ ಬಿಜೆಪಿ ಸುನಾಮಿ ; ರಾಜೇಶ್ ನಾಯಕ್ ನಾಮಪತ್ರ ಸಲ್ಲಿಕೆ ವೇಳೆ ಜನಜಾತ್ರೆ, ರಮಾನಾಥ ರೈ ಸೋಲಿಗೆ ಮುನ್ನುಡಿ – ಕಹಳೆ ನ್ಯೂಸ್

ಮಂಗಳೂರು: ರಾಜ್ಯ ರಾಜಕೀಯದ ಅತೀ ಕುತೂಹಲದ ಕ್ಷೇತ್ರ ಈ ಬಾರಿ ಮಂಗಳೂರಿನ ಬಂಟ್ವಾಳ ಕ್ಷೇತ್ರ ಹೌದು ಸದ್ಯ ಮಂಗಳೂರಿನ ಬಂಟ್ವಾಳ ಕ್ಷೇತ್ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಾಟ್ ಸ್ಪಾಟ್ ಆಗಿದೆ. ಕಳೆದ 25 ವರ್ಷಗಳಿಂದ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೂ ಅಭಿವೃದ್ಧಿ ಎಂಬುದು ಕನಸಾಗಿ ಉಳಿದಿದೆ.. ಇದರ ನಡುವೆ ಧರ್ಮದ ರಾಜಕೀಯ ಜೋರಾಗಿ ನಡೆಸುತ್ತ ಬಂದಿರುವ ಸದ್ಯ ಕ್ಷೇತ್ರದ ಉಸ್ತುವಾರಿ ಸಚಿವರು ಆಗಿರುವ ರಮಾನಾಥ ರೈ ಅವರ ವಿರುದ್ಧ...
ರಾಜಕೀಯ

ಸಿ.ಎಂ ಅಭ್ಯರ್ಥಿ ಬಿ.ಎಸ್.ವೈ. ಬಳಿ ಇರುವ ಆಸ್ತಿ ಎಷ್ಟು ಗೊತ್ತಾ…? – ಕಹಳೆ ನ್ಯೂಸ್

ಶಿವಮೊಗ್ಗ: ಶಿಕಾರಿಪುರ ವಿಧಾನಸಭೆ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಬಿ.ಜೆ.ಪಿ. ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್.ವೈ. 7.23 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. 2 ಕೆ.ಜಿ. 698 ಗ್ರಾಂ ಚಿನ್ನ, 84 ಕೆ.ಜಿ. ಬೆಳ್ಳಿ ವಸ್ತುಗಳಿದ್ದು, ಒಟ್ಟು 1,09,46,400 ರೂ. ಮೌಲ್ಯದ ಚಿನ್ನ, ಬೆಳ್ಳಿ ಹೊಂದಿದ್ದಾರೆ. ಅವರಿಗೆ 12.33 ಲಕ್ಷ ರೂ. ಆದಾಯವಿದೆ. 1 ಲಕ್ಷ ರೂ....
ರಾಜಕೀಯ

ಮತದಾನ ಅವಧಿ ಒಂದು ಗಂಟೆ ವಿಸ್ತರಣೆ ; ಸಂಜೆ 6 ಗಂಟೆ ತನಕ ಮತ ಚಲಾವಣೆಗೆ ಅವಕಾಶ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 12ರಂದು ನಡೆಯಲಿರುವ ಮತದಾನದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ಒಂದು ಗಂಟೆ ವಿಸ್ತರಿಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ವಿಕಾಸಸೌಧದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮತದಾನ ಅವಧಿಯಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆ ತನಕ ನಿಗದಿಪಡಿಸಲಾಗಿತ್ತು. ಆದರೆ, ಮತದಾನದ ಅವಧಿ ವಿಸ್ತರಿಸುವಂತೆ ಕೆಲವು ಸಲಹೆ ಮತ್ತು ಮನವಿಗಳು ಬಂದ...
ರಾಜಕೀಯ

Breaking News : ಬಂಟ್ವಾಳದಲ್ಲಿ ಸಾವಿರಕ್ಕೂ ಹೆಚ್ಚು ಸೀರೆ ವಶಪಡಿಸಿಕೊಂಡ ಚುನಾವಣಾಧಿಕಾರಿಗಳು ; ರೈ ಕೈವಾಡ ಸಾದ್ಯತೆ – ಕಹಳೆ ನ್ಯೂಸ್

ಬಂಟ್ವಾಳ, ಏ.19: ಇಲ್ಲಿನ ಬಿ.ಸಿ.ರೋಡಿನ ಪ್ರತಿಷ್ಠಿತ ಬ್ಯಾಂಕ್‌ವೊಂದಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂ. ಮೌಲ್ಯದ ಸಾವಿರಾರು ಸೀರೆಗಳನ್ನು ವಶಪಡಿಸಿಕೊಂಡ ಘಟನೆ ಏ 19 ರ ಗುರುವಾರ ನಡೆದಿದೆ. ಬ್ಯಾಂಕ್ ನಲ್ಲಿ ಅಕ್ರಮವಾಗಿ ಸೀರೆ ದಾಸ್ತಾನು ಮಾಡಿಕೊಂಡ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಗೋಣಿಚೀಲಗಳಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 1,222 ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಸುಮಾರು 2 ಲಕ್ಷ ರೂ....
ರಾಜಕೀಯ

ಕಾಂಗ್ರೆಸ್ ಪಕ್ಷದಿಂದ 15 ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರ್ಪಡೆ ; ಸುಳ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ – ಕಹಳೆ ನ್ಯೂಸ್

ಸುಳ್ಯ: ಕಾಂಗ್ರೆಸ್ ದುರಾಡಳಿತ ಬೇಸತ್ತು ಬಿಜೆಪಿ ತತ್ತ್ವ ಸಿದ್ಧಾಂತ ಒಪ್ಪಿ ಅಮರಮುಡ್ನೂರು ಕೂಟೇಲು ಪರಿಸರದ ಕಾಂಗ್ರೆಸ್ ಮುಖಂಡರು ಹಾಗೂ 15 ಕ್ಕೂ ಮಿಕ್ಕಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಗುರುವಾರ ಸೇರ್ಪಡೆಗೊಂಡರು. ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಬಿಜೆಪಿ ಧ್ವಜ ನೀಡಿ ಸ್ವಾಗತಿಸಿದರು. ಕಳೆದ ಕೆಲವು ಸಮಯಗಳಿಂದ ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ದಬ್ಬಾಳಿಕೆಯ ರಾಜಕಾರಣವನ್ನು ಸಹಿಸದೆ ಬಿಜೆಪಿ ಪಕ್ಷದ ತತ್ತ್ವ ಸಿದ್ದಾಂತಗಳನ್ನು ಒಪ್ಪಿ ಜಾಲ್ಸೂರು ಬಿಜೆಪಿ...
1 225 226 227 228 229 232
Page 227 of 232