Friday, March 13, 2026

ರಾಜಕೀಯ

ಕ್ರೈಮ್ಬೆಂಗಳೂರುರಾಜಕೀಯರಾಜ್ಯಸುದ್ದಿಹಾಸನ

ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು ಇತರೆ ವಸ್ತು ಕೊಂಡೊಯ್ದ ಎಸ್‌ಐಟಿ – ಕಹಳೆ ನ್ಯೂಸ್

ಹಾಸನ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಎದುರಿಸಲು ಮೇ 31 ರಂದು ಸಂಸದ ಪ್ರಜ್ವಲ್ ರೇವಣ್ಣ ಬರುವ ಹೇಳಿಕೆ ನೀಡಿದ ಬೆನ್ನಲ್ಲೇ ಮಹತ್ವದ ದಾಖಲೆ ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ. ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಸತತ 10 ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿತು. ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಪು ಹಾಗೂ ಇತರೆ ವಸ್ತುಗಳನ್ನು ಅಧಿಕಾರಿಗಳು ಕೊಂಡೊಯ್ದರು. ಪೂರಕ...
ಕಾಪುದಕ್ಷಿಣ ಕನ್ನಡರಾಜಕೀಯಸುದ್ದಿ

ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯ ಸಂಬAಧ ಕಾಪು ಮಂಡಲ ಘಟನಾಯಕರ ಸಭೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ-ಕಹಳೆ ನ್ಯೂಸ್

ಕಾಪು :ಜೂನ್ 03 ರಂದು ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯ ಸಂಬAಧ ಇಂದು ದಿನಾಂಕ 25-05-2024 ರಂದು ಕಾಪು ಮಂಡಲ ಬಿಜೆಪಿ ಕಚೇರಿಗೆ ನೈರುತ್ಯ ಪದವೀಧರ ಕ್ಷೇತ್ರ ಅಭ್ಯರ್ಥಿಯಾಗಿರುವ ಡಾ. ಧನಂಜಯ ಸರ್ಜಿ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾಗಿರುವ ಭೋಜೇಗೌಡ ಅವರು ಕಾಪು ಮಂಡಲ ಬಿಜೆಪಿ ಕಚೇರಿ ಭೇಟಿ ನೀಡಿ ಘಟನಾಯಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಶಾಸಕರು ಮಾತನಾಡಿ...
ಉಡುಪಿದಕ್ಷಿಣ ಕನ್ನಡಬೆಂಗಳೂರುರಾಜಕೀಯರಾಜ್ಯ

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ. ಜವಾಬ್ದಾರಿ ಬದಲಾವಣೆ ; ಬಿಜೆಪಿಯಿಂದ ಸಾಮರಸ್ಯಕ್ಕೆ..!!! – ಕಹಳೆ ‌ನ್ಯೂಸ್

ಉಡುಪಿ : ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ. ಜವಾಬ್ದಾರಿ ಬದಲಾವಣೆ ಮಾಡಿ RSs ಘೋಷಣೆ ಮಾಡಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕುಂತೂರಿನವರಾದ ರಾಜೇಶ್ ಬಾಲ್ಯದಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜವಾಬ್ದಾರಿ ವಹಿಸಿಕೊಂಡು‌, ತಮ್ಮನ್ನು ತೊಡಗಿಸಿಕೊಂಡವರು ಅನೇಕ ಜಿಲ್ಲೆ, ವಿಭಾಗಗಳಲ್ಲಿ  ಹಾಗೂ ಪ್ರಾಂತದ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಣೆ ಮಾಡಿದ್ದು, ನಿನ್ನೆ ಹೆಬ್ರಿಯಲ್ಲಿ ನಡೆಯುತ್ತಿರುವ ಆರ್.ಎಸ್.ಎಸ್. ವರ್ಗದಲ್ಲಿ ಅನೇಕರ ಜವಾಬ್ದಾರಿಗಳು ಬದಲಾವಣೆಯಾಗಿದ್ದು, ಅದರಂತೆ ರಾಜೇಶ್ ಅವರನ್ನು ಬದಲಾವಣೆ ಮಾಡಿದೆ....
ದಕ್ಷಿಣ ಕನ್ನಡಬೈಂದೂರುರಾಜಕೀಯರಾಜ್ಯಸುದ್ದಿ

ಬೈಂದೂರು ಮಂಡಲ ಬಿಜೆಪಿ ಕಚೇರಿಯಲ್ಲಿ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ಸಭೆ-ಕಹಳೆ ನ್ಯೂಸ್

ಬೈಂದೂರು: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬAಧಿಸಿದAತೆ ಗುರುವಾರ ಬೈಂದೂರು ಮಂಡಲ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಮತ್ತು ಪ್ರಮುಖರ ಸಭೆ ನಡೆಯಿತು. ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಎನ್.ಡಿ.ಎ ಅಭ್ಯರ್ಥಿ ಎಲ್.ಎಸ್. ಭೋಜೇಗೌಡ ಅವರು ಭಾಗವಹಿಸಿ ಚುನಾವಣೆಯ ಮಾಹಿತಿ ನೀಡಿದರು. ಡಾ. ಧನಂಜಯ ಸರ್ಜಿಯವರು ಮಾತನಾಡಿ, ರಾಜ್ಯದಲ್ಲೇ ಅತಿ ಹೆಚ್ಚು ಪದವೀಧರರನ್ನು ನೀಡುತ್ತಿರುವ ಉಡುಪಿ ಜಿಲ್ಲೆ ಶೈಕ್ಷಣಿಕ ಹಬ್ ಆಗಿ ಬೆಳೆದಿದೆ....
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

‘ ಬಂದ ದಾರಿಗೆ ಸುಂಕ‌ ಇಲ್ಲ ‘ ಶಾಸಕ ಹರೀಶ್ ಪೂಂಜ ಪರ ರಾಜ್ಯಾದ್ಯಂತ ಧ್ವನಿ ಎತ್ತಿದ ಕಾರ್ಯಕರ್ತರ ಪವರ್ ನೋಡಿ ಪೋಲೀಸ್ ಇಲಾಖೆ ಕಂಗಾಲು ; ಪೂಂಜ ಬಂಧನ ನಿರ್ಧಾರ ವಾಪಸ್ಸು – ಕಹಳೆ ನ್ಯೂಸ್

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರನ್ನು ಬಂಧನ ಮಾಡದೇ ನಿವಾಸದಿಂದ ಪೊಲೀಸರು ನಿರ್ಗಮಿಸಿದ್ದಾರೆ.‌ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿ ಪೊಲೀಸರು ಶಾಸಕರ ಗರ್ಡಾಡಿಯಲ್ಲಿರುವ ಖಾಸಗಿ ನಿವಾಸದಿಂದ ವಾಪಸ್ ತೆರಳಿದ್ದಾರೆ. ಇಂದು ಮಧ್ಯಾಹ್ನದಿಂದಲೂ ಶಾಸಕರ ನಿವಾಸದಲ್ಲಿ ನಡೆಯುತ್ತಿದ್ದ ಹೈಡ್ರಾಮಾ ಅಂತ್ಯವಾಗಿದ್ದು, ವಿಚಾರಣೆಗೆ ಹಾಜರಾಗಲು ಶಾಸಕ ಹರೀಶ್ ಪೂಂಜ ಐದು ದಿನಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ತನಿಖಾಧಿಕಾರಿಯೂ ಆಗಿರುವ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ....
ಬೆಂಗಳೂರುರಾಜಕೀಯಸುದ್ದಿ

ಮುಂಬೈನ ಅಟಲ್ ಸೇತು ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿ ಹೊಗಳಿದ ರಶ್ಮಿಕಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಕಿಡಿ – ಕಹಳೆ ನ್ಯೂಸ್

ಉತ್ತರ ಕನ್ನಡ : ಮುಂಬೈನ ಅಟಲ್ ಸೇತು ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಮಾತನಾಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನ ಮಾಜಿ ಶಾಸಕಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಟೀಕಿಸಿದ್ದಾರೆ. ಬೂಟು ನೆಕ್ಕುವುದನ್ನು ನಿಲ್ಲಿಸಿ, ಇದು ನಿಮ್ಮನ್ನು ಮೆಗಾಸ್ಟಾರ್ ಮಾಡಲು ಸಹಾಯ ಮಾಡಲ್ಲ ಎಂದು ಕಿಡಿಕಾರಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ದೇಶದ ಅತ್ಯಂತ ಉದ್ದದ ಸಮುದ್ರ ಸೇತುವೆ...
ಮೈಸೂರುರಾಜಕೀಯಸುದ್ದಿ

ಡಾ. ಧನಂಜಯ ಸರ್ಜಿ, ಎಸ್.ಎಲ್. ಬೋಜೇಗೌಡರ ಗೆಲುವು ಗ್ಯಾರಂಟಿ : ಕಾರ್ಯಕರ್ತರ ಸಭೆಯಲ್ಲಿ ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರ ವಿಶ್ವಾಸ – ಕಹಳೆ ನ್ಯೂಸ್

ಮೈಸೂರು : ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಎಸ್.ಎಲ್.ಬೋಜೇಗೌಡರ ನೂರಕ್ಕೆ ನೂರರಷ್ಟು ಖಚಿತ ಎಂದು ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ನಜರಾಬಾದ್ ವಸಂತ ಮಹಲ್ ರಸ್ತೆಯ ವಿಕೆ ಪಂಕ್ಷನ್ ಹಾಲ್ ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಮಯ ಅವಕಾಶ ಕೂಡ ಕಡಿಮೆ ಇರುವುದರಿಂದ ಇಬ್ಬರೂ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕು, ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡುವ...
ದೆಹಲಿರಾಜಕೀಯಸುದ್ದಿ

ಮಹಿಳಾ ಸಬಲೀಕರಣಕ್ಕಾಗಿ ಜುಲೈನಿಂದ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ 8,500 ರೂ ಜಮಾ: ಪ್ರಿಯಾಂಕ ಗಾಂಧಿ– ಕಹಳೆ ನ್ಯೂಸ್

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮಧ್ಯೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗುರುವಾರ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಯಾದರೆ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. "ದೇಶಾದ್ಯಂತದ ನಮ್ಮ ಸಹೋದರಿಯರು ಉತ್ಸಾಹದಿಂದ ಇಂಡಿಯಾ ಸರ್ಕಾರವನ್ನು ರಚಿಸಲು ಸಿದ್ಧರಾಗಿದ್ದಾರೆ. ಜುಲೈನಿಂದ, ಪ್ರತಿ ತಿಂಗಳು ಮಹಿಳೆಯರ ಖಾತೆಗಳಿಗೆ 8500 ರೂ.ಗಳನ್ನು ಜಮಾ ಮಾಡಲಾಗುತ್ತದೆ, ಅಂದರೆ ವಾರ್ಷಿಕವಾಗಿ 1 ಲಕ್ಷ ರೂ.ಪ್ರತಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸುತ್ತದೆ" ಎಂದು ಅವರು ಹೇಳಿದರು....
1 18 19 20 21 22 232
Page 20 of 232