ಆಯುರ್ವೇದವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿವೆ, ಐದು ಸಾವಿರ ವರ್ಷಗಳ ಸಂಪ್ರದಾಯ ಹೊಂದಿರುವ ಈ ಔಷಧ ಪದ್ಧತಿಯನ್ನು ಉಳಿಸಿಕೊಳ್ಳಲು ಭಾರತ ಸರ್ಕಾರ ಪ್ರಯತ್ನ ನಡೆಸುತ್ತಿದೆ : ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ – ಕಹಳೆ ನ್ಯೂಸ್
ಪಣಜಿ: ಆಯುರ್ವೇದಕ್ಕೆ ಕ್ಯಾನ್ಸರ್‍ನಂತಹ ಕಾಯಿಲೆಗಳನ್ನು ಗುಣಪಡಿಸುವ ಸಾಮಥ್ರ್ಯವಿದೆ. ಆದರೆ ಈ ಪದ್ಧತಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ. ಐದು ಸಾವಿರ ವರ್ಷಗಳ ಸಂಪ್ರದಾಯ ಹೊಂದಿರುವ ಈ ಔಷಧ ಪದ್ಧತಿಯನ್ನು ಉಳಿಸಿಕೊಳ್ಳಲು ನಮ್ಮ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಹೇಳಿದರು. ಸಚಿವ ಶ್ರೀಪಾದ ನಾಯಕ್ ಅವರು ಪರ್ವರಿಯಲ್ಲಿ ಖ್ಯಾತ ಆಯುರ್ವೇದ ವೈದ್ಯ ಸುಕುಮಾರ್ ಸದಾನಂದ್ ಸರ್ದೇಶಮುಖ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಆಯುರ್ವೇದ ವೈದ್ಯಕೀಯ...







