Friday, March 6, 2026

ಆರೋಗ್ಯ

ಅಂತಾರಾಷ್ಟ್ರೀಯಆರೋಗ್ಯಸುದ್ದಿ

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಂದ ಅಮೆರಿಕ- ಕಹಳೆ ನ್ಯೂಸ್

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬಂದಿದೆ. ಡಬ್ಲ್ಯೂಹೆಚ್‌ಒನಲ್ಲಿ ತನ್ನ ಸದಸ್ಯತ್ವವನ್ನು ಅಮೆರಿಕ (America) ಅಧಿಕೃತವಾಗಿ ರದ್ದುಗೊಳಿಸಿದೆ. ಅಮೆರಿಕ ನಿರ್ಧಾರದ ಬಳಿಕ ಜಿನಿವಾದಲ್ಲಿರುವ WHO ಕಚೇರಿಯಲ್ಲಿ ಅಮೆರಿಕದ ಧ್ವಜ ತೆರವು ಮಾಡಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದೆ ಮತ್ತು ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ವಿಫಲವಾಗಿದೆ ಯುಎಸ್‌ ಆರೋಪಿಸಿತ್ತು. ರೋಗಗಳ ಕಣ್ಗಾವಲು ಮತ್ತು ನಿರ್ಣಾಯಕ ಆರೋಗ್ಯ ಸವಾಲುಗಳಂತಹ ವಿಷಯಗಳ ಕುರಿತು ಇತರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರಕ್ಕೆ ಅಮೆರಿಕ ಆದ್ಯತೆ ನೀಡುತ್ತದೆ....
ಆರೋಗ್ಯದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಸ್ವಾಸ್ತ್ಯ ನೇಚರ್ ಕ್ಯೂರ್ ನಲ್ಲಿ ಹೊಸ ವರುಷದ ಪ್ರಯುಕ್ತ ಶೇ.10ರಷ್ಟು ಡಿಸ್ಕೌಂಟ್ ಆಫರ್..! – ಕಹಳೆ ನ್ಯೂಸ್

ಸ್ವಾಸ್ತ್ಯ ನೇಚರ್ ಕ್ಯೂರ್, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ. ಕಳೆದ ಸುಮಾರು 8 ವರ್ಷಗಳಿಂದ ಹಲವಾರು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಹಲವರ ಪಾಲಿಗೆ ಆಶಾಕಿರಣವಾದ ಕ್ಲಿನಿಕ್. ಪುತ್ತೂರಿನ ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಕ್ಲಿನಿಕ್‍ನಲ್ಲಿ ಹೊಸ ವರುಷದ ಪ್ರಯುಕ್ತ ಆಫರ್ ನಡಿತಾ ಇದೆ. ಯಾವುದೇ ಸೇವೆಯ ಮೇಲೆ ಶೇ.10ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಇಲ್ಲಿ ಚರ್ಮದ ಅಲರ್ಜಿ ರೋಗಗಳು, ಅಸ್ತಮಾ, ರಕ್ತಹೀನತೆ, ಆತಂಕ, ಡಿಪ್ರೆಶನ್, ಹೊಟ್ಟೆಯುಬ್ಬರ, ಬೊಜ್ಜು, ಬಿಪಿ,...
ಆರೋಗ್ಯಕೇರಳಸುದ್ದಿ

ಶಬರಿಮಲೆ ಯಾತ್ರೆ ಆರಂಭ: ಮೂಗಿನೊಳಗೆ ನೀರು ಹೋಗದಂತೆ ಎಚ್ಚರವಹಿಸಲು ಸರ್ಕಾರದ ಸೂಚನೆ- ಕಹಳೆ ನ್ಯೂಸ್

ಪತ್ತನಂತಿಟ್ಟ: ಕೇರಳದಲ್ಲಿ ಕಳೆದ ಕೆಲ ತಿಂಗಳುಗಳಿಂದ ಪತ್ತೆಯಾಗುತ್ತಿರುವ 'ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್' ಎಂಬ ಮಿದುಳು ಜ್ವರ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಶಬರಿಮಲೆಯ ವಾರ್ಷಿಕ ಯಾತ್ರೆ ಕೈಗೊಳ್ಳುವವರಿಗೆ ಸೂಚನೆ ನೀಡಿದ್ದು, ಮೂಗಿನೊಳಗೆ ನೀರು ಹೋಗದಂತೆ ಎಚ್ಚರ ವಹಿಸುವಂತೆ ಹೇಳಿದೆ. ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ತಮ್ಮ ದಾಖಲೆ ಹಾಗೂ ಔಷಧಗಳನ್ನು ಕೊಂಡೊಯ್ಯಬೇಕು. ಯಾತ್ರೆಯ ಸಂದರ್ಭದಲ್ಲಿ ನಿಯಮಿತ ಔಷಧಗಳನ್ನು ನಿಲ್ಲಸಬಾರದು. ಶಬರಿಮಲೆಗೆ ನಡೆಯುವಂತ ಸಂದರ್ಭದಲ್ಲಿ ಒತ್ತಡ ನಿರ್ವಹಣೆಯಾಗಿ ನಡಿಗೆಯಂತ ಲಘು ವ್ಯಾಯಾಮ ಮಾಡುವಂತೆಯೂ ಸಲಹೆ...
ಆರೋಗ್ಯಮೂಡಬಿದಿರೆಸುದ್ದಿ

ಆಳ್ವಾಸ್‌ನಲ್ಲಿ ಪ್ರಾಣ ಪ್ರಕೃತಿ ಚಿಕಿತ್ಸಾ ಕೇಂದ್ರ ಉದ್ಘಾಟನೆ – ಕಹಳೆನ್ಯೂಸ್

ಮೂಡಬಿದಿರೆ: ಪ್ರತಿ ಜ್ಞಾನೇಂದ್ರೀಯವನ್ನೂ ಪ್ರಕೃತಿಯೇ ಅದ್ಭುತವಾಗಿ ಸೃಷ್ಟಿಸಿದೆ. ಇವುಗಳ ಸಮತೋಲನ ಮತ್ತು ಸಾಮರಸ್ಯ ಮಾನವನ ಮನಸ್ಸು, ದೇಹ ಹಾಗೂ ಆತ್ಮದ ಶಾಂತಿಗೆ ಆಧಾರವಾಗಿವೆ. ಪಂಚೇಂದ್ರಿಯಗಳ ಪ್ರಜ್ಞಾಪೂರ್ವಕ ಸಂತೃಪ್ತಿಯ ಮೂಲಕ ಸಮಗ್ರ ಆರೋಗ್ಯವನ್ನು ಪಡೆಯಬಹುದು ಎಂದು ಆಸರೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಹೇಳಿದರು. ಮಿಜಾರಿನ ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮಗ್ರ ಸ್ವಾಸ್ಥ್ಯಧಾಮ ಪ್ರಾಣ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಗುರುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಗಾಯಕಿ...
ಆರೋಗ್ಯಬೆಂಗಳೂರುರಾಜ್ಯಸಿನಿಮಾಸುದ್ದಿ

ನಟ ಉಮೇಶ್ ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು-ಕಹಳೆ ನ್ಯೂಸ್

ಹಿರಿಯ ನಟ ಎಂಎಸ್ ಉಮೇಶ್  ಮನೆಯಲ್ಲಿ ಕಾಲುಜಾರಿ ಬಿದ್ದು ಸೊಂಟ ಹಾಗೂ ಬಲಗೈ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಹಿರಿಯ ನಟ ಉಮೇಶ್ ಅವರಿಗೆ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದ ಬಳಿಕ ಲಿವರ್‌ನಲ್ಲಿ ಘನಗಾತ್ರದ ಗೆಡ್ಡೆ ಪತ್ತೆಯಾಗಿದೆ. ಲಿವರ್ ಕ್ಯಾನ್ಸರ್ ಆಗಿ ಅದು ಬೇರೆ ಬೇರೆ ಅಂಗಗಳಿಗೆ ಹರಡಿದೆ ಎಂದು ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ...
ಆರೋಗ್ಯಬೆಂಗಳೂರುರಾಜ್ಯಸುದ್ದಿ

ದೇವೇಗೌಡರ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಶ್ರೀ- ಕಹಳೆ ನ್ಯೂಸ್

ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಶ್ರೀ ಎಚ್.ಡಿ. ದೇವೇಗೌಡ ಅವರನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಶುಕ್ರವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಶ್ರೀಗಳು, ದೇವೇಗೌಡರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ದೇವೇಗೌಡರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಿ, ಎಂದಿನಂತೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಲಿ...
ಆರೋಗ್ಯಉಡುಪಿಜಿಲ್ಲೆಸುದ್ದಿ

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಖ್ಯಾತ ಹೃದ್ರೋಗ ತಜ್ಞ ಡಾ. ರಂಜನ್ ಶೆಟ್ಟಿ ನೇತೃತ್ವದಲ್ಲಿ ಉಡುಪಿಯಲ್ಲಿ ವಿಶೇಷ ತಪಾಸಣಾ ಶಿಬಿರ -ಕಹಳೆ ನ್ಯೂಸ್

ಉಡುಪಿ : ಭಾರತದಲ್ಲಿ ಯುವಜನರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಮತ್ತು ಇತರ ಹೃದ್ರೋಗಗಳಿಗೆ ತುತ್ತಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಆತಂಕಕಾರಿಯಾಗಿ ಹೆಚ್ಚುತ್ತಿವೆ. ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತನಾಳಗಳಲ್ಲಿನ ಅಡಚಣೆಯಂತಹ ಸಮಸ್ಯೆಗಳು ಬಾಲ್ಯದಿಂದಲೇ ಆರಂಭವಾಗಬಹುದು ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ. ಈ ಗಂಭೀರ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಸ್ಪರ್ಶ್ ಹಾಸ್ಪಿಟಲ್ಸ್ ಗ್ರೂಪ್‌ನ ವೈದ್ಯಕೀಯ ನಿರ್ದೇಶಕರು ಹಾಗೂ ಬೆಂಗಳೂರಿನ ಇನ್ನೆಂಟ್ರಿ ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. (ಪ್ರೊ) ರಂಜನ್ ಶೆಟ್ಟಿ ಅವರು,...
ಆರೋಗ್ಯಬೆಂಗಳೂರುರಾಜ್ಯಸಂತಾಪಸುದ್ದಿ

ರಾಜ್ಯದಲ್ಲಿ ಮುಂದುವರೆದ ಹೃದಯಾಘಾತ ಸರಣಿ: ಹಾವೇರಿಯಲ್ಲಿ ಶಾಲಾ ಬಸ್ ಚಾಲಕ ಸಾವು.! -ಕಹಳೆ ನ್ಯೂಸ್

ಹಾವೇರಿ : ರಾಜ್ಯದಲ್ಲಿ ಹೃದಯಾಘಾತದ ಸಾವಿನ ಸರಣಿ ಮುಂದುವರೆದಿದ್ದು, ಶಾಲಾ ಬಸ್ ಚಾಲನೆ ವೇಳೆ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಲಗೊಂಡ ಗ್ರಾಮದ ಬಳಿ ನಡೆದಿದೆ. ಮೃತರನ್ನು ಪಕ್ಕಿರೇಶ ಮಲ್ಲೇಶಣ್ಣನವರ್ (25) ಎಂದು ಗುರುತಿಸಲಾಗಿದೆ. ಶಾಲೆಯ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಪಕ್ಕಿರೇಶ ಸಂಜೆ ಶಾಲೆಯಿಂದ ಮಕ್ಕಳನ್ನ ಮನೆಗೆ ಬಿಡುವ ವೇಳೆ ಧಿಡೀರ್ ಆಗಿ ಹೃದಯಾಘಾತ ಕಾಣಿಸಿಕೊಂಡಿದೆ. ನಂತರ ಮಕ್ಕಳ ಚೀರಾಟ ಕೇಳಿ ಸ್ಥಳೀಯರು...
1 2 3 14
Page 1 of 14