ಇತಿಹಾಸ ಪ್ರಸಿದ್ಧ ನಡಿಬೆಟ್ಟು ಸೂರ್ಯ ಚಂದ್ರ ಕಂಬಳ ಸಂಪನ್ನ- ಕಹಳೆ ನ್ಯೂಸ್
ಶಿರ್ವ: ಇತಿಹಾಸ ಪ್ರಸಿದ್ಧ ನಡಿಬೆಟ್ಟು ಸೂರ್ಯ ಚಂದ್ರ ಜೋಡುಕರೆ ಸಾಂಪ್ರದಾಯಿಕ ಕಂಬಳ ಸಂಪನ್ನಗೊಂಡಿತು. ಎಲ್ಲೂರು ವಿಶ್ವೇಶ್ವರ ದೇವಳದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ದೀಪ ಬೆಳಗಿಸಿ, ಕಾಯಿ ಒಡೆದು ಚಾಲನೆ ನೀಡಿದರು. ನಡಿಬೆಟ್ಟು ಚಾವಡಿಯ ಜುಮಾದಿ ದೈವಕ್ಕೆ ಪೂಜೆ, ಬಳಿಕ ಬಂಟಕೋಲ ನಡೆದು ಮೆರವಣಿಗೆಯಲ್ಲಿ ಡೋಲು, ಕೊಂಬು ವಾದ್ಯ ಘೋಷದೊಂದಿಗೆ ಕೋಣಗಳನ್ನು ಗದ್ದೆಗೆ ಇಳಿಸಲಾಯಿತು. ಹಗ್ಗ ಕಿರಿಯ ವಿಭಾಗದಲ್ಲಿ 50 ಜತೆ ಕೋಣಗಳು, ಹಿರಿಯ ವಿಭಾಗದಲ್ಲಿ 100 ಜತೆ...







