ಹಿಂದೂ ದೇವರ ಅವಹೇಳನ ಮಾಡಿದ್ದ ಆರೋಪ ಹೊತ್ತ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ವಿರುದ್ಧ ಮಂಗಳೂರಿನಲ್ಲಿ ಬಜರಂಗದಳ ದೂರು – ಕಹಳೆ ನ್ಯೂಸ್
ಮಂಗಳೂರು: ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಹಿಂದೂ ದೇವರ ಅವಹೇಳನ ನಡೆಸಿದ್ದಾರೆಂದು ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತ ಶರತ್ ಕುಲಾಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಲ್ಲೇನಿದೆ? ನಾನು ಹಿಂದೂ ಧರ್ಮದ ಸಂಸ್ಕಾರದಲ್ಲಿ ಹುಟ್ಟಿದ್ದು ಹಿಂದೂ ಸಂಸ್ಕಾರದಲ್ಲಿ ನನ್ನ ಜೀವನವನ್ನು ನಡೆಸಿಕೊಂಡು ಬರುತ್ತಿದ್ದೇನೆ , ನಾನು ಶ್ರೀರಾಮ, ಶ್ರೀಕೃಷ್ಣ , ಈಶ್ವರ, ಚಂಡಿಚಾಮುಂಡಿ ದೇವತೆಗಳನ್ನು ಆರಾಧಿಸಿಕೊಂಡು ಬರುತ್ತಾ , ಹಿಂದೂ ಧರ್ಮ ಸಂಸ್ಕೃತಿ ಹಾಗು ಸಂಸ್ಕಾರಗಳನ್ನು ಕೊಡುತ್ತ ಹಾಗು ತಮ್ಮ ಜೀವನವನ್ನೇ...





