Tuesday, April 28, 2026

ದಕ್ಷಿಣ ಕನ್ನಡ

ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ 500 ಗ್ರಾಂ ಹೈಡ್ರೊಪೋನಿಕ್ ಗಾಂಜಾ ವಶಪಡಿಸಿಕೊಂಡ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ -ಕಹಳೆ ನ್ಯೂಸ್

ಮಂಗಳೂರು: ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) 500 ಗ್ರಾಂ ಹೈಡ್ರೊಪೋನಿಕ್ ಗಾಂಜಾ ವಶಪಡಿಸಿಕೊಂಡಿದ್ದು ಆರೋಪಿಯನ್ನು ಹಾಗೂ ಗಾಂಜಾವನ್ನು ಬಜಪೆ‌ ಠಾಣೆಯ ವಶಕ್ಕೆ ಸೋಮವಾರ ಒಪ್ಪಿಸಿದ್ದಾರೆ. ಮುಂಬೈನಿಂದ ಇಂಡಿಗೊ ವಿಮಾನದಲ್ಲಿ ಬಂದಿದ್ದ ಶಂಕರ್ ನಾರಾಯಣ ಪೊದ್ದಾರ್‌ ‌ಆರೋಪಿ. ಆರೋಪಿ ಬಳಿ ಮಾದಕ ಪದಾರ್ಥ ಇರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಆತನ ಬ್ಯಾಗ್ ಅನ್ನು ಸಿಐಎಸ್‌ಎಫ್‌ನ ಅಪರಾಧ ಮತ್ತು ಗುಪ್ತವಾರ್ತೆ ವಿಭಾಗದ (ಸಿಐಡಬ್ಲ್ಯು)...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಡೆದ ಸನಾತನ ನಾಟ್ಯಾಲಯದ ವತಿಯಿಂದ ವಿದುಷಿ ಸಿಂಚನಾ ಕುಲಾಲ್‌ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ -ಕಹಳೆ ನ್ಯೂಸ್

ಮಂಗಳೂರು: ಪ್ರಸ್ತುತ ಸಮಯದಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಭಾರತೀಯ ಶಾಸ್ತ್ರೀಯ ಕಲೆಗಳನ್ನು ಕಲಿಯಬೇಕು. ಈ ಕಲಾಶಿಕ್ಷಣವು ಯುವಜನರಿಗೆ ಸುಂದರವಾದ ಮನಸ್ಸನ್ನು ಕಟ್ಟುವ ತರಬೇತಿಯನ್ನು ನೀಡುತ್ತದೆ. ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.‌ಮೋಹನ ಆಳ್ವ ಹೇಳಿದರು. ಅವರು ಭಾನುವಾರ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ವಿದುಷಿ ಸಿಂಚನಾ ಕುಲಾಲ್‌ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.  ಈ ಕಲೆಯನ್ನು ಸ್ವೀಕರಿಸಿದ ವ್ಯಕ್ತಿಗಳು ಜೀವನದಲ್ಲಿ...
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಮಜಿ ಶಾಲಾ ನೂತನ ಕಟ್ಟಡ ಕಾಮಗಾರಿಯ ಮುಹೂರ್ತ ಕಾರ್ಯಕ್ರಮ-ಕಹಳೆ ನ್ಯೂಸ್

ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಏನ್ ಎಮ್ ಪಿ ಟಿ ಸಂಸ್ಥೆಯ ಸಿ ಎಸ್ ಆರ್ ಅನುದಾನದಿಂದ ಶಾಲಾ ತರಗತಿ ಕೊಠಡಿಗಳ ನಿರ್ಮಾಣದ ಕಾಮಗಾರಿಯ ಮುಹೂರ್ತ ಕಾರ್ಯಕ್ರಮ ಜರಗಿತು. ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸಂದೀಪ್ ಶೆಟ್ಟಿ ಅರೆಬೆಟ್ಟು ರವರಿಗೆ ಕಟ್ಟಡ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ, ಸದಸ್ಯರುಗಳಾದ ಸುಧಾಕರ, ಗೋಪಾಲಕೃಷ್ಣ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಆಕಸ್ಮಿಕ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾದ ಗುಜರಿ ಅಂಗಡಿ- ಕಹಳೆ ನ್ಯೂಸ್

ಉಳ್ಳಾಲ : ಆಕಸ್ಮಿಕ ಬೆಂಕಿ ಅವಘಡಕ್ಕೆ ಸ್ಕ್ರ್ಯಾಪ್ ಅಂಗಡಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ 66 ರ ಸೋಮೇಶ್ವರ ಉಚ್ಚಿಲ ಜಂಕ್ಷನ್ ಬಳಿ ಸಂಭವಿಸಿದೆ. ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ತಲಪಾಡಿ ಉಚ್ಚಿಲದ ಅಂಡರ್ ಪಾಸ್ ಬಳಿಯ ಇಕ್ಬಾಲ್ ಹಾಗೂ ಇಬ್ರಾಹಿಂ ಅವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಹೊತ್ತಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಇಬ್ಬರು ಮಹಿಳಾ ಸಹೋದ್ಯೋಗಿಗಳು ನಾಪತ್ತೆ- ಕಹಳೆ ನ್ಯೂಸ್

ಪುತ್ತೂರು: ಇಬ್ಬರು ಯುವತಿಯರು ನಾಪತ್ತೆಯಾಗಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಇನಾಮೊಗ್ರುವಿನ ಮೋನಿಶಾ (23) ಮತ್ತು ಮಂಡ್ಯದ ಪಾಂಡವಪುರದ ದಿವ್ಯಾ (20) ನಾಪತ್ತೆಯಾದ ಯುವತಿಯರು ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಂಡ್ಯದಲ್ಲಿ ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದರು. ವರದಿಯ ಪ್ರಕಾರ, ಇವರಿಬ್ಬರೂ ನಾಲ್ಕು ದಿನಗಳ ಹಿಂದೆ ಮೋನಿಶಾ ಅವರ ಮನೆಗೆ ಬಂದಿದ್ದು, ಅಂದಿನಿಂದ ನಾಪತ್ತೆಯಾಗಿದ್ದಾರೆ. ಈ ಇಬ್ಬರೂ ಯುವತಿಯರು ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು...
ಕ್ರೀಡೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮಿಂಚಿದ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ – ಕಹಳೆ ನ್ಯೂಸ್

1956 ರಲ್ಲಿ ಮೊದಲ ಭಾರತೀಯ ಒಲಂಪಿಕ್ ಈಜುಪಟು ದಿವಂಗತ ಶ್ರೀ ಮಹಬೂಬ್ ಶಂಶೇರ್ ಖಾನ್ ಇವರ ಸವಿ ನೆನಪಿಗಾಗಿ ಮಾಸ್ಟರ್ ಅಕ್ವಾಟಿಕ್ ಫಡೋರೇಶನ್ ಆಫ್ ಇಂಡಿಯಾದ ಸಹಯೋಗದಲ್ಲಿ "ನ್ಯಾಷನಲ್ ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್ಶಿಪ್ 2025" ಮಂಗಳಗಿರಿ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ ರವರು ಶ್ಲಾಘನೀಯ ಪ್ರದರ್ಶನವನ್ನು ನೀಡುವುದರೊಂದಿಗೆ ತಾವು ಭಾಗವಹಿಸಿದ ಐದು ಸ್ಪರ್ಧೆಗಳಾದ 200ಮೀ. ಫ್ರೀ ಸ್ಟೈಲ್ ,...
ದಕ್ಷಿಣ ಕನ್ನಡಬಂಟ್ವಾಳಬೆಳ್ತಂಗಡಿಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತೂರು ಒಕ್ಕೂಟದ 20ನೇ ವಾರ್ಷಿಕೋತ್ಸವ- ಕಹಳೆ ನ್ಯೂಸ್

ಕಲ್ಲಡ್ಕ : ವೀರೇಂದ್ರ ಹೆಗ್ಡೆಯವರ ದೂರ ದೃಷ್ಟಿಯ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿ ನವ ಭಾರತದ ನಿರ್ಮಾಣದ ಅಡಿಪಾಯವಾಗಿದೆ .ಈ ಮೂಲಕ ಗ್ರಾಮೀಣ ಪ್ರದೇಶದ ಜನರು ತಮ್ಮ ಬದುಕು ಕಟ್ಟಿಕೊಂಡು ಸುಬಿಕ್ಷ ಸಮಾಜ ನಿರ್ಮಿಸಿ ದೇಶ ಕಟ್ಟುವ ಕಾರ್ಯ ಮಾಡುತಿದ್ದು, ಅವರ ಯೋಜನೆ ಗಳಿಗೆ ನಾವು ಸಹಕಾರ ನೀಡಬೇಕಾಗಿದ್ದು, ತೆಗೆದ ಸಾಲವನ್ನು ಸೂಕ್ತವಾಗಿ ವಿನಿಯೋಗಿಸಿಕೊಂಡು ಪ್ರಾಮಾಣಿಕವಾಗಿ ಕಟ್ಟಿ ಯೋಜನೆಯ ಯಶಸ್ವಿಗೆ ನಾವು ಕಾರಣರಾಗಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಯಕ್ಷಗಾನ / ಕಲೆಸುದ್ದಿ

ಪುತ್ತೂರಿನ ಶ್ರೀ ಸಾಯಿಕಲಾ ಯಕ್ಷಗಾನ ಬಳಗ ಡಾ.ಶಿವರಾಮ ಕಾರಂತ ಬಾಲವನ ಇದರ ಸದಸ್ಯೆ ಶ್ರೀಮತಿ ಜ್ಯೋತಿ ಅಶೋಕ್ ಅವರಿಗೆ ಒಲಿದ ತಾಲೂಕು ಮಟ್ಟದ ವಾಲ್ಮೀಕಿ ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಪ್ರಯುಕ್ತ ಇಂದು ಬಂಟ್ವಾಳ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಾಧಕರಿಗೆ ಸನ್ಮಾನ. "ತಾಲೂಕು ಮಟ್ಟದ ವಾಲ್ಮೀಕಿ ಪ್ರಶಸ್ತಿ" ಪ್ರಧಾನ ಕಾರ್ಯಕ್ರಮವು ತಾಲೂಕು ಪಂಚಾಯತ್ ಬಂಟ್ವಾಳ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಸಾಯಿಕಲಾ ಯಕ್ಷಗಾನ ಬಳಗ ಡಾ.ಶಿವರಾಮ ಕಾರಂತ ಬಾಲವನ ಇದರ ಸದಸ್ಯೆಯಾಗಿರುವ ಶ್ರೀಮತಿ ಜ್ಯೋತಿ ಅಶೋಕ್ ಇವರಿಗೆ ತಾಲೂಕು ಮಟ್ಟದ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು....
1 60 61 62 63 64 725
Page 62 of 725