Recent Posts

Tuesday, May 5, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಐವರು ಆರೋಪಿಗಳು ಅರೆಸ್ಟ್ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನಲ್ಲಿ ಡ್ರಗ್ಸ್ ಜಾಲವನ್ನು ಸಿಇಎನ್ ಠಾಣೆ ಪೊಲೀಸರು ಬೇಧಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಮಕ್ಕಳ ಡ್ರಗ್ಸ್ ಅಡಿಕ್ಟ್ ಬಗ್ಗೆ ಇಬ್ಬರು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೋಷಕರ ದೂರಿನ ಮೇರೆಗೆ ಡ್ರಗ್ಸ್ ದಂಧೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರಿನ ತುಷಾರ್( 21) ಧನ್ವಿ ಶೆಟ್ಟಿ (20), ಸಾಗರ್ ಕರ್ಕೇರಾ (19), ವಿಕಾಸ್ ಥಾಪ (23), ವಿಘ್ನೇಶ್ ಕಾಮತ್...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ.ಕ. ಜಿ. ಪಂ. ಕಿ. ಪ್ರಾ ಶಾಲೆ ಏಮಾಜೆಯಲ್ಲಿ ಆರಂಭಗೊಂಡ “ಜ್ಞಾನವಾಹಿನಿ -2025_” ವಿನೂತನ ಯೋಜನೆ – ಕಹಳೆ ನ್ಯೂಸ್

ಬಂಟ್ವಾಳ : ಒಬ್ಬರ ವಿದ್ಯಾದಾನ ನೂರಾರು ಮಕ್ಕಳ ಜ್ಞಾನ ವರ್ಧನೆಯ ಮೊದಲ ಹೆಜ್ಜೆಯಾಗಬಹುದು ಎಂಬ ಆಶಯದೊಂದಿಗೆ ದ. ಕ. ಜಿ. ಪಂ. ಕಿ. ಪ್ರಾ ಶಾಲೆ ಏಮಾಜೆಯಲ್ಲಿ "ಜ್ಞಾನವಾಹಿನಿ -2025" ಎಂಬ ವಿನೂತನ ಯೋಜನೆಯನ್ನು ಗುರುವಾರ ಮಂಗಳೂರು ಎ.ಜೆ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ ಉದ್ಘಾಟಿಸಿ. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾಗುವ ಇಂತಹ ಯೋಜನೆಗಳು ಮೂಡಿ ಬರುತ್ತಿರುವುದು ಶ್ಲಾಘನೀಯ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಮಾಹಿತಿ ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಾಣಿಜ್ಯ ಸಂಘದ ವಿವಿಧ ಚಟುವಟಿಕೆಗಳ ಮುನ್ನುಡಿಯಾಗಿ ವಿದ್ಯಾರ್ಥಿಗಳಿಗೆ “ಪಿಯುಸಿ ಪರೀಕ್ಷಾ ಒಳನೋಟ” ಶೀರ್ಷಿಕೆಯಡಿ ಮೊದಲ ಉಪನ್ಯಾಸ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್‌, ದೇವಿಪ್ರಸಾದ್‌ಹಾಗೂ ಉಷಾ ಎ ಎಂ ಇವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಬದಲಾದ ಪ್ರಶ್ನೆಪತ್ರಿಕೆಯ ಮಾದರಿ ಹಾಗೂ ಪರೀಕ್ಷೆಯ ತಯಾರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಥಮ ಪಿ.ಯು.ಸಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಬರುತ್ತಿವೆ ಸಾಲು ಸಾಲು ಹಬ್ಬಗಳು, ಸಾರ್ವಜನಿಕ ಆಚರಣೆಗೆ ಷರತ್ತು ವಿಧಿಸಿದ ಇಲಾಖೆ -ಕಹಳೆ ನ್ಯೂಸ್

ಮಂಗಳೂರು: ಮುಂಬರುವ ದಿನಗಳಲ್ಲಿ ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳ ಜೊತೆಗೆ ಮೆರವಣಿಗೆಗಳು ಕೂಡ ನಡೆಯಲಿದೆ ಈ ಸಂಬಂಧ, ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ಹಿತದೃಷ್ಠಿಯಿಂದ ಮಂಗಳೂರು ನಗರ ಪೊಲೀಸರು ಸಾರ್ವಜನಿಕ ಕಾರ್ಯಕ್ರಮ ಮತ್ತು ಮೆರವಣಿಗೆಗಳ ಆಚರಣೆಗಾಗಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಅದರಂತೆ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ನೀಟ್ ರಿಪೀಟರ್ಸ್ ಬ್ಯಾಚ್ ತರಗತಿಗಳಿಗೆ ಚಾಲನೆ ; ನಮ್ಮ ಸರ್ವಸೇವೆಯೂ ಈ ದೇಶಕ್ಕಾಗಿ ಸಮರ್ಪಿತವಾಗಬೇಕು : ಸುಬ್ರಮಣ್ಯ ನಟ್ಟೋಜ

ಪುತ್ತೂರು: ವೈದ್ಯರಾಗಬೇಕೆನ್ನುವ ಕನಸು ಹಲವು ವಿದ್ಯಾರ್ಥಿಗಳಲ್ಲಿದೆ. ಆದರೆ ಅಂತಹ ಗುರಿ ಈಡೇರಿದ ನಂತರ ನಮ್ಮ ಸೇವೆ ಈ ದೇಶಕ್ಕಾಗಿಯೇ ಇರಬೇಕು. ನಮ್ಮ  ರಾಷ್ಟ್ರ ನಮ್ಮ ಮೊದಲ ಹಾಗೂ ಏಕೈಕ ಆದ್ಯತೆಯಾಗಬೇಕು. ವೈದ್ಯಕೀಯ ಸೇವೆಯನ್ನು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲಪುವಂತೆ ಮಾಡುವುದರಲ್ಲಿ ನಿಜವಾದ ಸಾರ್ಥಕ್ಯ ಅಡಗಿದೆ ಎಂದು ಅAಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ...
ಜಿಲ್ಲೆದಕ್ಷಿಣ ಕನ್ನಡಮೈಸೂರುಸಂತಾಪಸುದ್ದಿ

ಜಿಮ್ ನಲ್ಲಿ ವ್ಯಾಯಾಮ ಮಾಡುವಾಗಲೇ ‘ಹೃದಯಾಘಾತದಿಂದ’ ಇಂಜಿನಿಯರ್ ಸಾವು -ಕಹಳೆ ನ್ಯೂಸ್

ಮೈಸೂರು : ರಾಜ್ಯದಲ್ಲಿ ಒಂದಾದ ಮೇಲೊಂದು ಹೃದಯಘಾತ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಒಂದುವರೆ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಹೃದಯಾಘಾತಕ್ಕೆ 31 ಜನರು ಬಲಿಯಾಗಿದ್ದಾರೆ.ಇಂದು ಬೆಳಿಗ್ಗೆ ತಾನೇ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದ್ದು ಇದೀಗ ಮೈಸೂರಿನಲ್ಲಿ ಹೃದಯಾಘಾತಕ್ಕೆ ಇಂಜಿನಿಯರ್ ಒಬ್ಬರು ಸಾವನಪ್ಪಿದ್ದಾರೆ. ಹೌದು ಜಿಮ್ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಹಾಸನ ಮೂಲದ ಇಂಜಿನಿಯರ್ ಒಬ್ಬರು ಸಾವನಪ್ಪಿದ್ದಾರೆ. ಹಾಸನದ ಇಂಜಿನಿಯರ್ ಶ್ರೀಧರ್ ಕೊನೆಯುಸುರಳಿದಿದ್ದಾರೆ ಶ್ರೀಧರ್ (51) ಎನ್ನುವವರು ಸಾವನಪ್ಪಿದ್ದಾರೆ. 10...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಾಧಕ ಹಿರಿಯ ವಿದ್ಯಾರ್ಥಿನಿಗೆ ಸನ್ಮಾನ -ಕಹಳೆ ನ್ಯೂಸ್

ಪುತ್ತೂರು : ರಾಷ್ಟ್ರಮಟ್ಟದ ಪರೀಕ್ಷೆಯಾದ Joint Admission Test For Masters(JAM) ನಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ವೈಭವಿ ಶೆಟ್ಟಿ ರಾಷ್ಟ್ರ ಮಟ್ಟದಲ್ಲಿ 147ನೇ ರಾಂಕ್ ಹಾಗೂ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ. ಈ ಮೂಲಕ ಬೆಂಗಳೂರಿನಲ್ಲಿರುವ ಭಾರತದ ಶ್ರೇಷ್ಠ ಸಂಶೋಧನಾ ಹಾಗೂ ಉನ್ನತ ಶಿಕ್ಷಣ ಸಂಸ್ಥೆಯಾದ ಐಐಎಸ್ಸಿ ಯಲ್ಲಿ ಎಂ.ಎಸ್ಸಿ, ಪಿ.ಎಚ್.ಡಿ ತರಬೇತಿ ಪಡೆಯಲು ಆಯ್ಕೆಯಾಗಿರುತ್ತಾರೆ. ಇವರನ್ನು ಕಾಲೇಜಿನ ವತಿಯಿಂದ ಪ್ರಾಂಶುಪಾಲರಾದ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಜುಲೈ 3 ರಂದು ಅಂಬಿಕಾದಲ್ಲಿ ನೀಟ್ ರಿಪೀಟರ್ಸ್ ತರಗತಿ ಉದ್ಘಾಟನೆ -ಕಹಳೆ ನ್ಯೂಸ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯದ ವತಿಯಿಂದ 2025 -2026 ನೇ ಸಾಲಿನ ನೀಟ್ ರಿಪೀರ‍್ಸ್ ಬ್ಯಾಚ್‌ನ ತರಗತಿಗಳು ಜುಲೈ 3ರಿಂದ ಪ್ರಾರಂಭಗೊಳ್ಳಲಿವೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ನೀಟ್ ರಿಪೀಟರ್ಸ್ ತರಗತಿಗಳನ್ನು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಕಿಶೋರ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನೀಟ್ ...
1 112 113 114 115 116 726
Page 114 of 726