50ಕ್ಕೂ ಹೆಚ್ಚು ಕನ್ನಡಿಗರು ದುಬೈ, ಬಹ್ರೇನ್‌ನಲ್ಲೇ ಲಾಕ್ – ಕಹಳೆ ನ್ಯೂಸ್
ಹಾಸನ/ಮೈಸೂರು: ದ್ವೀಪ ರಾಷ್ಟ್ರ ಬಹ್ರೇನ್‌ನಲ್ಲಿ ಹಾಸನ ಜಿಲ್ಲೆಯ ಐವರು ಸಿಲುಕಿದ್ದಾರೆ. ಬಹ್ರೇನ್ ರಾಜಧಾನಿ ಮನಾಮರಲ್ಲಿರುವ ಕಟ್ಟಡವೊಂದರಲ್ಲಿ ಕನ್ನಡಿಗರು ಆಶ್ರಯ ಪಡೆದಿದ್ದಾರೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅಂಗಡಿಹಳ್ಳಿಯ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ತಾವಿರುವ ಕಟ್ಟಡದ ಪಕ್ಕದಲ್ಲೇ ಬಾಂಬ್ ಸಿಡಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಗರ ರಕ್ಷಣೆಗೆ ಕುಟುಂಬ ಸದಸ್ಯರ ಮೊರೆ ಹೋಗಿದ್ದಾರೆ. ಇನ್ನೂ ಇತ್ತ...







