ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಕದ್ದುಮುಚ್ಚಿ ಮದ್ವೆ: ಪ್ರಿಯಕರನ್ನ ಜೈಲಿಗಟ್ಟಿದ ಯುವತಿ – ಕಹಳೆ ನ್ಯೂಸ್
ಚಿಕ್ಕಮಗಳೂರು: ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಬಳಿಕ ಪ್ರೇಯಸಿಗೆ ಕೈ ಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿದ್ದ. ಬೇರೆಯವರನ್ನ ಮದುವೆಯಾಗುತ್ತಿದ್ದಂತೆ ಇತ್ತ ಪ್ರೇಯಸಿ ಹುಡುಗನ ಮನೆ, ಕಲ್ಯಾಣ ಮಂಟಪಕ್ಕೆ ಹೋಗಿ ನನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದು ರಂಪಾಟ ಮಾಡಿರುವಂತಹ ಘಟನೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕಾನೂನು ಹೋರಾಟದ ಶಪತ ಮಾಡಿದ್ದ ನೊಂದ ಯುವತಿ, ಮೋಸ ಮಾಡಿದ್ದ ಲವರ್ನನ್ನು ಜೈಲಿಗೆ ಕಳುಹಿಸಿದ್ದಾರೆ. ಚಿಕ್ಕಮಗಳೂರು ನಗರದ ಕಲ್ಯಾಣ ನಗರದ...







