ಪ್ರಗತಿ ಸ್ಟಡಿ ಸೆಂಟರಿನ 2018-19 ಶೈಕ್ಷಣಿಕ ವರುಷದ ತರಗತಿಗಳು ಮೇ 18ರಂದು ಆರಂಭ – ಕಹಳೆ ನ್ಯೂಸ್
ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರಿನ 11ನೇ ವರುಷದ ಟ್ಯುಟೋರಿಯಲ್ ಬ್ಯಾಚ್ ಮೇ 18 ಗುರುವಾರದಂದು ಪ್ರಾರಂಭಗೊಳ್ಳಲಿದೆ. ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಛಾಪನ್ನು ಮೂಡಿಸಿದ ಪ್ರಗತಿ ಸ್ಟಡಿ ಸೆಂಟರ್‍ನ ಅತ್ಯದ್ಭುತ ಫಲಿತಾಂಶವು ವಿವಿಧ ರಾಜ್ಯ, ಜಿಲ್ಲೆಗಳಿಂದ ಸೋತು ಬಂದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂಬಂತೆ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು...





