Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ-ಕಹಳೆ ನ್ಯೂಸ್

ಕಲ್ಲಡ್ಕ : ಇಂದು ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಅಂಗವಾಗಿ ಮನೆ ಮನೆಯಲ್ಲೂ ಪಕ್ಷಿಗಳಿಗೆ ನೀರಿಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮನೆಯಂಗಳದಲ್ಲಿರುವ ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನಜಾಗೃತಿ ಉಂಟುಮಾಡಿ ಅವುಗಳ ಸಂಕಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪಯತ್ನವಾಗಿ ಇಂದು ವಿಶ್ವ ಗುಬ್ಬಚ್ಚಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. “ರಾಮಾಯಣ ಕಾಲದಲ್ಲಿ ಪಕ್ಷಿಗಳೂ ಧರ್ಮ ಸಂಸ್ಥಾಪನೆಗೆ ಹೋರಾಟ ನಡೆಸಿರುತ್ತದೆ. ಇತಿಹಾಸ ಕಾಲದಿಂದ ಅಂಚೆ ಚೀಟಿ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ ಸಮೀಪದ ಕಾಂಚನ ಎಂಬಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ; ಬೈಕಿನಲ್ಲಿದ್ದ ಮೂವರಿಗೆ ಗಂಭೀರ ಗಾಯ-ಕಹಳೆ ನ್ಯೂಸ್

ಉಪ್ಪಿನಂಗಡಿ : ಮಂಗಳೂರು-ಬೆಂಗಳೂರು ರಾಪ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಕಾಂಚನ ಎಂಬಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಈ ಘಟನೆ ಹ್ಯುಂಡೈ ಐ20 ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕಿಗೆ ಕಾಂಚನ ಕ್ರಾಸ್ ಬಳಿಯ ಸಣ್ಣಂಪಾಡಿ ಎಂಬಲ್ಲಿ ಢಿಕ್ಕಿ ಹೊಡೆದಿದೆ. ಇದರಿಂದಾಗಿ ಬೈಕಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸವಾರರ ಕಾಲು ತುಂಡು ತುಂಡಾಗಿ ರಸ್ತೆ ಪಕ್ಕದಲ್ಲಿ...
ಹೆಚ್ಚಿನ ಸುದ್ದಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಆಶ್ರಯದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸರಸ್ವತಿ ಪೂಜೆ-ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಆಶ್ರಯದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸರಸ್ವತಿ ಪೂಜೆಗೆ ವಿದ್ಯಾರ್ಥಿಗಳು ಹರಿವಾಣದಲ್ಲಿ ಸರಸ್ವತಿ ಭಾವಚಿತ್ರ ಹಾಗೂ ಹೂವಿನೊಂದಿಗೆ ಆಗಮಿಸಿ ಮಂದಿರದ ಮುಂಭಾಗದಲ್ಲಿ ಸಾಲಾಗಿ ಉಪಸ್ಥಿತರಾದರು. ಕಶೆಕೋಡಿ ಸೂರ್ಯಭಟ್ ಹಾಗೂ ಅವರ ಬಳಗದವರು ಸರಸ್ವತಿ ಮಂತ್ರವನ್ನು ಪಠಿಸಿ ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ಎಲ್ಲಾ ವಿದ್ಯಾರ್ಥಿಗಳು ಪೂಜೆಗೆ ಕುಳಿತು ಪೂಜಾ ವಿಧಾನಗಳನ್ನು ಮಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ...
ಹೆಚ್ಚಿನ ಸುದ್ದಿ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ; ನಾಗವೇಣಿ ನಾರಾಯಣಸ್ವಾಮಿ-ಕಹಳೆ ನ್ಯೂಸ್

ಬಾಗೇಪಲ್ಲಿ : ಮಹಿಳೆಯರು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮತ್ತು ಕುಟುಂಬದ ಆಧಾರವಾಗಿರಬೇಕು ಎಂದು ಪ್ರಿಯಾಂಕ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘಟನೆಯ ಜಿಲ್ಲಾ ಸಂಯೋಜಕರಾದ ಶ್ರೀಮತಿ ನಾಗವೇಣಿ ನಾರಾಯಣಸ್ವಾಮಿ ಹೇಳಿದರು. ಅವರು ಬಾಗೇಪಲ್ಲಿ ಕಸಬಾ ಹೋಬಳಿ ಪುಟ್ಟಪರ್ತಿ ಗ್ರಾಮದಲ್ಲಿ ಸುಮಾರು 50 ಮಹಿಳೆಯರಿಗೆ ಮೂರು ತಿಂಗಳು ಸಂಸ್ಥೆಯಿಂದ ತರಬೇತಿ ನೀಡಿ ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಳು ರಿಯಾಯಿತಿ ದರದಲ್ಲಿ ಹೋಲಿಗೆ ಯಂತ್ರಗಳನ್ನು ವಿತರಣೆ ಮಾಡಿ...
ಹೆಚ್ಚಿನ ಸುದ್ದಿ

ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕು; ಪ್ರಾಂಶುಪಾಲರಾದ ಪ್ರೋ.ನಾರಾಯಣ-ಕಹಳೆ ನ್ಯೂಸ್

ಬಾಗೇಪಲ್ಲಿ : ಜಾನಪದ ಕಲೆಗಳಲ್ಲಿ ಗ್ರಾಮೀಣ ಸೊಗಡು, ವೈವಿಧ್ಯತೆ ಇರುತ್ತದೆ. ಭಾವನೆಗಳನ್ನು ಒಳಗೊಂಡಿರುವ ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ನಾರಾಯಣ ರವರು ಹೇಳಿದರು. ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಚಿಕ್ಕಬಳ್ಳಾಪುರದ ಸರ್.ಎಂ.ವಿ.ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದ ಜಾನಪದ ಸಾಂಸ್ಕೃತಿಕ ಸಂಭ್ರಮ-2021 ಕಾರ್ಯಕ್ರಮವನ್ನು ತಮಟೆ...
ಹೆಚ್ಚಿನ ಸುದ್ದಿ

ದೈಹಿಕ ಶಿಕ್ಷಕನೊಂದಿಗೆ ತಾಯಿ- ಮಗಳ ಅಕ್ರಮ ಸಂಬಂಧ ; ಬುದ್ದಿವಾದ ಹೇಳಿದ ತಂದೆಯ ಹತ್ಯೆ-ಕಹಳೆ ನ್ಯೂಸ್

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆಯಲ್ಲಿ ತಾಯಿ, ಮಗಳು ದೈಹಿಕ ಶಿಕ್ಷಕನೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಇದನ್ನು ಪ್ರಶ್ನಿಸಿದ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಕುಳಗಟ್ಟೆ ಗ್ರಾಮದ 70 ವರ್ಷದ ಮಂಜಪ್ಪ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಂಜಪ್ಪ ಅವರ ಮಗಳು ಉಷಾ ತನ್ನ ಗಂಡನನ್ನು ತೊರೆದು ಮಗಳು ಸಿಂಧು ಜೊತೆಗೆ ತಂದೆ ಮಂಜಪ್ಪನ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆಯಲ್ಲಿ ಉಷಾಗೆ ಎರಡು ಮಕ್ಕಳ ತಂದೆಯಾಗಿರುವ...
ಹೆಚ್ಚಿನ ಸುದ್ದಿ

ಫೇಲ್ ಮಾಡುವ ಬೆದರಿಕೆಯೊಡ್ಡಿ ಅತ್ಯಾಚಾರ ; ಪ್ರಾಧ್ಯಾಪಕನ ವಿರುದ್ದ ವಿದ್ಯಾರ್ಥಿನಿಯಿಂದ ದೂರು-ಕಹಳೆ ನ್ಯೂಸ್

ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡಬೇಕಾದ್ರೆ ನನ್ನ ಆಸೆ ಈಡೇರಿಸು. ಇಲ್ಲವಾದ್ರೆ ಫೇಲ್ ಮಾಡ್ತೇನೆ ಅಂತಾ ಬೆದರಿಸಿ ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ರಾಣೆಬೆನ್ನೂರು ತಾಲೂಕಿನ ಹನುಮನಟ್ಟಿ ಗ್ರಾಮದಲ್ಲಿರುವ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನೂರ್ ನವಾಜ್ ವಿರುದ್ದ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.  ಯುವತಿ ಕೃಷಿ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಪ್ರಾಧ್ಯಾಪಕ ಡಾ.ನೂರ್ ನವಾಜ್ ಅವರು, ನೀನಂದ್ರೆ...
ಹೆಚ್ಚಿನ ಸುದ್ದಿ

ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲೀ ಕುಟುಂಬದಿಂದ ತುಲಾಭಾರ ಸೇವೆ –ಕಹಳೆ ನ್ಯೂಸ್

ಕೋಟ : ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯೋರ್ವರು ಮಗುವಿನೊಂದಿಗೆ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲತಃ ಕೋಟದ ನಿವಾಸಿಯಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಮುಸ್ಲಿಂ ಕುಟುಂಬದವರು ಹರಿಕೆಯನ್ನು ಹೊತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹರಿಕೆಯನ್ನು ಸಲ್ಲಿಸಿದ್ದಾರೆ. ತುಲಾಭಾರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರ್ಮಿಕ ಸೌಹಾರ್ದತೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲಾ ಅಮೃತೇಶ್ವರಿಯ...
1 75 76 77 78 79 174
Page 77 of 174