Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬಿಳ್ಳೂರುನಲ್ಲಿ ಉಚಿತ ಡಿಜಿಟಲ್ ಸೇವಾ ಕೇಂದ್ರ ಆರಂಭ ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಯವರಿಂದ ಲೋಕಾರ್ಪಣೆ –ಕಹಳೆ ನ್ಯೂಸ್

ಬಾಗೇಪಲ್ಲಿ : 'ಆಧಾರ್, ಪಡಿತರ ಚೀಟಿಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ಆನ್‍ಲೈನ್ ಆಗಿರುವುದರಿಂದ, ಜನರಿಗೆ ಅನುಕೂಲ ಕಲ್ಪಿಸಲು ತಮ್ಮ ಟ್ರಸ್ಟ್‍ನಿಂದ ಬಿಳ್ಳೂರು ಗ್ರಾಮದಲ್ಲಿ ಉಚಿತವಾಗಿ ಡಿಜಿಟಲ್ ಸೇವಾಕೇಂದ್ರ ಆರಂಭಿಸಲಾಗಿದೆ' ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು. ಅವರು ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ' ಡಿಜಿಟಲ್ ಸೇವಾಕೇಂದ್ರ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪಡೆಯಲು, ವಿದ್ಯಾರ್ಥಿ ವೇತನ, ಪಹಣಿ, ಆಧಾರ್, ಪಡಿತರ...
ಹೆಚ್ಚಿನ ಸುದ್ದಿ

ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ವೀರಕಂಬ ಗ್ರಾಮ ಇದರ ಏಪ್ರಿಲ್ ತಿಂಗಳ ಮಾಸಿಕ ಸಭೆ-ಕಹಳೆ ನ್ಯೂಸ್

ಕಲ್ಲಡ್ಕ : ಏಪ್ರಿಲ್ 6ರಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ವೀರಕಂಬ ಗ್ರಾಮ ಇದರ ಏಪ್ರಿಲ್ ತಿಂಗಳ ಮಾಸಿಕ ಸಭೆಯು ವೀರಕಂಭ ಗ್ರಾಮ ಪಂಚಾಯತಿನ ರಾಜೀವ್ ಗಾಂಧಿ ಸಮುದಾಯ ಭವನದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಸುನಿಲ್ ನಾಯ್ಕ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಕೋವಿಡ್ ವ್ಯಾಕ್ಸಿನ್ ಲಸಿಕಾ...
ಹೆಚ್ಚಿನ ಸುದ್ದಿ

ಸುಕ್ಮಾ ಛತ್ತೀಸಗಡದಲ್ಲಿ ನಕ್ಸಲರು ನಡೆಸಿದ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಟಾರ್ಚನೆ-ಕಹಳೆ ನ್ಯೂಸ್

ಉಜಿರೆ : ಸುಕ್ಮಾ ಛತ್ತೀಸಗಡದಲ್ಲಿ ಹೇಡಿ ನಕ್ಸಲರು ನಡೆಸಿದ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಇವರಿಂದ ಪುಷ್ಟಾರ್ಚನೆ ಮಾಡುವುದರ ಮೂಲಕ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳ್ತಂಗಡಿ ತಾಲೂಕು ಸಂಚಾಲಕರಾದ ರೋಹನ್ ಉಜಿರೆ, ನಗರ ಕಾರ್ಯದರ್ಶಿ ಜಯಂತ್, ರಕ್ಷಿತ್ ಮಿಥುನ್ ಇತರ ಕಾರ್ಯಕರ್ತರು ಭಾಗವಹಿಸಿದ್ದರು....
ಹೆಚ್ಚಿನ ಸುದ್ದಿ

ಏಪ್ರಿಲ್ 6 ರಂದು ದಕ್ಷಿಣ ಭಾರತದ ತಮಿಳುನಾಡು ವಿಧಾನಸಭೆ ಚುನಾವಣೆ -ಕಹಳೆ ನ್ಯೂಸ್

ಬಾಗೇಪಲ್ಲಿ : ದಕ್ಷಿಣ ಭಾರತದ ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. 16 ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದ್ದು ಚುನಾವಣೆ ಸುಸೂತ್ರವಾಗಿ ನಡೆಯಲು ಬಾಗೇಪಲ್ಲಿ ತಾಲೂಕಿನಿಂದ ಸುಮಾರು 84 ಹೋಮ್ ಗಾಡ್ಸ್ ಇಂದು ಚೆನ್ನೈ ಗೆ ಪ್ರಯಾಣ ಬೆಳೆಸಿ ಏಪ್ರಿಲ್ 6 ರಂದು ಚುನಾವಣೆಯನ್ನು ಸುಸೂತ್ರವಾಗಿ ನಡೆಸಿ ಎಪ್ರಿಲ್ 9 ರಂದು ಬಾಗೇಪಲ್ಲಿ ಗೆ ವಾಪಸ್ ಬರುತ್ತಾರೆ...
ಹೆಚ್ಚಿನ ಸುದ್ದಿ

ಸಂಸ್ಥಾಪನೋತ್ಸವ – ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ। ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ; ಎಸ್ ಗುರುಮೂರ್ತಿ-ಕಹಳೆ ನ್ಯೂಸ್

ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಬೇರೆಯವರಿಗೆ ಮಾರ್ಗದರ್ಶನ ಮಾಡಿಕೊಂಡು ಬಂದವರು ನಾವು. ನಮ್ಮತನವನ್ನು ಉಳಿಸಿಕೊಳ್ಳಲು ಬ್ರಾಹ್ಮಣರೆಲ್ಲರೂ ಒಗ್ಗಟ್ಟಾಗಿ ನಡೆಯಬೇಕಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್ ಗುರುಮೂರ್ತಿ ಹೇಳಿದರು. ಹವ್ಯಕ ಮಹಾಸಭೆಯಲ್ಲಿ ನಡೆದ ಸಂಸ್ಥಾಪನೋತ್ಸವ - ವಿಶೇಷ ಪ್ರಶಸ್ತಿ ಪ್ರದಾನ ಹಾಗೂ ಪಲ್ಲವ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಕೇ ಹುಟ್ಟಿದ ಹವ್ಯಕ ಮಹಾಸಭೆಯು ಈ ಎತ್ತರಕ್ಕೆ ಬೆಳೆದಿದೆ. ವಿಶ್ವಮಟ್ಟದ ವಿವಿಧ ಕ್ಷೇತ್ರದ ಸಾಧಕರನ್ನು...
ಹೆಚ್ಚಿನ ಸುದ್ದಿ

ಹಿಂದೂಗಳ ಹೊಸ ವರ್ಷಾರಂಭ ಯುಗಾದಿ ಹಬ್ಬದ ಆಚರಣೆ-ಕಹಳೆ ನ್ಯೂಸ್

ದೇಶದ ಇಂದಿನ ಪರಿಸ್ಥಿತಿಯನ್ನು ನೋಡಿ ನಾವೆಲ್ಲರೂ ಯುಗಾದಿಯನ್ನು ಆಚರಿಸುವಾಗ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸೋಣ. ಧರ್ಮಕರ್ತವ್ಯವನ್ನು ಪಾಲಿಸುವಾಗ ರಾಷ್ಟ್ರಕರ್ತವ್ಯವನ್ನು ಮರೆಯದಿರೋಣ ! ಯುಗಾದಿಯ ಪೂಜೆಗೆ ಅವಶ್ಯಕ ಸಾಹಿತ್ಯ ಸಿಗದಿದ್ದರೆ ಹೀಗೆ ಮಾಡಿ : 1. ಬಿದಿರಿನ ಕೋಲು ಹೊಸದಾಗಿ ಸಿಗದಿದ್ದರೆ ಹಳೆಯ ಕೋಲನ್ನು ಸ್ವಚ್ಛ ಮಾಡಿ ಉಪಯೋಗಿಸಬಹುದು. ಅದೂ ಇರದಿದ್ದರೆ ಯಾವುದಾದರೊಂದು ಕೋಲನ್ನು ಗೋಮೂತ್ರ ಮತ್ತು ವಿಭೂತಿ ಮಿಶ್ರಿತ ನೀರಿನಿಂದ ಸ್ವಚ್ಛಗೊಳಿಸಿ ಉಪಯೋಗಿಸಿ. 2. ತೋರಣ ಕಟ್ಟಲು ಮಾವಿನ ಎಲೆಗಳು,...
ಹೆಚ್ಚಿನ ಸುದ್ದಿ

ಮುಲ್ಕಿಯಲ್ಲಿ ಬೈಕ್ ನಿಂದ ಬಿದ್ದು ವ್ಯಕ್ತಿ ಸಾವು-ಕಹಳೆ ನ್ಯೂಸ್

ಮುಲ್ಕಿ : ಮುಲ್ಕಿಯಲ್ಲಿ ಬೈಕ್ ನಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿ, ಆರ್‍ಎಸ್‍ಎಸ್ ಕಾರ್ಯಕರ್ತ 46 ವರ್ಷದ ವಿಶ್ವನಾಥ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಮುಲ್ಕಿಯ ಬಪ್ಪನಾಡು ಜಾತ್ರೆಗೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ನಿಂದ ಆಕಸ್ಮಿಕವಾಗಿ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ....
ಹೆಚ್ಚಿನ ಸುದ್ದಿ

ಇಂಡಿಗೊ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ; ಒಂದೇ ಕುಟುಂಬದ ಐವರ ಸಾವು-ಕಹಳೆ ನ್ಯೂಸ್

ರಾಜಸ್ಥಾನ : ರಾಜಸ್ಥಾನದ ಸಾಂಚೋರ್​ನಲ್ಲಿ ಇಂದು ಬೆಳಗ್ಗೆ ಇಂಡಿಗೊ ಕಾರಿಗೆ ಟ್ರಕ್ ಗುದ್ದಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಸಾಂಚೋರ್​ನ ಸ್ಥಳೀಯ ಕಾಂಗ್ರೆಸ್ ನಾಯಕ ಗಣಪತ್ ಸುತಾರ್ ಅವರ ಕುಟುಂಬಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಚಿಕಿತ್ಸೆ ವೇಳೆ ಪ್ರಾಣಬಿಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ....
1 64 65 66 67 68 174
Page 66 of 174