Thursday, March 12, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಮಾಸ್ಕ್ ಧರಿಸದಿದ್ದರೆ ದಂಡ: ಮಾರ್ಷಲ್ ಗಳಿಗೆ ದಿನಕ್ಕೆ 20 ಕೇಸ್ ಟಾರ್ಗೆಟ್-ಕಹಳೆ ನ್ಯೂಸ್

ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್ ಗಳಿಗೆ ಟಾರ್ಗೆಟ್ ನೀಡಿದ್ದು, ದಿನಕ್ಕೆ 20 ಕೇಸ್ ಗಳ ಟಾರ್ಗೆಟ್ ನೀಡಲಾಗಿದೆ. ರಾಜ್ಯ ಸರ್ಕಾರವು ದಿನಕ್ಕೆ ಮಾಸ್ಕ್ ಹಾಕದ 20 ಜನರಿಗೆ ದಂಡ ಹಾಕಲೇಬೇಕು ಎಂದು ಮಾರ್ಷಲ್ ಗಳಿಗೆ ಟಾರ್ಗೆಟ್ ನೀಡಿದೆ. ಮಾಸ್ಕ್ ಹಾಕದವರಿಂದ, ಸಾಮಾಜಿಕ ಅಂತರ ಕಾಪಾಡದವರಿಂದ 250 ರೂ. ದಂಡ ವಸೂಲಿ ಮಾಡಬೇಕು. ಟಾರ್ಗೆಟ್ ರೀಚ್ ಆಗ್ಲಿಲ್ಲ ಅಂದ್ರೆ ವಿಪತ್ತು ನಿರ್ವಹಣಾ ಕಾಯಿದೆ...
ಹೆಚ್ಚಿನ ಸುದ್ದಿ

ಸದ್ಯದಲ್ಲೇ ದೇಶದಲ್ಲಿ ‘ಡೇಟಾ’ಗೆ ಕನಿಷ್ಟ ಶುಲ್ಕ ನಿಗದಿ-ಕಹಳೆ ನ್ಯೂಸ್

ನವದೆಹಲಿ : ದೇಶಾದ್ಯಂತ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಏರಿಕೆಗೆ ಅನುಗುಣವಾಗಿ ಡೇಟಾ ದರದಲ್ಲಿ ಕಡಿಮೆಗೊಳಿಸಬೇಕಿದ್ದಂತ ಒಂದೊಂದು ಮೊಬೈಲ್ ಸೇವಾ ಕಂಪನಿಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿವೆ ಎನ್ನಲಾಗಿದೆ. ಹೀಗಾಗಿ ದೇಶದಲ್ಲಿ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ದೂರಸಂಪರ್ಕ ಕಂಪನಿಗಳು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು(ಟ್ರಾಯ್) ಒತ್ತಾಯಿಸಿವೆ. ಹೀಗಾಗಿ ಸದ್ಯದಲ್ಲಿಯೇ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿಯಾಗಲಿದೆ...
ಹೆಚ್ಚಿನ ಸುದ್ದಿ

ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ನವೆಂಬರ್ 1 ಕ್ಕೆ ಸಮಾರಂಭ ಖಚಿತ!?-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪಟ್ಟಿ ಇಂದುಉ ಪ್ರಕಟಿಸುವ ಸಾಧ್ಯತೆ ಇದ್ದು, ನವೆಂಬರ್ 1 ರಂದು ಪ್ರಶಸ್ತಿ ಸಮಾರಂಭ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ. ರಾಜ್ಯ ಸರ್ಕಾರವು ಈ ವರ್ಷ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಾಗಿತ್ತು. ಆದರೆ ಅಂತಿಮವಾಗಿ 80 ಜನರ ಆಯ್ಕೆಯಾಗಿದೆ. ಈ ಪಟ್ಟಿಯಲ್ಲಿ 15 ಹೆಸರಗಳನ್ನು ತೆಗೆಯುವ ಕಸರತ್ತು ನಡೆದಿದ್ದು, ಮೈಸೂರು ದಸರಾ ಮುಗಿದ ಬಳಿಕ...
ಹೆಚ್ಚಿನ ಸುದ್ದಿ

ದಸರಾ ಮೆರವಣಿಗೆಗೆ ಚಾಲನೆ ನೀಡಿದ ಸಿಎಂ-ಕಹಳೆ ನ್ಯೂಸ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಮೈಸೂರು ಅರಮನೆ ಆವರಣದಲ್ಲಿರುವ ನಂದಿಧ್ವಜಕ್ಕೆ ಮಧ್ಯಾಹ್ನ 2:59ರಿಂದ 3:20ರ ಶುಭ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ ಎಂದರು....
ಹೆಚ್ಚಿನ ಸುದ್ದಿ

‘ಆಧಾರ್’ ನೊಂದಿಗೆ ಪಾನ್ ಕಾರ್ಡ್ ಲಿಂಕ್‌ ಆಗಿದೆಯಾ..? ಇಲ್ಲಿದೆ ಪರೀಕ್ಷಿಸುವ ಸುಲಭ‌ ವಿಧಾನ-ಕಹಳೆ ನ್ಯೂಸ್

ಕೇಂದ್ರ ಸರ್ಕಾರದ ಸೂಚನೆಯನ್ವಯ ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದೇ ಹೋದರೆ ದಂಡ ವಿಧಿಸುತ್ತೇವೆ ಎಂದು ಹೇಳಲಾಗಿತ್ತು. ಕೊರೊನಾದಿಂದಾಗಿ ಈ ಪ್ರಕ್ರಿಯೆಯ ಗಡುವನ್ನು ಈ ಹಿಂದೆ ಇದ್ದ 2020 ಜೂನ್‌ 30 ರ ಬದಲಾಗಿ 2021 ರ ಮಾರ್ಚ್‌ 31 ರ ವರೆಗೆ ವಿಸ್ತರಿಸಲಾಗಿದೆ. ಅನೇಕ ಜನ ಪಾನ್ ಕಾರ್ಡ್‌, ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಕೂಡ ಮಾಡಿದ್ದರೂ ಅದು ಆಗಿದೆಯೋ ಇಲ್ಲವೋ ಎಂಬ ಗೊಂದಲದಲ್ಲಿರುತ್ತಾರೆ. ಇದೀಗ...
ಹೆಚ್ಚಿನ ಸುದ್ದಿ

ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಸಮಸ್ಯೆಗೆ ಪರಿಹಾರ – ಕಹಳೆ ನ್ಯೂಸ್

ನವದೆಹಲಿ: ಈಗಂತೂ ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವುದು ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಅನಿವಾರ್ಯವೆನ್ನುವಂತಾಗಿದೆ. ಕೆಲವೊಮ್ಮೆ ಆಧಾರ್ ಕಾರ್ಡ್ ಗಳಲ್ಲಿ ಖಾಯಂ ವಿಳಾಸ ನೀಡಿದಾಗ ಸಮಸ್ಯೆಯಾಗುತ್ತದೆ. ಇನ್ನು ಮುಂದೆ ಆಧಾರ್ ಕಾರ್ಡ್ ಗೆ ಬಾಡಿಗೆ ಮನೆ ವಿಳಾಸ ಕೂಡ ನೀಡಬಹುದಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಬಾಡಿಗೆದಾರರ ವಿಳಾಸ ನವೀಕರಿಸಲು ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದ್ದು ಬಾಡಿಗೆ ಒಪ್ಪಂದ ಬಳಸಿಕೊಂಡು ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಿಸಬಹುದಾಗಿದೆ. ಬಾಡಿಗೆ...
ಹೆಚ್ಚಿನ ಸುದ್ದಿ

‘ಅನ್ಯಗ್ರಹ ಜೀವಿ’ಗಳು ಮನುಷ್ಯರ ಮೇಲೆ ಕಣ್ಣಿಟ್ಟಿವೆಯಂತೆ..!-ಕಹಳೆ ನ್ಯೂಸ್

ನವದೆಹಲಿ: ಇಷ್ಟು ದಿನಗಳ ಕಾಲ ಅನ್ಯಜೀವಿ ಗ್ರಹಗಳು ಇದ್ದವಾ? ಇಲ್ಲವಾ? ಎನ್ನುವ ಚರ್ಚೆ ನಡೆಯುತ್ತಿತ್ತು.ಅದ್ರೀಗ ಅವುಗಳ ಕುರಿತು ಹೊಸದೊಂದು ಸತ್ಯ ಹೊರ ಬಿದ್ದಿದ್ದು, ನಾವು ಅನ್ಯಜೀವಿ ಗ್ರಹಗಳನ್ನ ನೋಡದಿದ್ರು ಅವುಗಳು ನಮ್ಮನ್ನ ನೋಡುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಕಾರ್ಲ್ ಸಗನ್ ಇನ್ಸ್ಟಿಟ್ಯೂಟ್ನ ಯುನಿವರ್ಸಿಟಿಗಳ ಡೈರೆಕ್ಟರ್ ಹಾಗೂ ಕಾರ್ನೆಲ್ನ ಪ್ರೊಫೆಸರ್ ಆಫ್ ಅಸ್ಟ್ರಾನಮಿ ಆಗಿರುವ ಲಿಸಾ ಕಾಲ್ಟೆನೆಗರ್ ನೇತೃತ್ವದ ತಂಡ ಈ ಅಧ್ಯಯನವನ್ನು ಮಾಡಿದೆ. ಅಂದ್ಹಾಗೆ, ಇವ್ರು 1004 ನಕ್ಷತ್ರಗಳು ಇರುವಿಕೆಯನ್ನು...
ಹೆಚ್ಚಿನ ಸುದ್ದಿ

ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ದಾಳಿ ಹೀಗಿರುತ್ತೆ ನೋಡಿ-ಕಹಳೆ ನ್ಯೂಸ್

ಶ್ವಾಸಕೋಶದ ಮೇಲೆ ಕೊರೊನಾ ದಾಳಿ ಮಾಡುತ್ತೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೆ. ಆದರೆ ಯಾವ ರೀತಿಯಲ್ಲಿ ವೈರಸ್ ದಾಳಿ ಮಾಡುತ್ತೆ ಅನ್ನೋದು ವೈದ್ಯಲೋಕಕ್ಕೆ ಇನ್ನೂ ಸವಾಲಾಗಿ ಉಳಿದಿರೋ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಸಲುವಾಗಿ ಕೃತಕ ಶ್ವಾಸಕೋಶವನ್ನ ಸೃಷ್ಟಿಸಿ ಅದರ ಮೇಲೆ ಕೊರೊನಾ ವೈರಸ್ ಹೇಗೆ ದಾಳಿ ಮಾಡುತ್ತೆ ಅನ್ನೋದನ್ನ ಪರಿಶೀಲಿಸಿದ್ದಾರೆ. ದಕ್ಷಿಣ ಕೊರಿಯಾ ಹಾಗೂ ಯುಕೆಯ ಸಂಶೋಧಕರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ಜೊತೆಗೂಡಿ ಇಂತಹದ್ದೊಂದು ಅನ್ವೇಷಣೆ...
1 154 155 156 157 158 174
Page 156 of 174