ವಿದೇಶದಿಂದ ದೇಣಿಗೆ: ಗೃಹ ಸಚಿವಾಲಯದ ಕಠಿಣ ನಿಯಮ – ಕಹಳೆ ನ್ಯೂಸ್
ನವದೆಹಲಿ : ವಿದೇಶದಿಂದ ದೇಣಿಗೆ ಸಂಗ್ರಹ ಮಾಡುವ ಸರ್ಕಾರೇತರ ಸಂಸ್ಥೆ(NGO)ಗಳ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕುತ್ತಿದೆ. NGOಗಳ ಮೇಲೆ ಗೃಹ ಸಚಿವಾಲಯದ ಕಠಿಣ ನಿಯಮಗಳನ್ನು ಹೇರುತ್ತಿದೆ. ವಿದೇಶದಿಂದ ದೇಣಿಗೆ ಪಡೆಯಲು ಎನ್ಜಿಒಗಳು ಕನಿಷ್ಠ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರಬೇಕಾಗುತ್ತದೆ. ಈ ಬಗ್ಗೆ ವಿದೇಶಿ ನಿಯಂತ್ರಣ ಕಾಯ್ದೆಯಡಿ(FCRA) ನೋಂದಣಿ ಅಗತ್ಯ. ಜೊತೆಗೆ ಈ ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ 15 ಲಕ್ಷ ರೂಪಾಯಿಗಳನ್ನು ಸಾಮಾಜಿಕ ಚಟುವಟಿಕೆಗೆ ಬಳಸಿರುವುದಕ್ಕೆ ದಾಖಲೆ ಹೊಂದಿರಬೇಕಾಗುತ್ತದೆ....







