ನ.27ರಿಂದ ಪಾವಂಜೆ ನೂತನ ಮೇಳದ ತಿರುಗಾಟ ಆರಂಭ – ಕಹಳೆ ನ್ಯೂಸ್
ಪಾವಂಜೆ: ಯಕ್ಷಗಾನದ ಮೇಳ ಪರಂಪರೆಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಪಾವಂಜೆಯ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಮೇಳದ ತಿರುಗಾಟ ಆರಂಭವು ನ. 27 ರಂದು ಜರಗಲಿದೆ. ಪಾಂಡವಶ್ವಾಮೇಧ ಪ್ರಸಂಗದ ಮೂಲಕ ನೂತನ ಮೇಳವು ಮುಂದಿನ 6 ತಿಂಗಳ ಪ್ರದರ್ಶನದಲ್ಲಿ ಮೇ 25 ರವರೆಗೆ ಈಗಾಗಲೇ 156 ಪ್ರದರ್ಶನ ಬುಕ್ಕಿಂಗ್ ಆಗಿದೆ. ಆರಂಭದ ವರ್ಷದಲ್ಲಿ 50 ಸಾವಿರ ರೂಪಾಯಿಯ ವೀಳ್ಯವನ್ನು ಪಡೆದು ಕೊಳ್ಳಲಾಗುವುದು ಎಂದು ಮೇಳದ ಸಂಚಾಲಕ ಹಾಗೂ...







