ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ನ್ಯೂಜಿಲೆಂಡ್ ಸಂಸದ – ಕಹಳೆ ನ್ಯೂಸ್
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‌ನ ಅತಿ ಕಿರಿಯರಲ್ಲಿ ಒಬ್ಬರಾದ ಮತ್ತು ನೂತನವಾಗಿ ಆಯ್ಕೆಯಾದ ಭಾರತ ಮೂಲದ ಸಂಸದ ಡಾ. ಗೌರವ್ ಶರ್ಮಾ ಬುಧವಾರ ದೇಶದ ಸಂಸತ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹಿಮಾಚಲಪ್ರದೇಶದ ಹಮಿರ್ಪುರದವರದ ಡಾ. ಗೌರವ್ ಶರ್ಮಾ (33) ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್ ವೆಸ್ಟ್‌ನಿಂದ ಲೇಬರ್ ಪಕ್ಷದ ಸಂಸದರಾಗಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಗೌರವ್ ಶರ್ಮಾ ಅವರು ಬುಧವಾರ ಎರಡು ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನ್ಯೂಜಿಲೆಂಡ್‌ನಲ್ಲಿನ ಭಾರತದ ಹೈಕಮಿಷನರ್ ಮುಕ್ತೇಶ್ ಪರ್ದೇಶಿ ಟ್ವಿಟ್ಟರ್‌ನಲ್ಲಿ ಈ ಮಾಹಿತಿ...







