ವಾಟ್ಸಾಪ್ ಪೇ ಮೂಲಕ ಹಣ ರವಾನೆ ಮಾಡುವುದು ಹೇಗೆ.? ಇಲ್ಲಿದೆ ಮಾಹಿತಿ – ಕಹಳೆ ನ್ಯೂಸ್
ಮಲ್ಟಿ ಮೀಡಿಯಾ ಸಂದೇಶ ಸೇವಾದಾರ ವಾಟ್ಸಾಪ್ ಇನ್ನು ಮುಂದೆ ತನ್ನ ಗ್ರಾಹಕರಿಗೆ ಡಿಜಿಟಲ್ ಹಣ ವರ್ಗವಣೆ ಮಾಡಲೆಂದು ನೂತನ ಸೌಲಭ್ಯ ಹೊರತಂದಿದೆ. ವಾಟ್ಸಾಪ್ ಪೇ ಕಿರು ತಂತ್ರಾಂಶ ಚಾಲ್ತಿಗೆ ಬಂದಿದ್ದು ಇನ್ನು ಮುಂದೆ ಎಸ್‌ಬಿಐ, ಐಸಿಐಸಿಐ, ಆಕ್ಸಿಸ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕುಗಳ ಗ್ರಾಹಕರು ಬಳಸಬಹುದಾಗಿದೆ. ಎರಡು ಕೋಟಿ ಬಳಕೆದಾರರ ಗರಿಷ್ಠ ಮಿತಿಯೊಂದಿಗೆ ಆರಂಭಿಸಿ, ಬರುವ ದಿನಗಳಲ್ಲಿ ಹಂತಹಂತವಾಗಿ ತನ್ನ ಯುಪಿಐ ನೆಲೆಯನ್ನು ಇನ್ನಷ್ಟು ವರ್ಧಿಸಿಕೊಳ್ಳುವ ಅವಕಾಶ ವಾಟ್ಸಾಪ್ ಪೇಗೆ ಇದ್ದು,...







