Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಶಾಲಾ-ಕಾಲೇಜು ಆರಂಭದ ಮೊದಲ ದಿನವೇ ತಿಪಟೂರಿನ ಸಿದ್ದರಾಮೇಶ್ವರ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿ ದುರ್ಮರಣ-ಕಹಳೆ ನ್ಯೂಸ್

ತುಮಕೂರು: ಕರೊನಾ ಸೋಂಕಿನ ಭೀತಿ ಕಾರಣದಿಂದ ಕಳೆದ ಮಾರ್ಚ್‍ನಲ್ಲಿ ಮುಚ್ಚಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಪುನಾರಂಭಗೊಂಡಿದೆ. ಆರಂಭದ ದಿನವೇ ವಿದ್ಯಾರ್ಥಿಯೊಬ್ಬ ದುರ್ಮರಣಕ್ಕೀಡಾದ ಘಟನೆ ತಿಪಟೂರು ತಾಲೂಕಿನ ಹೆಡಗರಹಳ್ಳಿ ಸಂಭವಿಸಿದೆ. ತಿಪಟೂರಿನ ಸಿದ್ದರಾಮೇಶ್ವರ ಕಾಲೇಜಿನ ಡಿಪ್ಲೊಮಾ  ವಿದ್ಯಾರ್ಥಿ ಶಶಾಂಕ್ (20) ಕಾಲೇಜಿಗೆ ಬರುತ್ತಿದ್ದ ಮಾರ್ಗಮಧ್ಯೆ ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಶಶಾಂಕ್ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯು ಚನ್ನರಾಯಪಟ್ಟಣ ತಾಲೂಕಿನ ಚೀಚಗೊಂಡನಹಳ್ಳಿ ಗ್ರಾಮದವ ಎಂದು ತಿಳಿದುಬಂದಿದೆ....
ಹೆಚ್ಚಿನ ಸುದ್ದಿ

ದೇಶದಾದ್ಯಂತ ಇಂದು ಹೊಸ ವರ್ಷದ ಸಂಭ್ರಮ; ನಾಡಿನ ಸಮಸ್ತ ಜನತೆಗೆ ಹೊಸ ವರ್ಷಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ-ಕಹಳೆ ನ್ಯೂಸ್

ನವದೆಹಲಿ: ದೇಶದಾದ್ಯಂತ 2021 ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಈ ಕಾರಣದಿಂದ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಹಾಗೆಯೇ ಎಲ್ಲರಿಗೂ 2021 ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದೊರೆಯಲಿ. ಭರವಸೆ ಹಾಗೂ ಸ್ವಾಸ್ಥ್ಯದ ಮನೋಭಾವ ಮೇಲುಗೈ ಸಾಧಿಸಲಿ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ. ಇದರಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಕೂಡ...
ಹೆಚ್ಚಿನ ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದವರಿಂದ ಕಡಬ ತಹಸೀಲ್ದಾರ್ ಮೂಲಕ ಗೃಹಸಚಿವರಿಗೆ ಮನವಿ – ಕಹಳೆ ನ್ಯೂಸ್

ಉಜಿರೆ: ದಿನಾಂಕ 30/12/2020 ರಂದು ಉಜಿರೆಯ ಮತ ಎಣಿಕೆ ಕೇಂದ್ರದಲ್ಲಿ S.D.P.I ಕಾರ್ಯಕರ್ತರು ದೇಶವಿರೋಧಿ ಘೋಷಣೆಯನ್ನು ಕೂಗಿದರು. ಈ ದೇಶವಿರೋಧಿ ಘೋಷಣೆಯನ್ನು ಖಂಡಿಸಿ ಆರೋಪಿಗಳ ಮತ್ತು ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಡಬ ತಹಸೀಲ್ದಾರ್ ಮೂಲಕ ಗೃಹಸಚಿವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದಿಂದ ಮನವಿ ಮಾಡಿದರು....
ಹೆಚ್ಚಿನ ಸುದ್ದಿ

ಟಿ.ವಿ ನೇರಪ್ರಸಾರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಅಮೇರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ -ಕಹಳೆ ನ್ಯೂಸ್

ವಾಷಿಂಗ್ಟನ್ : ಟಿವಿ ನೇರಪ್ರಸಾರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಆಫ್ರಿಕನ್-ಅಮೇರಿಕಾನ್ ಜನರಲ್ಲಿ ಲಸಿಕೆ ಅಭಿಯಾನದ ಬಗ್ಗೆ ಅಮೇರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರು ನಂಬಿಕೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ತಮ್ಮ ಮೊದಲ ಎರಡು ಡೋಸ್ ಲಸಿಕೆಯನ್ನು ವಾಂಷಿಗ್ಟಂನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ಕಮಲಾ ಹ್ಯಾರಿಸ್ ಹಾಕಿಸಿಕೊಂಡಿದ್ದಾರೆ. ಅಲ್ಲದೇ ಈ ಕುರಿತು ಮಾತನಾಡಿದ ಅವರು, ಆಫ್ರಿಕನ್-ಅಮೇರಿಕನ್ ಸಮುದಾಯವು ಕೊರೊನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ಮತ್ತು ಅನಾರೋಗ್ಯವನ್ನು ಕಂಡಿದ್ದು, ನಿಮ್ಮ...
ಹೆಚ್ಚಿನ ಸುದ್ದಿ

ಬಂದಾರು ಗ್ರಾಮ ಪಂಚಾಯತ್ ಮತ ಎಣಿಕೆಯ 2 ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಜಯ- ಕಹಳೆ ನ್ಯೂಸ್

ಬಂದಾರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು 2 ನೇ ವಾರ್ಡ್ ನಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ದಿನೇಶ್ ಗೌಡ ಖಂಡಿಗ 725, ಪರಮೇಶ್ವರಿ ಕೆ.ಪುಯಿಲ 693, ಸುಚಿತ್ರ ಮುರ್ತಾಜೆ 696, ಮತ್ತು ಪವಿತ್ರ ಕೋಡಂಗೆಕೋಡಿ 681 ಮತಗಳನ್ನು ಪಡೆದು ಅಭೂತಪೂರ್ವ ಜಯಗಳಿಸಿ ಹರೀಶ್ ಪೂಂಜ ಅವರ ಅಭಿವೃದ್ಧಿಗೆ ಜನ ಜೈ ಎಂದಿದ್ದಾರೆ....
ಹೆಚ್ಚಿನ ಸುದ್ದಿ

ಕೊಳ್ತಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶುಭಲತಾ ಮತ್ತು ಸುಂದರ ಪಿ.ಬಿಗೆ ಜಯ- ಕಹಳೆ ನ್ಯೂಸ್

ಕೊಳ್ತಿಗೆ : ಕೊಳ್ತಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಶುಭಲತಾ ಮತ್ತು ಸುಂದರ ಪಿ.ಬಿ ಜಯಗಳಿಸಿದ್ದಾರೆ.  ...
ಹೆಚ್ಚಿನ ಸುದ್ದಿ

ಚಂದ್ರದ್ರೋಣ ಗಿರಿಯಲ್ಲಿ ಶ್ರೀ ಗುರು ದತ್ತಾತ್ರೇಯರ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡ ನಳಿನ್ ಕುಮಾರ್ ಕಟೀಲ್ ಮತ್ತು ಹರೀಶ್ ಪೂಂಜ- ಕಹಳೆ ನ್ಯೂಸ್

ಚಂದ್ರದ್ರೋಣ ಗಿರಿಯಲ್ಲಿ ಶ್ರೀ ಗುರು ದತ್ತಾತ್ರೇಯರ ಕ್ಷೇತ್ರದಲ್ಲಿ ದತ್ತಾತ್ರೇಯ ಜಯಂತಿಯ ಆಚರಿಸಲಾಯಿತು. ಈ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಪೂಜಾ ಕೈಂಕರ್ಯಗಳಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಹರೀಶ್ ಪೂಂಜ ಸೇರಿದಂತೆ ಹಲವಾರು ಗಣ್ಯರು ಶ್ರೀ ಗುರು ದತ್ತಾತ್ರೇಯರ ಪಾದುಕೆಯ ದರ್ಶನ ಪಡೆದು ಈ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.  ...
ಹೆಚ್ಚಿನ ಸುದ್ದಿ

ಬಂದಾರು ಗ್ರಾಮ ಪಂಚಾಯತ್ ಮತ ಎಣಿಕೆಯ 1 ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ – ಕಹಳೆ ನ್ಯೂಸ್

ಬಂದಾರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು 1 ನೇ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬೆಂಬಲಿತ ಅಭ್ಯರ್ಥಿಗಳಾದ ಅಭ್ಯರ್ಥಿಗಳಾದ ಚೇತನ್ ಕುಮಾರ್ 423 ವಿಮಲ 392, ಮತ್ತು ಪುಷ್ಪಾವತಿ 414 ಮತಗಳನ್ನು ಪಡೆದು ಜಯಗಳಿಸಿದ್ದಾರೆ....
1 120 121 122 123 124 174
Page 122 of 174