ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಅವಶ್ಯಕವಾಗಿ ಇರಬೇಕು; ಈಶ್ವರ ನಾಯಕ್-ಕಹಳೆ ನ್ಯೂಸ್
ಬೆಟ್ಟಂಪಾಡಿ : ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಅವಶ್ಯಕವಾಗಿ ಇರಬೇಕು ಎಂದು ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಟುಕುಕ್ಕೆಯ ರಾಜ್ಯಶಾಸ್ತ್ರ ಉಪನ್ಯಾಸಕರಾದ ಲೆಫ್ಟಿನೆಂಟ್ ಈಶ್ವರ ನಾಯಕ್ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ' ರಾಷ್ಟ್ರೀಯ ಮತದಾರರ ಸಾಕ್ಷರತಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿರು. ಮತದಾನದ ಹಕ್ಕು ಹೊಂದಿರುವ ಪ್ರಜೆಗಳು ಮತದಾನದ ಹಕ್ಕನ್ನು ಚಲಾಯಿಸುವುದರ ಜೊತೆಗೆ ಮತದಾನದ ಗೌಪ್ಯತೆಯನ್ನು ಕೂಡ ಕಾಪಾಡುವ...







